ಹೊಸದಿಲ್ಲಿ: ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಒಟ್ಟು 628 ಹುಲಿಗಳು ನೈಸರ್ಗಿಕ ಕಾರಣಗಳು ಮತ್ತು ಬೇಟೆ ಸೇರಿದಂತೆ ಇತರ ಕಾರಣಗಳಿಂದ ಸಾವನ್ನಪ್ಪಿವೆ ಎಂದು ಸರಕಾರದ ಅಂಕಿಅಂಶಗಳು ತಿಳಿಸಿವೆ.
ಅವಧಿಯಲ್ಲಿ ಹುಲಿ ದಾಳಿಯಲ್ಲಿ 349 ಜನರು ಪ್ರಾಣಕಳೆದುಕೊಂಡಿದ್ದು ಮಹಾರಾಷ್ಟ್ರವೊಂದರಲ್ಲೇ ಅತ್ಯಧಿಕ 200 ಮಂದಿಯ ಸಾವು ದಾಖಲಾಗಿವೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಪ್ರಕಾರ, 2019 ರಲ್ಲಿ 96, 2020 ರಲ್ಲಿ 106, 2021 ರಲ್ಲಿ 127, 2022 ರಲ್ಲಿ 121 ಮತ್ತು 2023 ರಲ್ಲಿ 178 ಹುಲಿಗಳು ಸಾವನ್ನಪ್ಪಿವೆ. 2023 ರಲ್ಲಿ ಅತೀ ಹೆಚ್ಚು ಹುಲಿಗಳು ಸಾವನ್ನಪ್ಪಿವೆ ಎಂದು ಅಂಕಿ ಅಂಶಗಳು ಬಹಿರಂಗ ಪಡಿಸಿವೆ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪರಿಸರ ಖಾತೆಯ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ‘2019 ಮತ್ತು 2020 ರಲ್ಲಿ 49, 2021 ರಲ್ಲಿ59 ,2022 ರಲ್ಲಿ110, 2023 ರಲ್ಲಿ 82 ಮಂದಿ ಹುಲಿ ದಾಳಿಗೆ ಬಲಿಯಾಗಿದ್ದಾರೆ ಎಂದು ವಿವರ ನೀಡಿದ್ದಾರೆ. ಉತ್ತರಪ್ರದೇಶದಲ್ಲಿ 59 ಮಂದಿ,ಮಧ್ಯಪ್ರದೇಶದಲ್ಲಿ 27 ಮಂದಿ ಹುಲಿಗಳ ದಾಳಿಗೆ ಬಲಿಯಾಗಿದ್ದಾರೆ.
2022 ರಲ್ಲಿ ಜಾಗತಿಕ ಹುಲಿಗಳ 75ಶೇಕಡಾ ಅಂದರೆ 3,682 ಹುಲಿಗಳು ಭಾರತದಲ್ಲಿ ಇರುವುದು ಸರಕಾರಿ ಅಂಕಿ ಅಂಶಗಳಿಂದ ತಿಳಿದು ಬಂದಿತ್ತು.
1973 ಏಪ್ರಿಲ್ 1 ರಂದು ಭಾರತ ಹುಲಿ ಯೋಜನೆ (Project Tiger) ಘೋಷಿಸಿತ್ತು. ಹುಲಿ ಸಂರಕ್ಷಣೆಯನ್ನು ಉತ್ತೇಜಿಸಿ ಆರಂಭದಲ್ಲಿ, ಇದು 18,278 ಚದರ ಕಿಲೋಮೀಟರ್‌ಗಳಷ್ಟು ವ್ಯಾಪಿಸಿರುವ ಒಂಬತ್ತು ಹುಲಿ ಸಂರಕ್ಷಿತ ಪ್ರದೇಶಗಳನ್ನು ಸಮೀಕ್ಷೆ ಕೈಗೊಳ್ಳಲಾಗಿತ್ತು. ಪ್ರಸ್ತುತ, ಭಾರತವು 78,735 ಚದರ ಕಿಲೋಮೀಟರ್‌ಗಳಿಗಿಂತ ಹೆಚ್ಚು 55 ಹುಲಿ ಸಂರಕ್ಷಿತ ಪ್ರದೇಶಗಳನ್ನು ಹೊಂದಿದೆ. ದೇಶದ ಭೌಗೋಳಿಕ ಪ್ರದೇಶದ ಸುಮಾರು 2.4 ಪ್ರತಿಶತ ಪ್ರದೇಶ ಹುಲಿಗಳ ಆವಾಸಸ್ಥಾನವಾಗಿದೆ.