Advertisement

Haryana: ನಿಂತಿದ್ದ ವಾಹನಕ್ಕೆ ಢಿಕ್ಕಿಯಾದ ಕಾರು; 6 ಮಂದಿ ದುರ್ಮರಣ

09:53 AM Mar 11, 2024 | Team Udayavani |

ಚಂಡೀಗಢ: ನಿಂತಿದ್ದ ವಾಹನಕ್ಕೆ ಎಕ್ಸ್‌ ಯುವಿ ಕಾರು ಢಿಕ್ಕಿ ಹೊಡೆದ ಪರಿಣಾಮ 6 ಮಂದಿ ಸಾವನ್ನಪ್ಪಿರುವ ಘಟನೆ ಹರಿಯಾಣದ ರೇವಾರಿಯಲ್ಲಿ ಭಾನುವಾರ ತಡರಾತ್ರಿ (ಮಾ.10 ರಂದು) ನಡೆದಿದೆ.

Advertisement

ಮಸಾಣಿ ಗ್ರಾಮದ ಸರ್ಕಾರಿ ಶಾಲೆಯ ಬಳಿ ಅಪಘಾತ ಸಂಭವಿಸಿದ್ದು, ಎಕ್ಸ್‌ಯುವಿ ಕಾರು ಖಾಟೂ ಗ್ರಾಮದಿಂದ ದೆಹಲಿಗೆ ಹಿಂತಿರುಗುತ್ತಿದ್ದ ವೇಳೆ ಈ ದುರಂತ ಘಟನೆ ಸಂಭವಿಸಿದೆ.

ಖಾರ್ಖರ ಗ್ರಾಮದ ಬಳಿ ಪಂಕ್ಚರ್ ಆದ ಕಾರಿನ ಟೈರನ್ನು ಬದಲಾಯಿಸುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಎಕ್ಸ್‌ಯುವಿ ಕಾರು ನಿಂತಿದ್ದ ವಾಹನಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ. ಪರಿಣಾಮ ನಾಲ್ವರು ಮಹಿಳೆಯರು ಮತ್ತು ಇಬ್ಬರು ಪುರುಷರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಘಟನೆಯಲ್ಲಿ ಆರು ಮಂದಿಗೆ ಗಾಯಗಳಾಗಿವೆ ಎಂದು ವರದಿ ತಿಳಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next