Advertisement

ರಾಸುಗಳಿಗೆ ಚರ್ಮಗಂಟು: 69 ಸಾವಿರ ಲಸಿಕೆಗಳನ್ನು ನೀಡಲಾಗಿದೆ: ಸಚಿವ ಪ್ರಭು ಚೌವ್ಹಾಣ್‌

09:56 PM Dec 21, 2022 | Team Udayavani |

ಸುವರ್ಣವಿಧಾನಸೌಧ: ರೈತರ ರಾಸುಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ರಾಜ್ಯದಲ್ಲಿ ಪ್ರಸ್ತುತ 69 ಸಾವಿರ ಲಸಿಕೆಗಳನ್ನು ನೀಡಲಾಗಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್‌ ಹೇಳಿದರು.

Advertisement

ಬುಧವಾರ ವಿಧಾನ ಪರಿಷತ್ತಿನಲ್ಲಿ ಪ್ರಶ್ನೊತ್ತರ ವೇಳೆ ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ರಾಜ್ಯದಲ್ಲಿ 4212 ಪಶು ವೈದ್ಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಸಂಚಾರಿ ಚಿಕಿತ್ಸಾಲಯಗಳು ಕೂಡ ಅಗತ್ಯ ಔಷಧಿಗಳನ್ನು ರಾಸುಗಳಿಗೆ ನೀಡುತ್ತಿವೆ. ಇದಕ್ಕಾಗಿ 1262 ಲಕ್ಷ ರೂ. ಹಾಗೂ ಜಿಲ್ಲಾ ಪಂಚಾಯಿತಿ ಶೀರ್ಷಿಕೆ ಅಡಿ 5439 ಲಕ್ಷ ರೂ.ಗಳನ್ನು ಒದಗಿಸಲಾಗಿದೆ ಎಂದರು.

ಚರ್ಮಗಂಟು ಖಾಯಿಲೆ ಉಲ್ಬಣಗೊಂಡಿದ್ದು, ಪಶು ವೈದ್ಯಕೀಯ ಆಸ್ಪತ್ರೆಗಳ ಕಟ್ಟಡಗಳ ಅಭಿವೃದ್ಧಿಗೆ ಏನು ಮಾಡಿದ್ದಿರಿ ಎಂದು ಜೆಡಿಎಸ್‌ನ ಭೋಜೆಗೌಡ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಚೌವ್ಹಾಣ್‌, 250 ಹೊಸ ಕಟ್ಟಡಗಳನ್ನು ಕಟ್ಟಲಾಗುತ್ತಿದೆ. ಕೆಲವಷ್ಟು ಶಿಥಿಲಗೊಂಡಿದ್ದು ಅವುಗಳ ಅಭಿವೃದ್ಧಿಗೂ ಕ್ರಮ ವಹಿಸಲಾಗುತ್ತಿದೆ. 400 ವೈದ್ಯರನ್ನು ನೇಮಕ ಮಾಡಿ ಇನ್ನಷ್ಟು ಪರಿಣಾಮಕಾರಿಯಾಗಿ ರಾಸುಗಳ ರಕ್ಷಣೆಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next