Advertisement

ಬೀದರ ಡಿಸಿಸಿ ಬ್ಯಾಂಕ್‌ಗೆ 7.77 ಕೋಟಿ ಲಾಭ

10:37 AM Oct 31, 2021 | Team Udayavani |

ಬೀದರ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ 2020-21ನೇ ಸಾಲಿನಲ್ಲಿ 7.77 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು.

Advertisement

ನಗರದ ಡಿಸಿಸಿ ಬ್ಯಾಂಕ್‌ನ ಸಭಾಂಗಣದಲ್ಲಿ ನಡೆದ ಬ್ಯಾಂಕ್‌ನ 99ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ವರ್ಷಕ್ಕೆ ಹೋಲಿಸಿದರೆ ಲಾಭದಲ್ಲಿ 60 ಲಕ್ಷ ರೂ. ನಷ್ಟು ಏರಿಕೆಯಾಗಿದೆ. ಬ್ಯಾಂಕ್‌ 3,590 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. ಹೂಡಿಕೆಗಳ ಮೊತ್ತ 822.54 ಕೋಟಿ ರೂ. ಆಗಿದೆ. ಆಡಿಟ್‌ನಲ್ಲಿ “ಎ’ ವರ್ಗದಲ್ಲಿದೆ ಎಂದು ತಿಳಿಸಿದರು.

ಕಳೆದ ವರ್ಷ 857 ಕೋಟಿ ರೂ. ಅಲ್ಪಾವಧಿ ಬೆಳೆ ಸಾಲ ವಿತರಣೆ ಗುರಿ ಹೊಂದಲಾಗಿತ್ತು. ಈ ಪೈಕಿ 840 ಕೋಟಿ ರೂ. ಸಾಲ ವಿತರಿಸಲಾಗಿದೆ. 20 ಕೋಟಿ ರೂ. ಮಧ್ಯಮಾವ ಕೃಷಿ ಸಾಲ ಹಾಗೂ ಸ್ವಸಹಾಯ ಗುಂಪುಗಳಿಗೆ 235 ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ ಅವರು, ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಬೆಳೆ ನೋಂದಣಿಯಲ್ಲಿ 2016 ರಿಂದಲೂ ಬ್ಯಾಂಕ್‌ ನಿರಂತರವಾಗಿ ದೇಶದಲ್ಲೇ ಮೊದಲ ಸ್ಥಾನದಲ್ಲಿ ಇದೆ. ಕಿಸಾನ್‌ ಕಾರ್ಡ್‌, ರುಪೆ ಕಾರ್ಡ್‌ ವಿತರಣೆ ಸೇರಿದಂತೆ ಡಿಜಿಟಲೀಕರಣ ಕಾರ್ಯದಲ್ಲೂ ಮುಂಚೂಣಿಯಲ್ಲಿ ಇದೆ ಎಂದರು.

ಹೊಸ ಸದಸ್ಯರಿಗೆ ಪ್ರತಿ ಎಕರೆಗೆ 10 ಸಾವಿರ ರೂ.ನಂತೆ 8 ಎಕರೆವರೆಗೆ ಗರಿಷ್ಠ 80 ಸಾವಿರ ರೂ. ಬೆಳೆ ಸಾಲ ವಿತರಿಸಲು ನಿರ್ಧರಿಸಲಾಗಿದೆ. ಹೊಸದಾಗಿ 12 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೋಂದಣಿ ಮಾಡಲಾಗಿದೆ. ಬೀದರನ ಓಲ್ಡ್‌ ಸಿಟಿ, ಹುಮನಾಬಾದನ ಹಳೆಯ ಪಟ್ಟಣ, ಬಸವಕಲ್ಯಾಣದ ಸಸ್ತಾಪುರ ಬಂಗ್ಲಾ, ಭಾಲ್ಕಿ ತಾಲೂಕಿನ ಕಣಜಿ ಹಾಗೂ ಔರಾದನ ಹಳೆಯ ಪಟ್ಟಣ ಸೇರಿ ಜಿಲ್ಲೆಯಲ್ಲಿ ಬ್ಯಾಂಕ್‌ನ ಐದು ಹೊಸ ಶಾಖೆಗಳನ್ನು ಆರಂಭಿಸಲು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಯುವ ರತ್ನ ಜತೆಗಿನ ಒಡನಾಟದ ಮೆಲುಕು…

Advertisement

ಬ್ಯಾಂಕ್‌ ಜಿಲ್ಲೆಯ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುತ್ತ ಬಂದಿದೆ. ಮುಂದೆಯೂ ರೈತರು, ಮಹಿಳೆಯರು, ಯುವಜನರು ಸೇರಿದಂತೆ ಸರ್ವರ ಏಳ್ಗೆಗೆ ಶ್ರಮಿಸಲಿದೆ ಎಂದು ತಿಳಿಸಿದರು. ನಿರ್ದೇಶಕರಾದ ಅಮರಕುಮಾರ ಖಂಡ್ರೆ, ರಾಚಪ್ಪ ಪಾಟೀಲ, ಬಸವರಾಜ ಹೆಬ್ಟಾಳೆ, ವಿಜಯಕುಮಾರ ಪಾಟೀಲ ಗಾದಗಿ, ಸಂಗಮೇಶ ಪಾಟೀಲ, ಮಹಮ್ಮದ್‌ ಸಲಿಮೊದ್ದಿನ್‌, ಜಗನ್ನಾಥರೆಡ್ಡಿ ಎಖ್ಖೆಳ್ಳಿ, ಪರಮೇಶ್ವರ ಮುಗಟೆ, ಸಂಜಯಸಿಂಗ್‌ ಹಜಾರಿ, ಶರಣಪ್ಪ ಕನ್ನಾಳೆ, ಬಸವರಾಜ ಗೌಣೆ, ಶಿವಶರಣಪ್ಪ ತಗಾರೆ, ಹನುಮಂತರಾವ್‌ ಪಾಟೀಲ, ಸಿಇಒ ಮಹಾಜನ್‌ ಮಲ್ಲಿಕಾರ್ಜುನ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಸಂಗಮ ಭೀಮರಾವ್‌, ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕ ಚನ್ನಬಸಯ್ಯ ಸ್ವಾಮಿ, ಸಹಾಯಕ ಉಪ ಪ್ರಧಾನ ವ್ಯವಸ್ಥಾಪಕ ಬಸವರಾಜ ಕಲ್ಯಾಣಿ, ಪ್ರಧಾನ ವ್ಯವಸ್ಥಾಪಕ ವಿಠuಲರೆಡ್ಡಿ ಯಡಮಲ್ಲೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next