Advertisement

ಜೆಇಇ ಅಗ್ರ 100 ವಿದ್ಯಾರ್ಥಿಗಳ ಪೈಕಿ 69 ಮಂದಿಗೆ ಬಾಂಬೆ ಐಐಟಿಯಲ್ಲಿ ಸ್ಥಾನ!

08:15 PM Sep 24, 2022 | Team Udayavani |

ನವದೆಹಲಿ: ಬಾಂಬೆ ಐಐಟಿಯಲ್ಲಿ ಪದವಿಗೆ ಸೇರಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಈ ವರ್ಷವೂ ಏರಿದೆ. ಉನ್ನತ ಜೆಇಇ (ಜಂಟಿ ಪ್ರವೇಶ ಪರೀಕ್ಷೆ) ಪರೀಕ್ಷೆಯಲ್ಲಿ ಅಗ್ರ 100 ಸ್ಥಾನ ಪಡೆದ ವಿದ್ಯಾರ್ಥಿಗಳ ಪೈಕಿ 69 ಮಂದಿಗೆ ಅಲ್ಲೇ ಸ್ಥಾನ ಸಿಕ್ಕಿದೆ!

Advertisement

ಬಾಕಿ 28 ಮಂದಿಗೆ ದೆಹಲಿ ಐಐಟಿಯಲ್ಲಿ, ಮೂವರಿಗೆ ಮದ್ರಾಸ್‌ ಐಐಟಿಯಲ್ಲಿ ಸ್ಥಾನ ಸಿಕ್ಕಿದೆ. ಅಗ್ರ 100 ಮಂದಿಯಲ್ಲಿ 93 ಮಂದಿ ಮೊದಲ ಆಯ್ಕೆಯಾಗಿ ಬಾಂಬೆ ಐಐಟಿಯನ್ನೇ ಪರಿಗಣಿಸಿದ್ದರು. ಕಳೆದ ವರ್ಷ 62 ಮಂದಿಗೆ ಬಾಂಬೆ ಐಐಟಿಯಲ್ಲಿ ಸ್ಥಾನ ಸಿಕ್ಕಿತ್ತು.

2022, ಆ.28ರಂದು ನಡೆದ ಜೆಇಇ ಅಡ್ವಾನ್ಸ್‌ ಪರೀಕ್ಷೆಯಲ್ಲಿ 1,55,538 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದರಲ್ಲಿ 40,712 ವಿದ್ಯಾರ್ಥಿಗಳು ಅರ್ಹತೆ ಗಳಿಸಿದ್ದರು. ದೇಶದಲ್ಲಿರುವ 23 ಐಐಟಿಗಳಲ್ಲೇ ಒಟ್ಟು 16,598 ಸ್ಥಾನಗಳನ್ನು ಭರ್ತಿ ಮಾಡಲು ಅವಕಾಶ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next