ಪಣಜಿ : ಕೋವಿಡ್ ಎರಡನೇಯ ಅಲೆ ಇನ್ನೂ ಮುಗಿದಿಲ್ಲ ಆದರೆ ವಿವಿಧ ಭಾಗಗಳಿಂದ ಗೋವಾ ದಾಬೋಲಿಂ ವಿಮಾನ ನಿಲ್ದಾಣ ಆಗಮಿಸುವ ವಿಮಾನಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ದಾಬೋಲಿಂ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿಮಾನ ಹಾರಾಟ ಆರಂಭಗೊಂಡಿರುವುದರಿಂದ ವಿಮಾನ ನಿಲ್ದಾಣವು ಹೆಚ್ಚಿನ ವಿಮಾನಗಳಿಂದ ತುಂಬಿರುವ ದೃಶ್ಯ ಕಂಡುಬಂದಿದೆ.
ಇದನ್ನೂ ಓದಿ : ಉಗ್ರರ ವಿರುದ್ಧ ಹೋರಾಡಲು ಹೊಸಪಡೆ ರಚನೆ: ತಾಲಿಬಾನ್ ಗೆ ಸಡ್ಡು ಹೊಡೆದ ಗವರ್ನರ್ ಸಲೀಮಾ!
ಈ ಬಗ್ಗೆ ಮಾಹಿತಿ ನೀಡಿದ ದಾಬೋಲಿಂ ವಿಮಾನ ನಿಲ್ದಾಣದ ಸಂಚಾಲಕ ಗಗನ್ ಮಲಿಕ್, ಏರ್ ಅರೇಬಿಯಾ ಶಾರಜಾಹ ದಿಂದ ಗೋವಾಕ್ಕೆ ಮಂಗಳವಾರ, ಗುರುವಾರ, ಶನಿವಾರ ಈ ಮೂರು ದಿನಗಳ ಕಾಲ ವಿಮಾನ ಹಾರಾಟ ನಡೆಸಲಿದೆ, ಜೂನ್ ತಿಂಗಳಲ್ಲಿ ಗೋವಾ ದಾಬೋಲಿಂ ವಿಮಾನ ನಿಲ್ದಾಣಕ್ಕೆ 356 ದೇಶೀಯ ವಿಮಾನಗಳು ಬಂದಿಳಿದಿದ್ದವು. ಈ ವಿಮಾನಗಳ ಮೂಲಕ 23,334 ಪ್ರವಾಸಿಗರು ಗೋವಾಕ್ಕೆ ಆಗಮಿಸಿದ್ದರು. ಜುಲೈ ತಿಂಗಳಲ್ಲಿ 725 ವಿಮಾನಗಳ ಮೂಲಕ 66230 ಪ್ರವಾಸಿಗರು ಗೋವಾಕ್ಕೆ ಆಗಮಿಸಿದ್ದಾರೆ ಎಂದು ಹೇಳಿದ್ದಾರೆ.
ಗೋವಾಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನವಹಿಸಲಾಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ : ಸದ್ಯದಲ್ಲೇ KGF ಬಳಿ ತಲೆ ಎತ್ತಲಿರುವ ಬೃಹತ್ ಕೈಗಾರಿಕಾ ಟೌನ್ ಶಿಪ್