Advertisement

ಉತ್ತರಾಖಂಡದಲ್ಲಿ ಜಲಪ್ರಳಯ : 64 ಮಂದಿ ಬಲಿ, 7,000 ಕೋಟಿ ರೂ ನಷ್ಟ

07:30 PM Oct 21, 2021 | Team Udayavani |

ಹೊಸದಿಲ್ಲಿ:ಕಳೆದ ಮೂರು ದಿನಗಳಿಂದ ಉತ್ತರಾಖಂಡದಲ್ಲಿ ಮಳೆ ಆರ್ಭಟಕ್ಕೆ ಒಟ್ಟು 64 ಮಂದಿ ಬಲಿಯಾಗಿದ್ದು, 7,000 ಕೋಟಿ ರೂ.ಗಳಿಗೂ ಅಧಿಕ ಆಸ್ತಿ ಹಾನಿಯಾಗಿರುವ ಬಗ್ಗೆ ಗುರುವಾರ ವಿವರ ಲಭ್ಯವಾಗಿದೆ.

Advertisement

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ಉತ್ತರಾಖಂಡದ ಮಳೆ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ನಡೆಸಿದರು.

ರಾಜ್ಯದಲ್ಲಿ 64 ದುರದೃಷ್ಟಕರ ಮಳೆ ಸಂಬಂಧಿತ ಸಾವುಗಳು ವರದಿಯಾಗಿದ್ದು, 11 ಜನರು ಇನ್ನೂ ಕಾಣೆಯಾಗಿದ್ದಾರೆ ಎಂದು ಶಾ ತಿಳಿಸಿದ್ದಾರೆ.

ಇದುವರೆಗೆ ಯಾವುದೇ ಪ್ರವಾಸಿಗರಿಗೆ ಹಾನಿಯಾಗಿಲ್ಲ. 3500 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಮತ್ತು 16,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ. 17 NDRF ತಂಡಗಳು, 7 SDRF ತಂಡಗಳು, 15 ಕಂಪನಿಗಳ PAC, 5000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು  ರಕ್ಷಣಾ ಕಾರ್ಯಕ್ಕೆ ನಿಯೋಜಿಸಿರುವುದಾಗಿ ಶಾ ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಿ ಏಜೆನ್ಸಿಗಳ ‘ಜಾಗರೂಕತೆ’ ಹಾನಿಯನ್ನು ನಿಯಂತ್ರಿಸಲು ನೆರವಾಗಿದೆ ಎಂದು ಶಾ ಶ್ಲಾಘಿಸಿದರು.

Advertisement

‘ಮುಂಚಿತವಾಗಿ ಭಾರೀ ಮಳೆ ಎಚ್ಚರಿಕೆ ನೀಡಲಾದ ಹಿನ್ನಲೆಯಲ್ಲಿ ಚಾರ್ ಧಾಮ್ ಯಾತ್ರೆಯನ್ನು ಸ್ಥಗಿತಗೊಳಿಸುವಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯವಾಯಿತು.ಅದಲ್ಲದಿದ್ದರೆ ಇನ್ನೂ ಹೆಚ್ಚು ಪ್ರಾಣ ಹಾನಿ ಸಂಭವಿಸುವ ಸಾಧ್ಯತೆಗಳಿತ್ತು’ ಎಂದು ಹೇಳಿದರು.

‘ಶೋಧ ಮತ್ತು ರಕ್ಷಣಾ ತಂಡಗಳ ಸಕಾಲಿಕ ಸಜ್ಜುಗೊಳಿಸುವಿಕೆ ಮತ್ತು ಐಎಎಫ್ ಹೆಲಿಕಾಪ್ಟರ್‌ಗಳ ಸಹಾಯ ಸಂಭಾವ್ಯ ಹಾನಿಯನ್ನು ಕಡಿಮೆ ಮಾಡಿದೆ. ಸಕಾಲಿಕ ರಕ್ಷಣಾ ಕಾರ್ಯಾಚರಣೆಗಳು ಹಲವರ ಜೀವ ಉಳಿಸಿವೆ’ ಎಂದು ಶಾ ತಿಳಿಸಿದರು.

‘ರಾಜ್ಯದಲ್ಲಿ ಮೂರು ದಿನಗಳ ನಿರಂತರ ಮಳೆಯಿಂದಾಗಿ ರೂ. 7,000 ಕೋಟಿ ರೂಪಾಯಿಯಾ ಸಂಪತ್ತು ಹಾನಿಯಾಗಿದೆ’ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.

ಅಮಿತ್ ಶಾ ಅವರೊಂದಿಗೆ ಉತ್ತರಾಖಂಡ್ ಗವರ್ನರ್ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಗುರ್ಮಿತ್ ಸಿಂಗ್, ಮುಖ್ಯಮಂತ್ರಿ ಪುಷ್ಕರ್ ಧಾಮಿ, ಕೇಂದ್ರ ರಕ್ಷಣಾ ಖಾತೆಯ ರಾಜ್ಯ ಸಚಿವ ಅಜಯ್ ಭಟ್ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಸಚಿವ ಧನ್ ಸಿಂಗ್ ರಾವತ್ ಅವರು ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next