ತಿರುವನಂತಪುರಂ: ಹಿಜಾಬ್ ಧರಿಸುವ ವಿಚಾರ ದೇಶದಲ್ಲಿ ಆಗಾಗ ಸುದ್ದಿಯಲ್ಲಿರುತ್ತದೆ. ಹಿಜಾಬ್ ವಿಚಾರ ಕರ್ನಾಟಕದಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದು ಗೊತ್ತೇ ಇದೆ. ಇದೀಗ ಮತ್ತೊಮ್ಮೆ ಹಿಜಾಬ್ ಬಗ್ಗೆ ಚರ್ಚೆ ಆರಂಭವಾಗಿದೆ. ಈ ಬಾರಿ ಅದು ಕೇರಳದಲ್ಲಿ.
ಕೇರಳದ ತಿರುವನಂತಪುರಂನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನ ಏಳು ಮುಸ್ಲಿಂ ವಿದ್ಯಾರ್ಥಿಗಳು ಧಾರ್ಮಿಕ ಧಿರಿಸಾಗಿರುವ ಹಿಜಾಬ್ ನ್ನು ಆಪರೇಷನ್ ಥಿಯೇಟರ್ ನಲ್ಲೂ ಧರಿಸಲು ಅವಕಾಶ ನೀಡಬೇಕೆಂದು ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ:Congress ಸರ್ಕಾರದ ಆರನೇ ಗ್ಯಾರಂಟಿ ʼಕಾಸಿಗಾಗಿ ಪೋಸ್ಟಿಂಗ್ʼ: ಎಚ್ ಡಿ ಕುಮಾರಸ್ವಾಮಿ ಟೀಕೆ
ತಮ್ಮ ಧಾರ್ಮಿಕ ನಂಬಿಕೆಗಳ ಭಾಗವಾಗಿರುವ ಹಿಜಾಬ್ ಧಿರಿಸನ್ನು ಎಲ್ಲಾ ಸಮಯದಲ್ಲೂನಾವು ಹಾಕಿಕೊಳ್ಳುತ್ತೇವೆ. ಆಪರೇಷನ್ ಥಿಯೇಟರ್ ನಲ್ಲಿ ಮಾತ್ರ ಹಿಜಾಬ್ ಧರಿಸಲು ಅವಕಾಶವಿಲ್ಲ. ಹಿಜಾಬ್ ಧಿರಿಸನ್ನು ಧರಿಸಲು ಅವಕಾಶ ನೀಡಿ, ಅದು ಸಾಧ್ಯವಾಗದಿದ್ದರೆ ಪರ್ಯಾಯವಾಗಿ ನಮಗೆ ಉದ್ದನೆಯ ತೋಳಿನ ಸ್ಕ್ರಬ್ ಜಾಕೆಟ್ ಮತ್ತು ಸರ್ಜಿಕಲ್ ಹುಡ್‌ಗಳನ್ನು ಧರಿಸಲು ಅವಕಾಶ ನೀಡಿಯೆಂದು ಕಾಲೇಜಿನ ಪ್ರಿನ್ಸ್ ಪಾಲ್ ಸೇರಿದಂತೆ ಆಡಳಿತ ಮಂಡಳಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
ಈ ಬಗ್ಗೆ ಸರ್ಜನ್ ಗಳು ಹಾಗೂ ಸೋಂಕು ನಿಯಂತ್ರಣ ತಂಡದ ಸಭೆ ಕರೆದು ಚರ್ಚಿಸುತ್ತೇವೆ. ವಿದ್ಯಾರ್ಥಿಗಳು ಸಲ್ಲಿಸಿರುವ ಮನವಿಯನ್ನು ಸಭೆ ನಡೆಸಿ ನಿರ್ಧರಿಸಲಿ ದ್ದೇವೆ ಎಂದು ಕಾಲೇಜಿನ ಪ್ರಾಂಶುಪಾಲರು ಹೇಳಿದ್ದಾರೆ.