Advertisement

ವೃತ್ತಿಪರ ವಿದ್ಯಾರ್ಥಿಗಳಿಗೆ ಶುಲ್ಕ ಮನ್ನಾ 

11:55 PM Sep 20, 2021 | Team Udayavani |

ಚೆನ್ನೈ: ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ತಮಿಳುನಾಡು ಸರಕಾರ ಬಂಪರ್‌ ಗಿಫ್ಟ್ ಘೋಷಿಸಿದೆ. ಸರ್ಕಾರಿ ಶಾಲೆಗಳಲ್ಲಿ ಓದಿದವರಿಗೆ ಇರುವ ಶೇ. 7.5ರಷ್ಟು ಮೀಸಲಾತಿ ಅನ್ವಯ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಸೇರ್ಪಡೆಗೊಂಡಿರುವ ವಿದ್ಯಾರ್ಥಿಗಳ ಶಿಕ್ಷಣ ವೆಚ್ಚವನ್ನು ರಾಜ್ಯ ಸರಕಾರವೇ ಭರಿಸುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಘೋಷಿಸಿದ್ದಾರೆ.

Advertisement

ಅಣ್ಣಾ ವಿವಿಯ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಸರ್ಕಾರಿ ಶಾಲೆ ಕೋಟಾದಡಿ ದಾಖಲಾಗಿರುವ ವಿದ್ಯಾರ್ಥಿಗಳಿಗೆ “ಸೀಟು ಹಂಚಿಕೆ ಪ್ರಮಾಣ ಪತ್ರ’ವನ್ನು ವಿತರಿಸಿ ಮಾತನಾಡಿದ ಸ್ಟಾಲಿನ್‌,  ವಿದ್ಯಾರ್ಥಿಗಳ ಕೌನ್ಸೆಲಿಂಗ್‌, ಟ್ಯೂಷನ್‌, ಹಾಸ್ಟೆಲ್‌ ಶುಲ್ಕಗಳನ್ನು ಸರಕಾರವೇ ಭರಸಲಿದೆ ಎಂದಿದ್ದಾರೆ. ಇದರಿಂದ, 10,350 ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.

ಸದ್ಯದಲ್ಲೇ ಅವರ ತರಗತಿಗಳು ಆರಂಭಗೊಳ್ಳಲಿವೆ. ಇದಲ್ಲದೆ, ಸದ್ಯದಲ್ಲೇ 350 ವಿದ್ಯಾರ್ಥಿಗಳು ಕೃಷಿ, ಮೀನು ಸಾಕಾಣಿಕೆ ಹಾಗೂ ಕಾನೂನು ವ್ಯಾಸಂಗಕ್ಕೆ ಇದೇ ಕೋಟಾದಡಿ ಸೇರಲಿದ್ದಾರೆ. ಇವರೆಲ್ಲರಿಗೂ ಸರಕಾರದ ಸವಲ ತ್ತಿನಿಂದ ಪ್ರಯೋಜನವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next