ವಾಷಿಂಗ್ಟನ್: 6 ವರ್ಷದ ವಿದ್ಯಾರ್ಥಿಯೊಬ್ಬ ತರಗತಿಯೊಳಗೆ ಶಿಕ್ಷಕಿ ಮೇಲೆ ಗುಂಡು ಹಾರಿಸಿರುವ ಘಟನೆ ಪೂರ್ವ ಯುಎಸ್ ನ ವರ್ಜೀನಿಯಾದಲ್ಲಿ ಶುಕ್ರವಾರ (ಜ.6 ರಂದು) ನಡೆದಿದೆ.
ತರಗತಿಯೊಳಗೆ ಪಾಠ ನಡೆಯುವಾಗಲೇ ಶಿಕ್ಷಕಿ ಮೇಲೆ 6 ವರ್ಷದ ವಿದ್ಯಾರ್ಥಿ ಗುಂಡು ಹಾರಿಸಿದ್ದಾನೆ. ಕೂಡಲೇ ಘಟನೆಯನ್ನರಿತ ಶಾಲಾ ಸಿಬ್ಬಂದಿಗಳು ಶಿಕ್ಷಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೃತ್ಯವೆಸಗಿದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದೊಂದು ಆಕಸ್ಮಿಕ ಘಟನೆಯಲ್ಲ. ಬಾಲಕ ಆಕಸ್ಮಿಕವಾಗಿ ಗುಂಡು ಹಾರಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಶಿಕ್ಷಕಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಕಳೆದ ವರ್ಷದ ಮೇನಲ್ಲಿ ಟೆಕ್ಸಾಸ್ ನಲ್ಲಿ 18 ವರ್ಷ ಬಂದೂಕುಧಾರಿಯೊಬ್ಬ ಇಬ್ಬರು ಶಿಕ್ಷಕರನ್ನು ಸೇರಿ 19 ಮಂದಿಯನ್ನು ಗುಂಡು ಹಾರಿಸಿ ಅಂತ್ಯವಾಗಿಸಿದ್ದ. ಕಳೆದ ವರ್ಷ ಅಮೆರಿಕಾದಲ್ಲಿ ಒಟ್ಟು 44 ಸಾವಿರ ಗುಂಡಿನ ದಾಳಿ ಪ್ರಕರಣಗಳು ನಡೆದಿದೆ.