Advertisement

67ನೇ ವಾರ್ಷಿಕ ಗಣೇಶೋತ್ಸವ ಸಂಪನ್ನ; ಸ್ನೇಹ ಸಮ್ಮಿಲನ

02:46 PM Sep 25, 2021 | Team Udayavani |

ಮುಂಬಯಿ: ಜಿಎಸ್‌ಬಿ ಸೇವಾ ಮಂಡಲ ಮುಂಬಯಿ ಇದರ ಶ್ರೀಮಂತ ಗಣಪತಿ ಎಂದೇ ಪ್ರಸಿದ್ಧಿ ಪಡೆದ ಕಿಂಗ್‌ಸರ್ಕಲ್‌ನ 67ನೇ ವಾರ್ಷಿಕ ಗಣೇಶೋತ್ಸವವು ಐದು ದಿನಗಳ ಕಾಲ ನಡೆದು ಸಮಾಪ್ತಿಗೊಂಡಿದ್ದು, ಇದರ ಯಶಸ್ಸಿನ ಹಿನ್ನೆಲೆಯಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಸೆ. 18ರಂದು ಸಯಾನ್‌ನಲ್ಲಿರುವ ಮಂಡಲದ ಶ್ರೀ ಗುರುಗಣೇಶ ಪ್ರಸಾದ್‌ ಸಭಾಗೃಹದಲ್ಲಿ ನಡೆಯಿತು.

Advertisement

ಸೇವಾ ಮಂಡಲದ ಕಾರ್ಯಕಾರಿ ಮಂಡಳಿ, ಆಯೋಜನ ಸಮಿತಿ, ಸ್ವಯಂಸೇವಕರು, ಭಕ್ತರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತು. ಸೇವಾ ಮಂಡಲದ ಕಾರ್ಯದರ್ಶಿ ಶಿವಾನಂದ ಭಟ್‌ ಪ್ರಾರ್ಥನೆಗೈದರು. ಅಧ್ಯಕ್ಷತೆ ವಹಿಸಿದ್ದ ಗಣೇಶೋತ್ಸವ ಆಯೋಜನ ಸಮಿತಿಯ ಸಂಚಾಲಕ ಡಾ| ಭುಜಂಗ ಪೈ ಸ್ವಾಗತಿಸಿ, ಪ್ರಧಾನ ಅರ್ಚಕ ವಿಜಯ ಭಟ್‌ ನೇತೃತ್ವದಲ್ಲಿ ಮುಂಬಯಿ ಹಾಗೂ ಊರಿನ ವೈಧಿಕರು ಗಣೇಶೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ನನ್ನನ್ನು ಗಣೇಶೋತ್ಸವಕ್ಕೆ ಪ್ರಧಾನ ಸಂಚಾಲಕರನ್ನಾಗಿ ನಿಯುಕ್ತಿಗೊಳಿಸಿದಕ್ಕೆ ಸೇವಾ ಮಂಡಲದ ಕಾರ್ಯಕಾರಿ ಮಂಡಳಿ, ಸಹಕರಿಸಿದ ಸಹ ಸಂಚಾಲಕರಿಗೆ ಕೃತಜ್ಞತೆಗಳು ಎಂದರು.

ಸೇವಾ ಮಂಡಳದ ಅಧ್ಯಕ್ಷ ರಮೇಶ್‌ ಭಂಡಾರ್ಕರ್‌ ಅವರು ಉತ್ಸವಕ್ಕೆ ಸಹಕರಿಸಿದ ಸರ್ವ ಸಮಾಜ ಬಾಂಧವರು, ಸ್ವಯಂಸೇವಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಸಹ ಸಂಚಾಲಕ ಜಿ. ಡಿ. ರಾವ್‌ ಮಾತನಾಡಿ, ಸರಕಾರದ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿ ದ್ದೇವೆ. ಗಣೇಶೋತ್ಸವದ ಮಂಟ ಪದೊಳಗೆ ಅನೇಕ ಸ್ವಯಂಸೇವಕರಿಗೂ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ. ಆದ್ದರಿಂದ ಕಡಿಮೆ ಸಂಖ್ಯೆಯಲ್ಲಿ ಸ್ವಯಂ ಸೇವಕರು ಪಾಲ್ಗೊಂಡು ಅಚ್ಚುಕಟ್ಟಾಗಿ ಎಲ್ಲ ಸೇವೆಗಳನ್ನು ಮಾಡಿರುವುದು ಅಭಿನಂದನೀಯ ಎಂದು ಹೇಳಿದರು.

ಇದನ್ನೂ ಓದಿ:ಆರೋಗ್ಯ ಸೇವೆಗೆ ಸರ್ಕಾರ ಬದ್ಧ,ಅರೋಗ್ಯ ಸೇವಾ ಕೇಂದ್ರಗಳ ನಿರ್ಮಾಣಕ್ಕೆ ಆದ್ಯತೆ:ಸಿಎಂ ಬೊಮ್ಮಾಯಿ

ಸಹ ಸಂಚಾಲಕ ರಮೇಶ್‌ ಪ್ರಭು ಮಾತನಾಡಿ, ಸೇವಾ ಮಂಡಲವು ಶಿಸ್ತಿಗೆ ಹೆಸರಾಗಿದೆ. ಸರಕಾರದ ನಿಯಮಗಳಿಗೆ ಅನುಸಾರವಾಗಿ ಯಾವುದೇ ರೀತಿಯಲ್ಲಿ ಚ್ಯುತಿ ಬಾರದಂತೆ ಸರ್ವರೂ ಸಹಕರಿಸಿರುವುದು ಅಭಿಮಾನದ ವಿಷಯವಾಗಿದೆ ಎಂದು ಹೇಳಿ ಶುಭ ಹಾರೈಸಿದರು.

Advertisement

ಮಾಜಿ ಸಹ ಸಂಚಾಲಕ ಜಿ. ಜಿ. ಪ್ರಭು ಅವರು ಧನಸಂಗ್ರಹಕ್ಕಾಗಿ ಕೆಲವರ ಹೆಸರನ್ನು ಉಲ್ಲೇಖೀಸಿ ದೇವರ ಅನುಗ್ರಹ ಅವರ ಮೇಲೆ ಸದಾಯಿರಲಿ ಎಂದು ಪ್ರಾರ್ಥಿಸಿದರು. ಸತೀಶ್‌ ರಾಮ ನಾಯಕ್‌ ಅವರು ಸಲಹೆ-ಸೂಚನೆಗಳನ್ನು ನೀಡಿ ಸಹಕರಿಸಿದರು. ಟ್ರಸ್ಟಿ ಆರ್‌. ಜಿ. ಭಟ್‌ ಮಾತನಾಡಿ, ಗಣೇಶೋತ್ಸವಲ್ಲಿ ಪೂಜೆ, ಸೇವೆ ಸಲ್ಲಿಸಿದ ಭಕ್ತರಿಗೆ ಪ್ರಸಾದವನ್ನು ಅವರ ವಿಳಾಸಕ್ಕೆ ತಲುಪಿಸಲು ವಿಳಂಬವಾದರೂ ಹೆಚ್ಚಿನ ಪ್ರಯತ್ನಪಟ್ಟಿದ್ದೇವೆ ಎಂದರು.

ಕಾರ್ಯದರ್ಶಿ ಶಿವಾನಂದ ಭಟ್‌ ಮಾತನಾಡಿ, ಈ ವರ್ಷ ಕೊರೊನಾ ನಿಮಿತ್ತ ಸರಕಾರಿ ನಿಬಂಧನೆಗಳಿಂದ ಅಪಾರ ಭಕ್ತರಿಗೆ ತೊಂದ ರೆಯಾಗಿದೆ. ಮುಂದಿನ ವರ್ಷದ ಗಣೇಶೋತ್ಸವ ಸಂದರ್ಭದಲ್ಲಿ ಎಲ್ಲಾ ವಿಘ್ನಗಳು ದೂರವಾಗಿ ವಿಜೃಂಭಣೆಯಿಂದ ಜರಗುವಂತಾಗಲಿ ಎಂದು ಪ್ರಾರ್ಥಿಸಿ ಸರ್ವರಿಗೂ ವಂದಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next