Advertisement

ಪ್ರಧಾನಿ ಮೋದಿಗೆ 6 ವರ್ಷ ಪುಟಾಣಿಯೊಬ್ಬಳ ದೂರು!

02:23 PM Aug 03, 2022 | Team Udayavani |

ಅದು 6 ವರ್ಷ ಪುಟಾಣಿಯೊಬ್ಬಳ ಅಂಕುಡೊಂಕು ಕೈ ಬರಹ, ಮುದ್ದು ಮುದ್ದು ಸಾಲುಗಳು… ಅಸಲಿಗೆ ಆಕೆ ಬರೆದಿದ್ದಾರೂ ಏನು? ತನ್ನಿಷ್ಟದ ಮ್ಯಾಗಿ ನೂಡಲ್ಸ್‌ ಹಾಗೂ ಬರೆಯುವ ಪೆನ್ಸಿಲ್‌ನ ಬೆಲೆ ಹೆಚ್ಚಳವಾಗಿದೆ ಎಂದು!

Advertisement

ಉತ್ತರ ಪ್ರದೇಶದ ಛಿಬ್ರಮೌ ಎಂಬ ಊರಿನ ಕೃತಿ ದುಬೆ ಎಂಬ ಈ ಪೋರಿ ಒಂದನೇ ತರಗತಿ ಓದುತ್ತಿದ್ದು, ತನ್ನೀ ಬೇಸರವನ್ನು ಖುದ್ದು ಪ್ರಧಾನಿಯವರಿಗೆ ಪತ್ರದ ಮುಖೇನ ತೋಡಿಕೊಂಡಿದ್ದಾಳೆ.

ಮ್ಯಾಗಿಯ 70 ಗ್ರಾಂ ಪ್ಯಾಕೆಟ್ಟಿಗೆ 14 ರೂ. ಜಾಸ್ತಿಯಾಗಿದ್ದರೆ, 32 ಗ್ರಾಂ ಪ್ಯಾಕೆಟ್ಟಿಗೆ 7 ರೂ. ಜಾಸ್ತಿಯಾಗಿದೆ ಎಂದು ಆಕೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅರೋನ್‌ ಹ್ಯಾರಿ ಎಂಬವರು ಆಕೆಯ ಪತ್ರವನ್ನು ಟ್ವೀಟ್‌ ಮಾಡಿದ್ದು ಅದೀಗ ವೈರಲ್‌ ಆಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next