Advertisement

ಬೀದರ್: ಕೋವಿಡ್ 19 ಸೋಂಕಿಗೆ ನಾಲ್ವರ ಸಾವು, 65 ಪಾಸಿಟಿವ್ ಪ್ರಕರಣಗಳು

12:51 AM Aug 10, 2020 | Hari Prasad |

ಬೀದರ್: ಜಿಲ್ಲೆಯಲ್ಲಿ ತನ್ನ ಆರ್ಭಟವನ್ನು ಮುಂದುವರೆಸಿರುವ ಕೋವಿಡ್ 19 ಸೋಂಕು ರವಿವಾರ ಮತ್ತೆ ನಾಲ್ವರನ್ನು ಬಲಿ ಪಡೆದುಕೊಂಡಿದೆ.

Advertisement

ಈ ಮೂಲಕ ಕಳೆದ 7 ದಿನಗಳಲ್ಲಿ 18 ಜನರು ಜಿಲ್ಲೆಯಲ್ಲಿ ಈ ಮಹಾಮಾರಿಗೆ ಬಲಿಯಾಗಿದ್ದಾರೆ.  ಮತ್ತು ಇದೀಗ ಜಿಲ್ಲೆಯಲ್ಲಿ ಈ ಸೋಂಕಿಗೆ ಮೃತಪಟ್ಟವರ ಸಂಖ್ಯೆ ಶತಕದಂಚಿಗೆ ತಲುಪಿದೆ.

ಮಾತ್ರವಲ್ಲದೇ ಇಂದು ಒಂದೇ ದಿನ ಜಿಲ್ಲೆಯಲ್ಲಿ 65 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

ಬೀದರ ತಾಲೂಕಿನ 69 ಮತ್ತು 75 ವರ್ಷ ವರ್ಷದ ವ್ಯಕ್ತಿಗಳು, ಕಮಲನಗರ ತಾಲೂಕಿನ 80 ವರ್ಷದ ವೃದ್ಧ ಮತ್ತು ಬಸವಕಲ್ಯಾಣ ತಾಲೂಕಿನ 55 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಕೆಮ್ಮು, ಜ್ವರ ಹಾಗೂ ತೀವ್ರ ಉಸಿರಾಟದ ತೊಂದರೆ ಹಿನ್ನಲೆ ಬ್ರಿಮ್ಸ್‌ನ ಕೋವಿಡ್ 19 ಆಸ್ಪತ್ರೆಗೆ ದಾಖಲಾಗಿದ್ದರು ಇಲ್ಲಿ ಇವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಎಲ್ಲರಲ್ಲಿಯೂ ಕೋವಿಡ್ 19 ವೈರಾಣು ಪತ್ತೆಯಾಗಿದ್ದು, ಈ ಪೈಕಿ ಕೆಲವರು ರಕ್ತದೊತ್ತಡ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು.

ಇಂದಿನ ಹೊಸ ಸೋಂಕಿತರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಈಗ 2908ಕ್ಕೆ ತಲುಪಿದೆ. ಇಂದು 44 ಜನರು ಸೇರಿ ಇದುವರೆಗೆ 1894 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇನ್ನೂ 913 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.

Advertisement

ಈವರೆಗೆ ಜಿಲ್ಲೆಯ 54,080 ಜನರ ಗಂಟಲ ಮಾದರಿಯ ತಪಾಸಣೆ ಮಾಡಲಾಗಿದ್ದು, ಈ ಪೈಕಿ 50,026 ಮಂದಿಯ ತಪಾಸಣಾ ವರದಿ ನೆಗೆಟಿವ್ ಬಂದಿದ್ದು, ಇನ್ನೂ 1146 ಜನರ ವರದಿ ಬರುವುದು ಬಾಕಿ ಇದೆ.

ತಾಲೂಕುವಾರು ವಿವರ: ಜಿಲ್ಲೆಯಲ್ಲಿ ರವಿವಾರ 25 ಹೊಸ ವೈರಸ್ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ ಬೀದರ ನಗರ- ತಾಲೂಕಿನ 10 ಜನರಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 1066 ಆಗಿದೆ.

ಭಾಲ್ಕಿ ತಾಲೂಕಿನ 21 ಜನರಲ್ಲಿ ಕೋವಿಡ್ 19 ಸೋಂಕು ಖಚಿತವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 365ಕ್ಕೆ ಏರಿಕೆಯಾಗಿದೆ. ಹುಮನಾಬಾದ- ಚಿಟಗುಪ್ಪ ತಾಲೂಕಿನ 18 ಜನರಿಗೆ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 553ಕ್ಕೆ ಏರಿಕೆಯಾಗಿದೆ.

ಔರಾದ್- ಕಮಲನಗರ ತಾಲೂಕಿನ 13 ಜನರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ ಒಟ್ಟು 394 ಆಗಿದೆ. ಬಸವಕಲ್ಯಾಣ- ಹುಲಸೂರು ತಾಲೂಕಿನ 3 ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 511ಕ್ಕೆ ಏರಿಕೆ ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next