Advertisement

Earthquake: ನ್ಯೂಜಿಲೆಂಡ್‌ ನಲ್ಲಿ 7.2 ತೀವ್ರತೆಯ ಪ್ರಬಲ ಭೂಕಂಪ

10:40 AM Apr 24, 2023 | Team Udayavani |

ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ ನಲ್ಲಿ ಸೋಮವಾರ (ಏ.24 ರಂದು) 7.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿರುವುದು ವರದಿಯಾಗಿದೆ.

Advertisement

ನ್ಯೂಜಿಲೆಂಡ್ ಸಮೀಪದ ಕೆರ್ಮಾಡೆಕ್ ದ್ವೀಪಗಳ ಪ್ರದೇಶದಲ್ಲಿ ಸೋಮವಾರ  ಮುಂಜಾನೆ ಭಾರತೀಯ ಕಾಲಮಾನದ ಪ್ರಕಾರ 6:11 ಗಂಟೆಗೆ ಭೂಕಂಪ ಸಂಭವಿಸಿದೆ.

7.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ತಿಳಿಸಿದೆ.

ಭೂಕಂಪವು 10 ಕಿಮೀ ಆಳದಲ್ಲಿ ಸಂಭವಿಸಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಭೂಕಂಪದ ನಂತರ ಯುಎಸ್‌ ಸುನಾಮಿ ಎಚ್ಚರಿಕೆ ಸಿಸ್ಟಂನಿಂದ ಸುನಾಮಿ ಅಪಾಯದ ಮುನ್ಸೂಚನೆಯನ್ನು ನೀಡಲಾಗಿದೆ.

Advertisement

ಕಳೆದ ತಿಂಗಳು, ರಿಕ್ಟರ್ ಮಾಪಕದಲ್ಲಿ 7.1 ಅಳತೆಯ ಭೂಕಂಪವು ಕೆರ್ಮಾಡೆಕ್ ದ್ವೀಪಕ್ಕೆ ಅಪ್ಪಳಿಸಿತು.

ಸದ್ಯ ಭೂಕಂಪದಿಂದ ಯಾವುದೇ ಸಾವು ನೋವು ಆದ ಬಗ್ಗೆ ವರದಿಯಾಗಿಲ್ಲ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next