Advertisement
ನಂದಗಾಂವ್ ಗ್ರಾಮದ ಎಂ.ಡಿ.ಸಿರಾಜ್ ರಫಿಯೋದೀನ್ ಮತ್ತು ಆತನ ಮಗ ಆದಿಲ್ ಸಿರಾಜುದ್ದೀನ್, ಬೀದರ ತಾಲೂಕು ಕಮಟಾಣಾ ಗ್ರಾಮದ ಉಮರ್ ಫಾರೂಕ್ ಚಾಂದಪಾಷಾ, ಲತೀಫ್‌ಬಾಬಾ ಸಾದೀಕ ಅಲಿ ಬಂಧಿತ ಆರೋಪಿಗಳು. ಸೆ.2ರಿಂದ ಈವರೆಗೆ 90 ಲಕ್ಷ ರೂ.ಮೌಲ್ಯದ 60 ಒಂಟೆಗಳನ್ನು ಕತ್ತರಿಸಿ ಮಾಂಸವನ್ನು ಹೈದರಾಬಾದ್‌ಗೆ ಇವರು ಸಾಗಿಸಿದ್ದಾರೆ. ಹರಿಯಾಣ ಮೂಲದ ಶಾಹೀದ್ ಇಸ್ಸಾರ್ ಖುರೇಷಿ ಹರಿಯಾಣದಿಂದ ನಂದಗಾಂವ್ ಗ್ರಾಮಕ್ಕೆ ಒಂಟೆಗಳನ್ನು ಟ್ರಕ್‌ನಲ್ಲಿ ಸಾಗಿಸುತ್ತಿದ್ದ. ಬೀದರ್‌ನ ಆಯೂಬ್ ಮುಲ್ತಾನಿ ಹೈದರಾಬಾದ್‌ನಲ್ಲಿ ಮಾರಾಟ ಮಾಡುತ್ತಿದ್ದ.ಈ ಮಾಂಸವನ್ನು ಖಾಜಾಪಾಷಾ ಖರೀದಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ರಾಜಸ್ಥಾನ ಮತ್ತು ಹರಿಯಾಣದಲ್ಲಿ ಒಂಟೆಗಳನ್ನು ಕಸಾಯಿಖಾನೆಗೆ ಕಳಿಸುವುದನ್ನು ಅಲ್ಲಿನ ಸರ್ಕಾರ ನಿಷೇಧಿಸಿದ ಕಾರಣ ಹರಿಯಾಣ ಮೂಲಕ ಖುರೇಷಿ ಇಲ್ಲಿನ ವ್ಯಕ್ತಿಗಳ ಜೊತೆಗೆ ಸಂಬಂಧ ಬೆಳೆಸಿ, ವ್ಯವಹಾರ ಆರಂಭಿಸಿದ್ದ. ಪ್ರತಿ ಒಂಟೆಯ ಬೆಲೆ 1.5 ಲಕ್ಷ ರೂ.ಇದೆ. ಆ ಪ್ರಕಾರ ಈವರೆಗೆ ಒಟ್ಟು 60 ಒಂಟೆ ಕತ್ತರಿಸಿದ್ದಾರೆ. ಅವುಗಳ ಮೂಳೆಗಳನ್ನು ಹೊಲದಲ್ಲೇ ಹೂಳಿದ್ದಾರೆ. ಹಳ್ಳಿಖೇಡ(ಬಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.