Advertisement

Western Ghats;ನೀರೇ ಇಲ್ಲದಿದ್ದರೂ ಬದುಕುವ 62 ಸಸ್ಯಗಳು!

11:33 AM Jun 02, 2023 | Shreeram Nayak |

ಹೊಸದಿಲ್ಲಿ: ಕರ್ನಾಟಕವೂ ಸೇರಿದಂತೆ ಭಾರತದ ಪಶ್ಚಿಮಘಟ್ಟಗಳಲ್ಲಿ ಪುಣೆಯ ವಿಜ್ಞಾನಿಗಳು 62 ವಿಶೇಷ ಸಸ್ಯಗಳನ್ನು ಪತ್ತೆ ಮಾಡಿದ್ದಾರೆ. ಅವುಗಳ ವಿಶೇಷವೇನು ಗೊತ್ತಾ? ನೀರೇ ಇಲ್ಲದಿದ್ದರೂ, ಎಂತಹ ಬರಗಾಲದಲ್ಲಿಯೂ ಬದುಕಿರಬಲ್ಲವು! ಪುಣೆಯ ಅಘರ್ಕರ್‌ ಸಂಶೋಧನ ಸಂಸ್ಥೆಯ (ಎಆರ್‌ಐ) ವಿಜ್ಞಾನಿಗಳು ಈ ಅಪೂರ್ವ ಶೋಧವನ್ನು ಮಾಡಿದ್ದಾರೆ. ಸಸ್ಯಶಾಸ್ತ್ರಕ್ಕೆ ಸಂಬಂಧಿಸಿದ ನಾರ್ಡಿಕ್‌ ನಿಯತಕಾಲಿಕೆಯಲ್ಲಿ ಈ ಮಾಹಿತಿ ಪ್ರಕಟವಾಗಿದೆ.

Advertisement

ಹೊಸತಾಗಿ ಪತ್ತೆಯಾಗಿರುವ 62 ಸಸ್ಯಗಳ ಪೈಕಿ 16 ಸಸ್ಯಗಳು ಭಾರತದ ಅಲ್ಲಲ್ಲಿ ಕಂಡುಬರುತ್ತವೆ. ಇನ್ನು 12 ಪಕ್ಕಾ ಪಶ್ಚಿಮಘಟ್ಟದಲ್ಲಿ ಮಾತ್ರ ಕಂಡುಬಂದಿವೆ. ಪಶ್ಚಿಮಘಟ್ಟ ಪ್ರದೇಶ ಕರ್ನಾಟಕ, ಕೇರಳ, ತಮಿಳುನಾಡು, ಗೋವಾ, ಗುಜರಾತ್‌ನಲ್ಲಿ ಬರುತ್ತದೆ.

ಏನಿದರ ಮಹತ್ವ?: ಈ ಸಸ್ಯಗಳು ಎಂತಹ ಬರಗಾಲದಲ್ಲಿಯೂ ಬದುಕಬಲ್ಲವು. ನೀರೇ ಇಲ್ಲದಾಗ ಇವು ಸಂಪೂರ್ಣ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿಸುತ್ತವೆ. ನೀರು ಸಿಕ್ಕಾಗ ಮತ್ತೆ ಬೆಳೆಯಲು ಆರಂಭಿಸುತ್ತವೆ. ಆದ್ದರಿಂದ ಇವನ್ನು ನೀರು ಕಡಿಮೆಯಿರುವ, ಬರಪೀಡಿತ ಪ್ರದೇಶಗಳಲ್ಲಿ ಕೃಷಿಗೆ ಪೂರಕವಾಗಿ ಬೆಳೆಸಬಹುದು. ಒಂದು ಕಡೆ ಸಸ್ಯಗಳೂ ಬೆಳೆಯುತ್ತವೆ, ಕೃಷಿಗೂ ಸಹಾಯವಾಗುತ್ತದೆ.

ಇಂತಹ ಸಸ್ಯಗಳ ಕುರಿತ ಅಧ್ಯಯನ ಇದುವರೆಗೆ ಬಹಳ ಕಡಿಮೆ ನಡೆದಿತ್ತು. ಬಂಡೆಗಳ ನಡುವೆ ಸಸ್ಯಗಳು ಬೆಳೆಯುವುದು ಪಶ್ಚಿಮಘಟ್ಟಗಳಲ್ಲಿ ಸಾಮಾನ್ಯ, ಆದರೆ ಹೀಗೆ ನೀರಿಲ್ಲದೇ ಬದುಕುವ ಸಸ್ಯಗಳ ಬಗ್ಗೆ ಸಂಶೋಧನೆ ಆಗಿರಲಿಲ್ಲ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹೇಳಿದೆ. ಈ ಶೋಧ ಜೀವವೈವಿಧ್ಯ ಮತ್ತು ಪರಿಸರಕ್ಕೆ ಬಹಳ ಮಹತ್ವ ಕೊಡುಗೆ ನೀಡಿದೆ ಎಂದೂ ಸಚಿವಾಲಯ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next