Advertisement

ಕೋವಿಡ್ ಅಂಕಿಅಂಶ: ಒಂದೇ ದಿನ ದಾಖಲೆಯ 64,399 ಹೊಸ ಪ್ರಕರಣ, 861 ಸಾವು

02:03 PM Aug 09, 2020 | Mithun PG |

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 64,399 ಜನರಿಗೆ ಹೊಸದಾಗಿ ಕೋವಿಡ್ ಸೊಂಕು ತಗುಲಿವೆ. ಆ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 21,53,011ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Advertisement

ಸದ್ಯ ಭಾರತದಲ್ಲಿ 6,28,747 ಸಕ್ರೀಯ ಪ್ರಕರಣಗಳಿದ್ದು, 14,80,885 ಜನರು ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಅಮೆರಿಕಾ, ಬ್ರೆಜಿಲ್ ಹೊರತುಪಡಿಸಿದರೆ ಭಾರತದಲ್ಲೇ  ಅತೀ ಹೆಚ್ಚು ಸೋಂಕಿತರಿದ್ದು ಈವರೆಗೂ 43,379 ಜನರು ಬಲಿಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಸುಮಾರು 861 ಜನರು ಕೋವಿಡ್ ಕಾರಣದಿಂದ ಮೃತರಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 3,38,362 ಕ್ಕೆ ಏರಿಕೆಯಾಗಿದ್ದು, 1.47 ಲಕ್ಷ ಸಕ್ರೀಯ ಪ್ರಕರಣಗಳಿವೆ. ತಮಿಳುನಾಡಿನಲ್ಲೂ ಕೂಡ ಒಟ್ಟು ಸೊಂಕಿತರ ಸಂಖ್ಯೆ 2.32 ಲಕ್ಷಕ್ಕೆ ಏರಿಕೆಯಾಗಿದ್ದು, 53,481 ಸಕ್ರೀಯ ಪ್ರಕರಣಗಳಿವೆ. ದೆಹಲಿಯಲ್ಲಿ 1,29 ಲಕ್ಷ ವೈರಾಣು ಪೀಡಿತರಿದ್ದು, ಸಕ್ರೀಯ ಪ್ರಕರಣಗಳ ಸಂಖ್ಯೆ 10.667 ಇದೆ.

ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಉತ್ತರಪ್ರದೇಶ ರಾಜ್ಯದಲ್ಲಿ ಅತೀ ಹೆಚ್ಚು ಕೋವಿಡ್ ಸೊಂಕಿತರು ಕಳೆದ 24 ಗಂಟೆಗಳಲ್ಲಿ ದಾಖಲಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next