Advertisement

ಢಾಕಾ ಕೆಮಿಕಲ್ ಗೋದಾಮಿಗೆ ಬೆಂಕಿ: 69 ಬಲಿ, ಹಲವರು ಗಂಭೀರ

04:45 AM Feb 21, 2019 | Team Udayavani |

ಢಾಕಾ : ಭೀಕರ ಬೆಂಕಿ ಅವಘಡಕ್ಕೆ 69 ಜನರು ಬಲಿಯಾದ ಘಟನೆ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಬುಧವಾರ ರಾತ್ರಿ ನಡೆದಿದೆ. ಕೆಮಿಕಲ್ ಗೊದಾಮು, ಪ್ಲಾಸ್ಟಿಕ್ ಗೋದಾಮು ಸೇರಿದಂತೆ ಹಲವು ಕಟ್ಟಡಗಳಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. 

Advertisement

ಹಳೇ ಢಾಕಾದ ಚೌಕ್ ಬಾಜಾರ್ ಎಂಬ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದ್ದು, ಹಾಜೀ ವಾಹೀದ್ ಮ್ಯಾನ್ಶನ್‌ ಎಂಬ ಕಟ್ಟಡದಲ್ಲಿ ಬೆಂಕಿ ಆಕಸ್ಮಿಕ ನಡೆದು ನಾಲ್ಕು ಅಂತಸ್ತಿನ ಕಟ್ಟಡ ಹೊತ್ತಿ ಉರಿದಿದೆ. 

ಹಾಜೀ ವಾಹೀದ್ ಮ್ಯಾನ್ಶನ್‌ ನ ಕೆಳ ಮಹಡಿಯಲ್ಲಿರುವ ರಾಸಾಯನಿಕ ಗೋದಾಮಿನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ನಂತರ ಕಟ್ಟಡದ ಇತರ ಮಹಡಿಗಳಿಗೆ ಮತ್ತು ಸಮೀಪದ ಕಟ್ಟಡಗಳಿಗೂ ಬೆಂಕಿಯ ಕೆನ್ನಾಲಿಗೆ ಚಾಚಿದೆ. 

ಸುಮಾರು 69 ಜನರು ಈ ದುರ್ಘಟನೆ ಗೆ ಬಲಿಯಾಗಿದ್ದು, ಮೃತರ ಸಂಖ್ಯೆ ಹೆಚ್ಚುವ ಸಂಭವವಿದೆ ಎನ್ನಲಾಗಿದೆ. ಕಟ್ಟಡದಲ್ಲಿ ಇನ್ನೂ ಹಲವು ಜನರು ಸಿಲುಕಿರುವ ಸಾಧ್ಯತೆಯಿದ್ದು, ಅಗ್ನಿ ಶಾಮಕ ದಳದವರು ಬೆಂಕಿ ನಂದಿಸಲು ಮತ್ತು ಅಪಾಯದಲ್ಲಿ ಸಿಲುಕಿರುವ ರಕ್ಷಣೆಗೆ ಹರಸಾಹಸ ಪಡುತ್ತಿದ್ದಾರೆ . 

Advertisement

Udayavani is now on Telegram. Click here to join our channel and stay updated with the latest news.

Next