Advertisement

USA 6ನೇ ಭಾರತೀಯ ವ್ಯಕ್ತಿಯ ಸಾವು; ಹೆಚ್ಚುತ್ತಲಿದೆ ಹತ್ಯೆಯ ಭೀತಿ

12:37 AM Feb 11, 2024 | Vishnudas Patil |

ವಾಷಿಂಗ್ಟನ್‌: ಅಮೆರಿಕದಲ್ಲಿ ಭಾರತೀಯರ ಮೇಲಿನ ದಾಳಿಗಳು ಆತಂಕ ಹೆಚ್ಚಿಸಿರುವ ನಡುವೆಯೇ ಇದೀಗ ಮತ್ತೂಬ್ಬ ಭಾರತೀಯ ಮೂಲದ ಐಟಿ ಉದ್ಯಮಿ ಮೃತಪಟ್ಟಿರುವುದು ವರದಿಯಾಗಿದೆ. ಇದು ಕಳೆದೆರಡು ತಿಂಗಳಲ್ಲಿ ವರದಿಯಾಗಿರುವ 6ನೇ ಭಾರತೀಯ ವ್ಯಕ್ತಿಯ ಸಾವಿನ ಪ್ರಕರಣವಾಗಿದೆ.

Advertisement

ಮೃತ ವ್ಯಕ್ತಿಯನ್ನು ವಿವೇಕ್‌ ತನೇಜಾ ಎಂದು ಗುರುತಿಸಲಾಗಿದ್ದು ಈತ ವಾಷಿಂಗ್ಟನ್‌ ಡಿ.ಸಿ.ಯ ಅಲೆಕ್ಸಾಂಡ್ರಿಯಾದ ನಿವಾಸಿಯಾಗಿದ್ದರು. ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳಿಗೆ ತಂತ್ರಜ್ಞಾನ ಪರಿಹಾರಗಳನ್ನು ಒದಗಿಸುವ ಡೈನಮೋ ಟೆಕ್ನಾಲಜೀಸ್‌ ಸಹ ಸಂಸ್ಥಾಪಕರಾಗಿದ್ದರು. ವಿವೇಕ್‌ ಫೆ.2ರಂದು ರೆಸ್ಟೋರೆಂಟ್‌ ಒಂದಕ್ಕೆ ತರಳಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬನೊಂದಿಗೆ ಜಗಳವಾಗಿದ್ದು, ಆತ ಮಾರಣಾಂತಿಕ ದಾಳಿ ನಡೆಸಿದ್ದರಿಂದ ವಿವೇಕ್‌ ಆಸ್ಪತ್ರೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೇ ಗುರುವಾರ ಮೃತಪಟ್ಟಿದ್ದಾರೆ. ಪ್ರಕರಣ ಸಂಬಂಧಿಸಿದಂತೆ ಇದು ವರೆಗೆ ಯಾವುದೇ ಬಂಧನವಾಗಿಲ್ಲ.

ಕಳೆದವಾರ ಲಿಥೋನಿಯಾ ಎಂಬಲ್ಲಿ ಹೈದರಾಬಾದ್‌ ಮೂಲದ ವಿದ್ಯಾರ್ಥಿ ಸಯ್ಯದ್‌ ಮಜರ್‌ ಅಲಿ ಮೇಲೆ ನಾಲ್ವರು ದುಷ್ಕರ್ಮಿಗಳು ದಾಳಿ ನಡೆಸಿದ್ದರು.

ವಿವೇಕ್‌ ಸೈನಿ ಎಂಬ ಭಾರತೀಯ ವಿದ್ಯಾರ್ಥಿಯನ್ನು ನಿವಾಸರಹಿತ ವ್ಯಕ್ತಿಯೊಬ್ಬ ಥಳಿಸಿ ಕೊಂದಿದ್ದ

ನೀಲ್‌ ಆಚಾರ್ಯ, ಅಕುಲ್‌ ಬಿ.ಧವನ್‌, ಶ್ರೇಯಸ್‌ ರೆಡ್ಡಿ, ಸಮೀರ್‌ ಕಾಮತ್‌ ಎಂಬ ಭಾರತೀಯ ಮೂಲದ ವಿದ್ಯಾರ್ಥಿಗಳೂ ವಾರಗಳ ಅಂತರದಲ್ಲಿ ಮೃತಪಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next