Advertisement

ಕೃಷ್ಣಾ ನದಿಗೆ 6 ಸಾವಿರ ಕ್ಯೂಸೆಕ್‌ ನೀರು ಬಿಡುಗಡೆ

04:55 PM Aug 05, 2022 | Team Udayavani |

ನಾರಾಯಣಪುರ: ಬಸವಸಾಗರಕ್ಕೆ ಒಳಹರಿವು ತಗ್ಗಿದ್ದರಿಂದ ಜಲಾಶಯದ ಎಲ್ಲ ಕ್ರಸ್ಟ್‌ಗೇಟ್‌ ಗಳನ್ನು ಬಂದ್‌ ಮಾಡಲಾಗಿದೆ. ಸದ್ಯ ಜಲಾಶಯಕ್ಕೆ ಹೊಂದಿಕೊಂಡಿರುವ ಮುರುಡೇಶ್ವರ ಜಲವಿದ್ಯುತ್‌ ಸ್ಥಾವರ ಮೂಲಕ 6 ಸಾವಿರ ಕ್ಯುಸೆಕ್‌ನಷ್ಟು ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ.

Advertisement

ಗುರುವಾರ ಬೆಳಗ್ಗೆ ಆಲಮಟ್ಟಿ ಶಾಸ್ತ್ರೀ ಸಾಗರದಿಂದ ಬಸವಸಾಗರಕ್ಕೆ ಒಳಹರಿವು 35 ಸಾವಿರ ಕ್ಯೂಸೆಕ್‌ ನಷ್ಟಿತ್ತು. ಆಗ ಕೃಷ್ಣಾ ನದಿಗೆ 34 ಸಾವಿರ ಕ್ಯೂಸೆಕ್‌ನಷ್ಟು ನೀರನ್ನು ಹರಿಸಲಾಗಿತ್ತು. ಸಂಜೆ ವೇಳೆಗೆ ಒಳಹರಿವು 6 ಸಾವಿರಕ್ಕೆ ಇಳಿಕೆಯಾಗಿದ್ದರಿಂದ ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಜಲಾಶಯದ ಅಧಿಕಾರಿಗಳ ಮಾಹಿತಿಯಂತೆ 492.25 ಮೀಟರ್‌ ಗರಿಷ್ಟ ಮಟ್ಟದಲ್ಲಿ 491.81 ಮೀಟರ್‌ ಇದೆ. 33.31 ಟಿಎಂಸಿ ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯದಲ್ಲಿ 31.27 ಟಿಎಂಸಿ ಅಡಿ ನೀರು ಇದೆ. ಒಳಹರಿವು 6 ಸಾವಿರ ಕ್ಯೂಸೆಕ್‌ ಇದೆ. ಹೊರಹರಿವು 6 ಸಾವಿರ ಕ್ಯೂಸೆಕ್‌ ಇದೆ ಎಂದು ತಿಳಿದು ಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next