ಬೆಂಗಳೂರು: ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಕಾಪು, ಹೆಬ್ರಿ, ಉಡುಪಿ, ಕಾರ್ಕಳ ಸಹಿತ 60 ತಾಲೂಕು ಪಂಚಾಯತ್ಗಳ ವೇತನ ವೆಚ್ಚಕ್ಕೆ 483.71 ಕೋ. ರೂಗಳನ್ನು ಆರ್ಥಿಕ ಇಲಾಖೆ ಬಿಡುಗಡೆ ಮಾಡಿದೆ.
ಹೊಸದಾಗಿ ರಚನೆಯಾದ ತಾಲೂಕುಗಳಿಗೆ ಅನುದಾನ ಹಂಚಿಕೆ ಮಾಡದಿರುವ ಕಾರಣ ಅಲ್ಲಿನ ತಾಲೂಕು ಪಂಚಾಯತ್ ವ್ಯಾಪ್ತಿಯ ಸಿಬಂದಿಯ ವೇತನ ವೆಚ್ಚ ಭರಿಸಲು ತೊಂದರೆ ಆಗಿತ್ತು. ಈಗ ಆರ್ಥಿಕ ಇಲಾಖೆ ಅನುದಾನವನ್ನು ಮರುಹಂಚಿಕೆ ಮಾಡಲು ಒಪ್ಪಿಕೊಂಡಿದೆ.
ಕಾಪು, ಹೆಬ್ರಿ, ಉಡುಪಿ, ಕಾರ್ಕಳ, ಇಳಕಲ್, ರಬಕವಿ ಬನಹಟ್ಟಿ, ಗುಳೇದಗುಡ್ಡ, ಹುನಗುಂದ, ಬಾದಾಮಿ, ಜಮಖಂಡಿ, ಕಂಪ್ಲಿ, ಕುರುಗೋಡು, ಚಿತ್ತಗುಪ್ಪ, ಹುಮ್ನಾಬಾದ್, ಹನೂರು, ಕೊಳ್ಳೆಗಾಲ, ನ್ಯಾಮತಿ, ಹೊನ್ನಾಳಿ, ಅಣ್ಣಿಗೇರಿ, ನವಲಗುಂಡ, ಗಜೇಂದ್ರಗಢ, ರೋಣ, ರಟ್ಟೆಹಳ್ಳಿ, ಹಿರೇಕೆರೂರು, ಯಡ್ರಾಮಿ, ಕಮಲಾಪುರ, ಜೇವರ್ಗಿ, ಕಲಬುರಗಿ, ಕನಕಗಿರಿ, ಕಾರಟಗಿ, ಕುಕನೂರು, ಯಲಬುರ್ಗಾ, ಗಂಗಾವತಿ, ಸರಗೂರು, ಹೆಗ್ಗದೇವನಕೋಟೆ, ಸಿರಿವಾರ, ಮಾನ್ವಿ, ಲಿಂಗಸಗೂರು, ಸಿಂಧನೂರು,ದಾಂಡೇಲಿ, ಸೂಪ, ಹಳಿಯಾಳ, ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ದೇವರಹಿಪ್ಪರಗಿ, ತಿಕೋಟ, ಕೊಲ್ಹಾರ, ಬಬಲೇಶ್ವರ, ಬಸವನಬಾಗೇವಾಡಿ, ಸಿಂಧಗಿ, ವಿಜಯಪುರ, ಹುಣಸಗಿ, ವಡಗೇರಾ, ಶಹಾಪುರ ಮತ್ತು ಶಹಾಪುರ ತಾಲೂಕು ಪಂಚಾಯತ್ಗಳಿಗೆ ಅನುದಾನ ಮರುಹಂಚಿಕೆ ಮಾಡಿ ಆದೇಶಿಸಲಾಗಿದೆ.