Advertisement

ಕೋವಿಡ್ : 8 ಜಿಲ್ಲೆಯಲ್ಲಿ ಶೂನ್ಯ ಪ್ರಕರಣ |ರಾಜ್ಯದಲ್ಲಿಂದು 677 ಹೊಸ ಕೇಸ್ ಪತ್ತೆ

06:38 PM Sep 20, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿಂದು ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆಯ ಪ್ರಮಾಣ ಇಳಿಮುಖ ಕಂಡಿದ್ದು, ಸಾವಿನ ಸಂಖ್ಯೆ ಹೆಚ್ಚು ಇದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 677 ಹೊಸ ಪ್ರಕರಣಗಳು ವರದಿಯಾಗಿದ್ದು, 24 ಜನರು ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಸೆ.20) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.

Advertisement

ವರದಿಯಲ್ಲಿನ ಅಂಕಿ-ಅಂಶಗಳ ಪ್ರಕಾರ 1678 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ 14358 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ 0.60 % ಹಾಗೂ ಡೆತ್ ರೇಟ್ 3.54 % ಇದೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-0, ಬಳ್ಳಾರಿ-3, ಬೆಳಗಾವಿ-28, ಬೆಂಗಳೂರು ಗ್ರಾಮಾಂತರ-5, ಬೆಂಗಳೂರು ನಗರ-213, ಬೀದರ್-1, ಚಾಮರಾಜನಗರ-5, ಚಿಕ್ಕಬಳ್ಳಾಪುರ-0, ಚಿಕ್ಕಮಗಳೂರು-35, ಚಿತ್ರದುರ್ಗ-4, ದಕ್ಷಿಣ ಕನ್ನಡ-102, ದಾವಣಗೆರೆ-3, ಧಾರವಾಡ-5, ಗದಗ-2, ಹಾಸನ-37, ಹಾವೇರಿ-0, ಕಲಬುರಗಿ-3, ಕೊಡಗು-29, ಕೋಲಾರ-23, ಕೊಪ್ಪಳ-0, ಮಂಡ್ಯ-5, ಮೈಸೂರು-37, ರಾಯಚೂರು-0, ರಾಮನಗರ-0, ಶಿವಮೊಗ್ಗ-7, ತುಮಕೂರು-26, ಉಡುಪಿ-63, ಉತ್ತರ ಕನ್ನಡ-41, ವಿಜಯಪುರ-0, ಯಾದಗಿರಿ-0.

Advertisement

Udayavani is now on Telegram. Click here to join our channel and stay updated with the latest news.

Next