Advertisement

ಲಕ್ನೋ: ಮಂಟಪದಲ್ಲೇ ಅಪ್ಪನ 5ನೇ ಮದುವೆ ತಡೆದ ಮಕ್ಕಳು!

10:28 PM Sep 02, 2022 | Team Udayavani |

ಲಕ್ನೋ: ಕೆಲವೊಂದು ಘಟನೆಗಳು ಕೇವಲ ಸಿನಿಮಾದಲ್ಲಿ ನಡೆಯುತ್ತವೆ ಅಂದುಕೊಂಡಿರುತ್ತೇವೆ. ಇಂತಹ ಸಿನಿಮಾಗಳು ನಿಜಜೀವನವನ್ನು ಆಧರಿಸಿಯೇ ಸಿದ್ಧವಾಗಿರುತ್ತವೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ.

Advertisement

ಉತ್ತರಪ್ರದೇಶದ ಸೀತಾಪುರದ ಕೋಟ್‌ ಕೋಜಿಯಾರೆಯಲ್ಲಿ ಶಫಿ ಅಹ್ಮದ್‌ 5ನೇ ಮದುವೆ ಮಾಡಿಕೊಳ್ಳಲು ಮುಂದಾಗಿದ್ದ. ಇನ್ನೇನು ಮದುವೆಯಾಗಬೇಕೆನ್ನುವಾಗ ಹಿಂದಿನ ನಾಲ್ವರು ಪತ್ನಿಯರ ಮಕ್ಕಳು ಬಂದು ಸ್ಥಳದಲ್ಲಿ ಗಲಾಟೆ ಮಾಡಿದ್ದಾರೆ. ಜನರಿಗೆ ವಿಷಯ ಗೊತ್ತಾದ ತಕ್ಷಣ 55 ವರ್ಷದ ಶಫಿಗೆ ಚೆನ್ನಾಗಿ ಬಾರಿಸಿದ್ದಾರೆ. ಈ ಗಲಾಟೆಯಲ್ಲಿ 5ನೇ ಮದುವೆಗೆ ಸಿದ್ಧವಾಗಿದ್ದ ವಧು ಪರಾರಿಯಾಗಿದ್ದಾಳೆ!

ಶಫಿ ಅಹ್ಮದ್‌ ಮಕ್ಕಳನ್ನು ಸಾಕುತ್ತಿರಲಿಲ್ಲ. ಹಾಗೆಯೇ ಹಿಂದೆ ನಾಲ್ಕು ಬಾರಿ ಮದುವೆಯಾಗಿದ್ದಾನೆನ್ನುವುದೂ ಮಕ್ಕಳಿಗೆ ಗೊತ್ತಿರಲಿಲ್ಲ. ಸದ್ಯ ಶಫಿ ಬಂಧನದಲ್ಲಿದ್ದಾನೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next