Advertisement
ಆನೆಗಳ ಹತ್ಯೆ ಬಗ್ಗೆ ಪ್ರತಿ ವಾರ ಕೇರಳ ಅರಣ್ಯ ಇಲಾಖೆ ಜತೆಗೆ ಚರ್ಚಿ ಸುತ್ತೇನೆ. ಪ್ರಸ್ತುತ ಕೇರಳದ ದೇವಾಲಯವೊಂದರಲ್ಲಿ ಆನೆಯ ಕಾಲುಗಳನ್ನು 4 ದಿಕ್ಕಿನಿಂದಲೂ ಎಳೆದು ಕಟ್ಟಿ ಹಿಂಸಿಸಲಾಗುತ್ತಿದೆ. ಈ ಬಗ್ಗೆ ದೂರು ನೀಡಿ ತಿಂಗಳಾಗಿದೆ. ಆದರೂ ಕ್ರಮ ಜರುಗಿಸಿಲ್ಲ ಎಂದು ಮನೇಕಾ, ಆಗ್ರಾದ ಕಾರ್ಯಕರ್ತ ನರೇಶ್ ಪಾರ ಸ್‌ಗೆ ಬರೆದ ಪತ್ರದಲ್ಲಿ ಉಲ್ಲೇಖೀಸಿದ್ದಾರೆ.
ಪಾಲಕ್ಕಾಡ್‌ನಲ್ಲಿ ಪಟಾಕಿ ಸೇವಿಸಿ, ಮೃತಪಟ್ಟ ಆನೆಯ ಪ್ರಕರಣ ಹೊಸ ತಿರುವು ಪಡೆದಿದೆ. ದುಷ್ಕರ್ಮಿಗಳು ಆನೆಗೆ ತಿನ್ನಲು ನೀಡಿದ್ದು ಅನಾನಸ್ ಅಲ್ಲ, ತೆಂಗಿನ ಕಾಯಿ ಪಟಾಕಿ ಎನ್ನಲಾಗುತ್ತಿದೆ. “ಹೆಚ್ಚಿನ ತನಿಖೆಗಾಗಿ ಬಂಧಿತ ವಿಲ್ಸನ್ ನನ್ನು ಪ್ಲಾಂಟೇಶನ್ ಶೆಡ್‌ಗೆ ಕರೆದೊ ಯ್ಯಲಾಗಿತ್ತು. ಅಲ್ಲಿ ಆತ ಇಬ್ಬರು ಪಟಾಕಿ ತಯಾರಕರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ. ತೆಂಗಿನಕಾಯಿ ಒಡೆದು ಅದರೊಳಗೆ ಸ್ಫೋಟಕವನ್ನಿಟ್ಟು ಆನೆಗೆ ನೀಡಲಾಗಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ’ ಎಂದು ಮನ್ನಾರ್‌ಕ್ಕಾಡ್ ವಿಭಾಗದ ಅರಣ್ಯಾಧಿಕಾರಿ ಸುನಿಲ್ ಕುಮಾರ್ ಎನ್‌ಡಿಟಿವಿಗೆ ಹೇಳಿದ್ದಾರೆ. ಆನೆ 20 ದಿನಗಳಿಂದ ಉಪವಾಸವಿತ್ತು ಎನ್ನಲಾಗುತ್ತಿದೆ.