ಹೈದರಾಬಾದ್: ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಭರ್ಜರಿ ಯಶಸ್ಸು ಕಂಡಿರುವ ಬೆನ್ನಲ್ಲೇ ಹೈದರಾಬಾದ್ ನಲ್ಲಿ ಇತ್ತೀಚೆಗೆ ನಡೆದ 2017ನೇ ಸಾಲಿನ ಜಿಯೋ ಫಿಲ್ಮ್ ಫೇರ್ ಸೌತ್ ಅವಾರ್ಡ್ಸ್ ನ ಅದ್ದೂರಿ ಸಮಾರಂಭದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ ಐದು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ರಾಮ ರೆಡ್ಡಿ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿದ್ದ ತಿಥಿ ಕನ್ನಡ ಸಿನಿಮಾ ನಿರೀಕ್ಷೆಯಂತೆಯೇ ಬೆಸ್ಟ್ ಫಿಲ್ಮ್ ಅವಾರ್ಡ್ ಪಡೆದುಕೊಂಡಿದೆ.
ಕಿರಿಕ್ ಪಾರ್ಟಿಗೆ ಐದು ಪ್ರಶಸ್ತಿ
ರಿಷಬ್ ಶೆಟ್ಟಿ ಅತ್ಯುತ್ತಮ ನಿರ್ದೇಶಕ
ರಕ್ಷಿತ್ ಶೆಟ್ಟಿ ಉತ್ತಮ (ವಿಮರ್ಶಕರ) ನಟ
ನಟಿ ಸಂಯುಕ್ತಾ ಹೆಗಡೆ ಅತ್ಯುತ್ತಮ ಪೋಷಕ ನಟಿ
ಬಿ ಅಜನೀಶ್ ಲೋಕನಾಥ ಅತ್ಯುತ್ತಮ ಸಂಗೀತ ನಿರ್ದೇಶಕ
ವಿಜಯ್ ಪ್ರಕಾಶ ಅತ್ಯುತ್ತಮ ಗಾಯಕ
ಅದರಂತೆ ಅತ್ಯುತ್ತಮ ನಟ ಅನಂತನಾಗ್ (ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾಕ್ಕೆ), ಅತ್ಯುತ್ತಮ ನಟಿ ಶ್ರದ್ಧಾ ಶ್ರೀನಾಥ್(ಯೂ ಟರ್ನ್), ಉತ್ತಮ ಪೋಷಕ ನಟ ವಶಿಷ್ಠ ಸಿಂಹ (ಗೋಧಿ ಬಣ್ಣ ಸಾಧಾರಣ ಮೈಕಟ್ಟು), ಅತ್ಯುತ್ತಮ ಸಾಹಿತ್ಯ ಜಯಂತ್ ಕಾಯ್ಕಿಣಿ (ಮುಂಗಾರು ಮಳೆ 2) ಅವರಿಗೆ ಪ್ರಶಸ್ತಿ ಬಂದಿದೆ.