Advertisement

ಪ್ಲೊಟೋಗೆ ಮಿಡಿದ ಹೃದಯ

08:15 AM Feb 19, 2018 | |

ವಾಷಿಂಗ್ಟನ್‌:  ಸೌರವ್ಯವಸ್ಥೆಯಲ್ಲಿ 9 ಗ್ರಹಗಳಿದ್ದು, ಪ್ಲೊಟೋ ಕೊನೆಯ ಗ್ರಹ ಎಂದು ನಾವು ಪಠ್ಯದಲ್ಲಿ ಓದುತ್ತಿದ್ದೆವು. ಆದರೆ ಪ್ಲೊಟೋ ಗ್ರಹವೇ ಅಲ್ಲ ಎಂದು ವಿಜ್ಞಾನಿಗಳು ಸಾಬೀತುಗೊಳಿಸಿದ ಬಳಿಕ 9 ಗ್ರಹಗಳ ಪಟ್ಟಿಯಿಂದ ಅದನ್ನು ಕೈಬಿಡಲಾಯಿತು. ಈ ಬೆಳವಣಿಗೆಯು ಐರ್ಲೆಂಡ್‌ನ‌ 6 ವರ್ಷದ ಪುಟ್ಟ ಬಾಲಕಿಯನ್ನು ವಿಚಲಿತಗೊಳಿಸಿದೆ. ಬಾಲಕಿ ಕಾರ ತನ್ನ ಶಿಕ್ಷಕಿಯ ಸಹಾಯ ಪಡೆದು ಪುನಃ  ಪ್ಲೊಟೋವನ್ನು ಗ್ರಹವನ್ನಾಗಿ ಪರಿಗಣಿಸಲು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾಗೆ ಪತ್ರ ಬರೆದಿದ್ದಾಳೆ.

Advertisement

“ನಾನೊಂದು ಹಾಡು ಕೇಳಿದೆ. ಆ ಹಾಡು ಪ್ಲೊಟೋವನ್ನು ಮತ್ತೆ ತನ್ನಿ ಎಂಬಲ್ಲಿಗೆ ಮುಗಿಯುತ್ತದೆ. ಹಾಗೆ ಆಗುವುದನ್ನು ನೋಡಲು ನಾನು ಉತ್ಸುಕಳಾಗಿದ್ದೇನೆ’ ಎಂದು ಆಕೆ ಪತ್ರದಲ್ಲಿ ಬರೆದಿದ್ದಾಳೆ. ನಾನು ನೋಡಿದ ವಿಡಿಯೋವೊಂದರಲ್ಲೂ ಪ್ಲೊಟೋ ಎಲ್ಲಾ ಗ್ರಹಗಳಿಗಿಂತ ಕಟ್ಟ ಕಡೆಯಲ್ಲಿ ಇದೆ. ಮತ್ತೂಂದು ವಿಡಿಯೋದಲ್ಲಿ ಅದನ್ನು ತೆಗೆದುಹಾಕಲಾಗಿದೆ. ಇದು ನಿಜಕ್ಕೂ ಅನ್ಯಾಯ. ಪ್ಲೊಟೋ ವನ್ನು ಬೇರ್ಪಡಿಸಿ ಕಸದ ಬುಟ್ಟಿಗೆ ಹಾಕಿದ್ದು ಸರಿಯಲ್ಲ. ಅದನ್ನು ಮತ್ತೆ ಮುಖ್ಯ ಗ್ರಹಗಳ ಗುಂಪಿಗೆ ಸೇರಿಸಿ ಎಂದು ಕೋರಿಕೊಂಡಿದ್ದಾಳೆ ಕಾರ. ಬಾಲಕಿಯ ಪತ್ರಕ್ಕೆ ನಾಸಾ ವಿಜ್ಞಾನಿಗಳು ಪ್ರತಿಕ್ರಿಯಿಸಿದ್ದು, “ಪ್ಲೊಟೋಗೂ ಒಂದು ಹೃದಯವಿದೆ ಎಂದು ನಮಗ್ಯಾರಿಗೂ ಗೊತ್ತಿರಲಿಲ್ಲ.  ಅದೊಂದು ವಿಸ್ಮಯಕಾರಿ ಜಗತ್ತು. ಪ್ಲೊಟೋ ಕುಳ್ಳ ಗ್ರಹ ಹೌದೋ, ಅಲ್ಲವೋ ಎಂಬುದಕ್ಕಿಂತಲೂ ಅದೊಂದು ಸುಂದರ ತಾಣವಂತೂ ಹೌದು. ಅದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುತ್ತೇವೆ. ನೀನು ಚೆನ್ನಾಗಿ ಕಲಿತರೆ ಮುಂದೊಂದು ದಿನ ನಿನ್ನನ್ನೂ ನಾಸಾದಲ್ಲಿ ನೋಡಬಹುದು’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next