Advertisement

ನಾಳೆ‌ ಬೊಮ್ಮಾಯಿ ಸರಕಾರಕ್ಕೆ 6 ತಿಂಗಳು : ಮುಂದೆ ಸಾಲು ಸಾಲು ಸವಾಲು

11:22 AM Jan 27, 2022 | Team Udayavani |

ಬೆಂಗಳೂರು : ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಜ.28 ಕ್ಕೆಆರು ತಿಂಗಳು ಪೂರ್ತಿಯಾಗಲಿದ್ದು, ಹಲವು ಅಡೆತಡೆ ಮಧ್ಯೆ ಸರಕಾರ ಈಗ ಸ್ಥಿರತೆಯ ಮಂತ್ರ ಪಠಿಸಲಾರಂಭಿಸಿದೆ.

Advertisement

ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ‌ ದಿನದಿಂದಲೂ, ಮೂಲ- ವಲಸಿಗ, ಹಿರಿಯ-ಕಿರಿಯ ಎಂಬ ವಿವಾದ ನಡೆಯುತ್ತಲೇ ಇದೆ. ಇದರ ಮಧ್ಯೆ ಮುಖ್ಯಮಂತ್ರಿ ಬದಲಾವಣೆಯ ಗಾಳಿಯೂ ಎರಡು ಬಾರಿ ಬಲವಾಗಿ ಬೀಸಿ ಹೋಗಿದೆ.‌ ಇದೆಲ್ಲದರ ಮಧ್ಯೆಯೂ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಆರು ತಿಂಗಳು ಪೂರ್ಣಗೊಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಶುಕ್ರವಾರ ವಿಧಾನಸೌಧದಲ್ಲಿ ಕಿರಿ ಸಮಾರಂಭ ಆಯೋಜಿಸಲಾಗಿದೆ. ಆರು ತಿಂಗಳು ಸಾಧನೆಯ ಕಿರು ಪುಸ್ತಕವನ್ನು ಬೊಮ್ಮಾಯಿ ಬಿಡುಗಡೆಗೊಳಿಸಲಿದ್ದಾರೆ.

ಇಂದು ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಮಧ್ಯಾಹ್ನ 12ಕ್ಕೆ ವಿಧಾನಸೌಧದಲ್ಲಿ ಸಭೆ ಆರಂಭವಾಗಲಿದ್ದು, ಸಿಎಂ ಬೊಮ್ಮಾಯಿ ಸಂಪುಟದ ಎಲ್ಲಾ ಸಚಿವರು ಹಾಜರಾಗಲಿದ್ದಾರೆ. ಸಂಪುಟ ಪುನಾರ್ರಚನೆ ಸಾಧ್ಯತೆ ಹಿನ್ನೆಲೆಯಲ್ಲಿ ಇಂದಿನ ಸಂಪುಟ ಸಭೆಗೆ ಮಹತ್ವ ಲಭಿಸಿದೆ.

ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ರೈತರ‌ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನ ಘೋಷಣೆ ಮಾಡಿದ್ದು ಬೊಮ್ಮಾಯಿ ಸರಕಾರದ ಮಹತ್ವದ ಸಾಧನೆಯಾಗಿದ್ದು, ಸ್ವಾತಂತ್ರ್ಯ ಉತ್ಸವದ ದಿನ ಅಮೃತ ಸರಣಿಯ ಕಾರ್ಯಕ್ರಮವನ್ನು ಘೋಷಣೆ ಮಾಡಿರುವುದು ಆಡಳಿತಾತ್ಮಕ ಸಾಧನೆ.

ಆದರೆ ರಾಜಕೀಯವಾಗಿ ಬೊಮ್ಮಾಯಿ ಸವಾಲುಗಳನ್ನೇ ಎದುರಿಸಿದ್ದಾರೆ. ತವರು ಜಿಲ್ಲೆಯ ಹಾನಗಲ್ ಉಪಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾಗಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಹದಿನೈದು ಸ್ಥಾನದ ಗುರಿ ತಲುಪಲು ಸಾಧ್ಯವಾಗಿಲ್ಲ.

Advertisement

ಹೀಗಾಗಿ ಆರು ತಿಂಗಳು ಅಧಿಕಾರ ಪೂರೈಸಿದರೂ ಬೊಮ್ಮಾಯಿ ಅವರ ಮುಂದೆ ಸಾಲು ಸಾಲು ಸವಾಲುಗಳಿವೆ. ಮುಂದಿನ ಚುನಾವಣೆಯನ್ನು ಬೊಮ್ಮಾಯಿ ನೇತೃತ್ವದಲ್ಲಿ ಎದುರಿಸುತ್ತೇವೆ ಎಂದು ವರಿಷ್ಠರು ಘೋಷಣೆ ಮಾಡಿದ್ದರೂ ಪ್ರಶ್ನೆಗಳು ಮಾತ್ರ ಉಳಿದಿವೆ ಎಂಬ‌ ಮಾತು ಬಿಜೆಪಿಯಿಂದಲೇ ಕೇಳಿ ಬರುತ್ತಿದೆ.

ಹೊಸ ಘೋಷಣೆ ಇಲ್ಲ

ನಾಳೆ ಯಾವುದೇ ಸಪ್ರೈಸ್ ಘೋಷಣೆ ಇಲ್ಲ.‌ಆರು ತಿಂಗಳಿಗೆಲ್ಲ ಹೊಸ  ಘೋಷಣೆ ಮಾಡಲ್ಲ ಎಂದು ಸಿಎಂ‌ ಬಸವರಾಜ್ ಬೊಮ್ಮಾಯಿ‌ ಹೇಳಿದ್ದಾರೆ.

ನಾಳೆ ಸಿಎಂ ಆರು ತಿಂಗಳು ಪೂರೈಕೆ ಮತ್ತು ಹುಟ್ಟುಹಬ್ಬದ ಹಿನ್ನೆಲೆ ರಾಜ್ಯಕ್ಕೆ ಗಿಫ್ಟ್ ನೀಡುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,ನಮ್ಮ ಸರ್ಕಾರ ಸ್ಪಂದನಶೀಲ ಸರ್ಕಾರ. ಯಾವಾಗವಾಗ ಸಮಸ್ಯೆ ಬಂದಿದ್ದಾವೋ, ಅದಕ್ಕೆಲ್ಲಾ ನಾವು ಸ್ಪಂದನೆ ಮಾಡಿದ್ದೇವೆ ಎಂದರು.

ನಾನು ಹುಟ್ಟುಹಬ್ಬದ ಆಚರಿಸಿಕೊಳ್ಳಲ್ಲ. ನಾಳೆ ಆರು ತಿಂಗಳು ಪೂರೈಸಿದ್ದಕ್ಕೆ ಆಡಳಿತದ ಪಕ್ಷಿನೋಟದ ಪುಸ್ತಕ ಬಿಡುಗಡೆ ಮಾಡ್ತೀವಿ.‌ಹೊಸ ಘೋಷಣೆ ಯಾವುದು ಇಲ್ಲ ಎಂದು ಹೇಳಿದರು.

ಕ್ಯಾಬಿನೆಟ್ ಅಜೆಂಡಾ ಮೇಲೆ ಚರ್ಚೆಯಾಗುತ್ತೆ. ಕೋವಿಡ್ ನಿರ್ವಹಣೆ ಬಗ್ಗೆ ತಜ್ಞರಿಗೆ ವರದಿ ಕೇಳಿದ್ದೇನೆ. ವಿನಾಯಿತಿ ಬಗ್ಗೆ ಕ್ಯಾಬಿನೆಟ್‌ನಲ್ಲಿ ಏನಾದ್ರೂ ಬಂದ್ರೆ ಚರ್ಚೆ ಮಾಡ್ತೀವಿ ಎಂದರು.

ಜೋಳ ಖರೀದಿ ಮಾಡಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ.ಈಗ ರಾಗಿ ಖರೀದಿ ಮುಂದುವರಿಸುವ ಬಗ್ಗೆ ನಿರ್ಧಾರ ಮಾಡಿ, ರೈತರಿಗೆ ಅನುಕೂಲ ಮಾಡಿಕೊಡ್ತೀವಿ. ಹೀಗೆ ನಿರಂತರವಾಗಿ ಜನರಿಗೆ ಸರ್ಕಾರ ಸಹಾಯ ಮಾಡುತ್ತಾ ಬರ್ತಿದೆ‌ ನಮ್ಮ ಸರಕಾರ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next