Advertisement

611 ಕುಟುಂಬಗಳಿಗೆ ಸ್ವಂತ ಮನೆ ನಿರ್ಮಾಣ ಪೂರ್ಣ

01:39 AM Jan 23, 2020 | sudhir |

ಬದಿಯಡ್ಕ: ಮಂಜೇಶ್ವರ ಬ್ಲಾಕ್‌ ಪಂಚಾಯತ್‌ನ ಲೆ„ಫ್‌ ಮಿಷನ್‌ ಯೋಜನೆ ಮೂಲಕ 611 ಕುಟುಂಬಗಳ ಸ್ವಂತಮನೆಯ ನಿರೀಕ್ಷೆ ಸಫಲಗೊಂಡಿದೆ. ಮಂಜೇಶ್ವರ ಕಲಾಸ್ಪರ್ಶ ಸಭಾಂಗಣದಲ್ಲಿ ನಡೆದ ಸಮಾರಂಭ ವನ್ನು ಶಾಸಕ ಎಂ.ಸಿ. ಕಮರುದ್ದೀನ್‌ ಉದ್ಘಾಟಿಸಿದರು.

Advertisement

ಈ ಸಂದರ್ಭ ಮಾತನಾಡಿದ ಅವರು ಯೋಜನೆಯಲ್ಲಿ ಸೇರಿರುವ ಫಲಾನುಭವಿಗಳಿಗೆ ಉತ್ತಮ ಸೌಲಭ್ಯಗಳ ಸಹಿತ ಮನೆ ಲಭ್ಯವಾಗಿಸುವ ನಿಟ್ಟಿನಲ್ಲಿ ಅದಾಲತ್‌ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಯೋಜನೆ ನಿರ್ವಹಣೆಯಲ್ಲಿ ಅತ್ಯುತ್ತಮ ಚಟುವಟಿಕೆ ನಡೆಸಿದ ಮಂಗಲ್ಪಾಡಿ, ಮಂಜೇಶ್ವರ, ಮೀಂಜ, ವರ್ಕಾಡಿ, ಪುತ್ತಿಗೆ, ಪೈವಳಿಕೆ, ಎಣ್ಮಕಜೆ ಗ್ರಾಮ ಪಂಚಾಯತ್‌ಗಳಿಗೆ ಅವರು ಬಹುಮಾನ ವಿತರಿಸಿದರು. ಬ್ಲೋಕ್‌ ಪಂಚಾಯತ್‌ ಅಧ್ಯಕ್ಷ ಎ.ಕೆ.ಎಂ.ಅಶ್ರಫ್‌ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮಮತಾ ದಿವಾಕರ್‌, ಮಂಜೇಶ್ವರ ಗ್ರಾ.ಪಂ. ಅಧ್ಯಕ್ಷ ಅಬ್ದುಲ್‌ ಅಝೀಜ್‌ ಹಾಜಿ, ಮೀಂಜ ಗ್ರಾ.ಪಂ. ಅಧ್ಯಕ್ಷೆ ಶಂಶಾದ್‌ ಶುಕೂರ್‌, ವರ್ಕಾಡಿ ಗ್ರಾ.ಪಂ. ಅಧ್ಯಕ್ಷ ಬಿ.ಎ.ಅಬ್ದುಲ್‌ ಮಜೀದ್‌, ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷೆ ವೈ.ಶಾರದಾ, ಬ್ಲಾಕ್‌ ಪಂಚಾಯತ್‌ ವಿವಿಧ ಸ್ಥಾಯೀ ಸಮಿತಿ ಅಧ್ಯಕ್ಷರಾದ ಮಹಮ್ಮದ್‌ ಮುಸ್ತಫಾ, ಬಹಿರಿನ್‌ ಮಹಮ್ಮದ್‌, ಸದಸ್ಯರಾದ ಹಸೀನಾ, ಸದಾಶಿವ, ಎ.ಸಪ್ರೀನಾ, ಬಿ.ಸವಿತಾ, ಎಂ.ಪ್ರದೀಪ್‌ ಕುಮಾರ್‌, ಬಿ.ಮಿಸ್‌ ಬಾನಾ, ಬಿ.ಎಂ.ಆಶಾಲತಾ, ಸಾಯಿರಾ ಬಾನು, ಜತೆ ಬಿ.ಡಿ.ಒ. ಕೆ.ನೂತನ ಕುಮಾರಿ, ಜನಪ್ರತಿನಿಧಿಗಳು, ಸಿಬಂದಿ ಉಪಸ್ಥಿತರಿದ್ದರು.

ಬ್ಲಾಕ್‌ ಪಂಚಾಯತ್‌ ಕಾರ್ಯದರ್ಶಿ ಎನ್‌.ಸುರೇಂದ್ರನ್‌ ವರದಿ ವಾಚಿಸಿದರು.

ಬಹುಭಾಷಾ ಸಂಗಮ 
ಮಂಜೇಶ್ವರದಲ್ಲಿ ನಡೆದ ಬ್ಲಾಕ್‌ ಪಂಚಾಯತ್‌ ನ ಲೆ„ಫ್‌ ಫಲಾನುಭವಿಗಳ ಕುಟುಂಬ ಸಂಗಮ ಅಂಗವಾಗಿ ನಡೆದ ಅದಾಲತ್‌ ಬಹುಭಾಷಾ ಸಂಗಮ ವೇದಿಕೆಯಾಗಿಯೂ ಗಮನ ಸೆಳೆಯಿತು. ಫಲಾನುಭವಿಗಳಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದ ವಿವಿಧ ಇಲಾಖೆಗಳ ಸಿಬಂದಿ ನಡೆಸಿದ ಸ್ಟಾಲ್‌ ಗಳಲ್ಲಿ ಕನ್ನಡ, ತುಳು, ಉರ್ದು, ಬ್ಯಾರಿ ಸಹಿತ ಅನೇಕ ಭಾಷೆಗಳಲ್ಲಿ ಮಾಹಿತಿ ನೀಡಲಾಗಿತ್ತು. ಮಂಜೇಶ್ವರದ ಹಿನ್ನೆಲೆಯಲ್ಲಿ ಫಲಾನುಭವಿಗಳ ಸೌಲಭ್ಯಕ್ಕಾಗಿ ಈ ವ್ಯವಸ್ಥೆ ಮಾಡಲಾಗಿತ್ತು. 611 ಮನೆಗಳ ನಿರ್ಮಾಣ ಪೂರ್ಣ ಮಂಜೇಶ್ವರ ಬ್ಲಾಕ್‌ನ ಲೆ„ಫ್‌ ಮಿಷನ್‌ ಯೋಜನೆ ಮೂಲಕ 611 ಮನೆಗಳ ನಿರ್ಮಾಣ ಪೂರ್ಣಗೊಳಿಸಲಾಗಿದೆ. ಇವುಗಳಲ್ಲಿ 68 ಮನೆಗಳನ್ನು ಬ್ಲಾಕ್‌ ಪಂಚಾಯತ್‌ ವತಿಯಿಂದ ಪೂರ್ಣ ಗೊಳಿಸಲಾಗಿದೆ. ಎಣ್ಮಕಜೆ ಗ್ರಾ.ಪಂ. ಮೂಲಕ 77 ಮನೆಗಳು, ಮಂಗಲ್ಪಾಡಿ ಗ್ರಾ.ಪಂ. ಮೂಲಕ 65, ಮಂಜೇಶ್ವರ ಗ್ರಾ.ಪಂ. 50, ಮೀಂಜ ಗ್ರಾ.ಪಂ. 71, ಪೈವಳಿಕೆ ಗ್ರಾ.ಪಂ. 68, ಪುತ್ತಿಗೆ ಗ್ರಾ.ಪಂ. 61 ವರ್ಕಾಡಿ ಗ್ರಾ.ಪಂ. 55 ಮನೆಗಳನ್ನು ಪೂರ್ಣಗೊಳಿಸಲಾಗಿದೆ. ಜಿಲ್ಲಾ ಪಂಚಾಯತ್‌ ವ್ಯಾಪ್ತಿಯಲ್ಲಿ ಒಂದು ಮನೆ, ಪರಿಶಿಷ್ಟ ಜಾತಿ ಜನಾಂಗದ 7 ಮನೆಗಳು, ಪರಿಶಿಷ್ಟ ಪಂಗಡದ 20 ಮನೆಗಳು, ಪಿ.ಎಂ.ಎ.ವೈ. ಗ್ರಾಮೀಣ ಯೋಜನೆಯಲ್ಲಿ 66 ಮನೆಗಳು ಪೂರ್ಣಗೊಂಡಿವೆ. ಲೆ„ಫ್‌ ಯೋಜನೆಯ ಮೊದಲ ಹಂತದಲ್ಲಿ 182 ಮನೆಗಳು, ದ್ವಿತೀಯ ಹಂತದಲ್ಲಿ 429 ಮನೆಗಳು ನಿರ್ಮಾಣಗೊಂಡಿವೆ. ಉಳಿದ ಮನೆಗಳ ನಿರ್ಮಾಣ ಚಟುವಟಿಕೆಗಳು ನಡೆಯುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next