Advertisement

ಆಟವಾಡುತ್ತಿರುವ ವೇಳೆ ಕಚ್ಚಿದ ಸಾಕು ನಾಯಿ: 6 ವರ್ಷದ ಬಾಲಕಿಯ ಮುಖಕ್ಕೆ 1000 ಹೊಲಿಗೆ

10:03 PM Feb 28, 2023 | Team Udayavani |

ಒಂಟಾರಿಯೊ: ಸಾಕು ನಾಯಿಯೊಂದು ಬಾಲಕಿಯ ಮುಖಕ್ಕೆ ಕಡಿದ ಪರಿಣಾಮ ಒಂದಲ್ಲ ಎರಡಲ್ಲ ಬರೋಬ್ಬರಿ ಒಂದು ಸಾವಿರ ಹೊಲಿಗೆ ಹಾಕಿದ ಘಟನೆ ಅಮೆರಿಕದ ಒಂಟಾರಿಯೊ ಪ್ರಾಂತ್ಯದ ಚೆಸ್ಟರ್‌ವಿಲ್ಲೆ ಗ್ರಾಮದಲ್ಲಿ ನಡೆದಿದೆ.

Advertisement

ಬಾಲಕಿ ಲಿಲ್ಲಿ (6) ಸಾಕು ನಾಯಿಯಿಂದ ದಾಳಿಗೊಳಗಾದ ಬಾಲಕಿ.

ಘಟನೆ ವಿವರ : 6 ವರ್ಷದ ಲಿಲ್ಲಿ ತನ್ನ ನೆರೆಮನೆಯ ಗೆಳತಿಯೊಂದಿಗೆ ಆಟವಾಡಲು ಆಕೆಯ ಮನೆಗೆ ಹೋಗಿದ್ದಾಳೆ, ಈ ವೇಳೆ ಗೆಳತಿಯ ತಾಯಿ ಮನೆಯ ಸಾಕು ನಾಯಿ (ಪಿಟ್ ಬುಲ್) ಅನ್ನು ಜೊತೆಗೆ ತಂದಿದ್ದಾರೆ, ಈ ವೇಳೆ ಬಾಲಕಿಯನ್ನು ಕಂಡ ನಾಯಿ ಮೈಮೇಲೆ ಹಾರಿ ಮುಖಕ್ಕೆ ಕಚ್ಚಿದೆ, ಪರಿಣಾಮ ಬಾಲಕಿಗೆ ಗಂಭೀರ ಗಾಯಗೊಂಡಿದ್ದಾಳೆ ಕೂಡಲೇ ಬಾಲಕಿಯನ್ನು  ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ, ನಾಯಿ ದಾಳಿಯಿಂದ ಬಾಲಕಿಯ ಮುಖಕ್ಕೆ ಆದ ಗಾಯಕ್ಕೆ ವೈದ್ಯರು ಒಂದಲ್ಲ ಎರಡಲ್ಲ ಬರೋಬ್ಬರಿ ಒಂದು ಸಾವಿರಕ್ಕೂ ಹೆಚ್ಚು ಹೊಲಿಗೆಗಳನ್ನು ಹಾಕಿದ್ದಾರೆ. ಹೊಲಿಗೆ ಹಾಕಿದ ಪರಿಣಾಮ ಬಾಲಕಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ, ಅಲ್ಲದೆ ಕೃತಕ ಉಸಿರಾಟದ ವ್ಯವಸ್ಥೆಯನ್ನು ಮಾಡಲಾಗಿದೆ.

ಅಷ್ಟು ಮಾತ್ರವಲ್ಲದೆ ಲಿಲ್ಲಿಯ ಲಾಲಾರಸ ಗ್ರಂಥಿಗಳು ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಅವಳ ಮುಖದ ಸ್ನಾಯುಗಳು ಹಾನಿಗೊಳಗಾಗಿವೆ ಎಂದು ವೈದ್ಯರು ತಿಳಿಸಿದ್ದು ಹೆಚ್ಚಿನ ಹಣದ ಅವಶ್ಯಕತೆ ಇರುವುದನ್ನು ಅರಿತ ಆಕೆಯ ಕುಟುಂಬದ ಸ್ನೇಹಿತರು ಸಹಾಯಕ್ಕಾಗಿ ‘ಗೋ ಫಂಡ್ ಮೀ’ ಎಂಬ ಅಭಿಯಾನ ಆರಂಭಿಸಿದ್ದಾರೆ.

ಸದ್ಯ ಬಾಲಕಿ ಇನ್ನು ಕೆಲವು ದಿನಗಳ ಕಾಲ ಕೃತಕ ಉಸಿರಾಟದಲ್ಲೇ ಇರಬೇಕಾಗುತ್ತದೆ ಎಂದು ವೈದ್ಯಕೀಯ ಮೂಲಗಳು ಹೇಳಿವೆ, ಏನೇ ಆಗಲಿ ಆದಷ್ಟು ಬೇಗ ಬಾಲಕಿ ಗುಣಮುಖವಾಗಲಿ ಎಂಬುದು ನಮ್ಮ ಆಶಯ.

Advertisement

ಇದನ್ನೂ ಓದಿ: ಉತ್ತರ ಪ್ರದೇಶ: ಇನ್ನು ಮುಂದೆ ಸರಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಬಳಸುವಂತಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next