Advertisement

ಕೇವಲ 20 ನಿಮಿಷದಲ್ಲಿ ಹೊಸಕೋಟೆ ತಲುಪಿ

03:03 PM May 27, 2023 | Team Udayavani |

ದೇವನಹಳ್ಳಿ: ತಾಲೂಕಿನ ಜಿಲ್ಲಾಡಳಿತ ಭವನದಿಂದ ಪಟ್ಟಣದ ಹೊರವಲಯದಲ್ಲಿ ಸಾಗಿ ಹೊಸಕೋಟೆ ನಗರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 207ರ ಕಾಮಗಾರಿ ಬಹುತೇಕ ಪೂರ್ಣವಾಗಿದ್ದು, 37.6 ಕಿ.ಮೀ. ಆರು ಪಥ ಪೂರ್ಣಗೊಂಡು ಉದ್ಘಾಟನೆಗಾಗಿ ಕಾಯುತ್ತಿದೆ.

Advertisement

ಬೆಂಗಳೂರು ಮಹಾನಗರದ ಒಳಭಾಗದಿಂದ ಪಕ್ಕದ ರಾಜ್ಯಗಳಿಗೆ ಸಾಗುತ್ತಿದ್ದ ವಾಹನ ದಟ್ಟಣೆಯನ್ನು ಕಡಿಮೆಗೊಳಿಸಲು, ನೆಲಮಂಗಲದ ದಾಬಸ್‌ಪೇಟೆ ಯಿಂದ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋ ಟೆಯ ಮೂಲಕ ಹೈದ್ರಾಬಾದ್‌, ತಮಿಳುನಾಡಿಗೆ ಸಂಪರ್ಕ ಕಲ್ಪಿಸಲು “ಭಾರತ್‌ ಮಾಲ ಯೋಜನೆ’ಯಡಿ ಈ ಹೆದ್ದಾರಿಯನ್ನು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿ ದೆ. ಇದರಿಂದ ಸರಕು ಸಾಗಣೆ ಕಾರ್ಯ ಚಟು ವಟಿಕೆಗಳು ಹೆಚ್ಚಾಗಲಿದ್ದು, ಸ್ಥಳೀಯವಾಗಿ ಆರ್ಥಿಕತೆ ಬಲಿಷ್ಠವಾಗಲಿದೆ.

ಆರ್ಥಿಕ ಕಾರಿಡಾರ್‌: ದೇವನಹಳ್ಳಿಯ ಜಿಲ್ಲಾಡಳಿತ ಭವನದಿಂದ ಹೊಸಕೋಟೆಯವರೆಗಿನ 37.6 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಒಟ್ಟು 1278 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಅನೇಕ ವಿಶೇಷತೆಗಳನ್ನು ಈ ಹೆದ್ದಾರಿ ಹೊಂದಿದೆ. ಗ್ರಾಮೀಣ ಭಾಗದಿಂದ ಪಟ್ಟಣ, ಕೈಗಾರಿಕಾ ಪ್ರದೇಶದ ಮೂಲಕ ಹಾದು ಹೋಗಿ ನೆರೆಯ ರಾಜ್ಯಗಳ ರಾಜಧಾನಿಗೆ ನೇರ ಸಂಪರ್ಕ ಕಲ್ಪಿಸುವ ಈ ರಸ್ತೆಯೂ ಆರ್ಥಿಕ ಕಾರಿಡಾರ್‌ ಆಗಿ ಪರಿವರ್ತನೆಗೊಳ್ಳಲಿದೆ.

ಪೂರ್ಣ ಸೌರಶಕ್ತಿ ಬಳಕೆ: ಅಗತ್ಯವಿರುವ ಕಡೆಗಳಲ್ಲಿ ಸರ್ವಿಸ್‌ ರಸ್ತೆಗಳನ್ನು ಒದಗಿಸಲಾಗಿದೆ. ಸ್ಥಳೀಯವಾಗಿ ಲಭ್ಯವಾಗುವ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಈ ರಸ್ತೆ ನಿರ್ಮಾಣ ಮಾಡಿರುವುದು ವಿಶೇಷವಾಗಿದೆ. ರಸ್ತೆಯ ಬದಿಗಳಲ್ಲಿ ಅಳವಡಿಸಿರುವ ವಿದ್ಯುತ್‌ ದೀಪ ಗಳು ಸ್ವಯಂ ಚಾಲಿತವಾಗಿ ವಾತಾವರಣಕ್ಕೆ ತಕ್ಕಂತೆ ಕೆಲಸ ಮಾಡಲಿದ್ದು, ಎಲ್ಲವೂ ಸೌರಶಕ್ತಿಯ ಸಹಾಯ ದಿಂದ ಕೆಲಸ ಮಾಡುತ್ತವೆ ಎಂಬುದು ವಿಶೇಷ.

ಸಿಸಿ ಕ್ಯಾಮೆರಾ ಅಳವಡಿಕೆ: ಭದ್ರತಾ ದೃಷ್ಟಿಯಿಂದ ನಿಗದಿತ ದೂರಕ್ಕೆ ಅತೀ ಸೂಕ್ಷ್ಮ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಅವುಗಳೂ ಸೌರ ವಿದ್ಯುತ್‌ನಿಂದಲೇ ಕೆಲಸ ಮಾಡುತ್ತವೆ. ರಸ್ತೆ ಸುರಕ್ಷತೆಗಾಗಿ ಹಾಕಲಾಗಿರುವ ಎಲ್‌ಇಡಿ ಫ‌ಲಕಗಳಲ್ಲಿ ಕನ್ನಡ, ಇಂಗ್ಲಿಷ್‌, ಹಿಂದಿ ಭಾಷೆ ಪ್ರದರ್ಶನಗೊಳ್ಳಲಿದ್ದು, ಈಗಾಗಲೇ ಸಾಕಷ್ಟು ವಾಹನ ಸವಾರರು ಈ ರಸ್ತೆಯ ಮೂಲಕ ಸಂಚಾರ ಮಾಡುತ್ತಿದ್ದಾರೆ.

Advertisement

ಹೊಸಕೋಟೆಗೆ ಕೇವಲ 20 ನಿಮಿಷ: ಈ ಹಿಂದೆ ಇದ್ದ ರಸ್ತೆಯೂ 2 ಪಥದಾಗಿದ್ದು, ಹೊಸಕೋಟೆ ನಗರಕ್ಕೆ ಹೋಗಬೇಕಾದರೇ ಕನಿಷ್ಠ ಒಂದೂವರೆ ಗಂಟೆ ಬೇಕಿತ್ತು. ಈಗ 20 ನಿಮಿಷದಲ್ಲೇ ಹೊಸಕೋಟೆ ನಗರ ಹೊರವಲಯಕ್ಕೆ ಸೇರಿಕೊಳ್ಳಬಹುದಾಗಿದೆ.

ಸಂಚಾರ ದಟ್ಟಣೆ, ವಾಹನ ಸವಾರರಿಗಿಲ್ಲ ಕಿರಿಕಿರಿ ; ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್‌) ಸಮೀಪದಲ್ಲೇ ಇರುವ ಪಟ್ಟಣ ಮತ್ತು ತಾಲೂಕಿನ ಹಲವು ಹಳ್ಳಿಗಳ ಮಧ್ಯೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 207ಈ ಹಿಂದೆ ಸಾರ್ವಜನಿಕರ ಸಂಚಾರಕ್ಕೆ ಸವಾಲಾಗಿತ್ತು. ವಾಹನ ಸವಾರರು ನಿತ್ಯ ಸಂಚಾರ ದಟ್ಟಣೆಯ ಕಿರಿಕಿರಿ ಅನುಭವಿಸುತ್ತಿದ್ದರು. ಇನ್ನು ಮುಂದೆ ಸುಗಮ ಮತ್ತು ಸುರಕ್ಷತೆಯ ಸಂಚಾರಕ್ಕೆ ಉತ್ತಮ ರಾಷ್ಟ್ರೀಯ ಹೆದ್ದಾರಿ ಪ್ರಾರಂಭವಾಗಿ ಬಹುತೇಕ ಟ್ರಾಫಿಕ್‌ ಸಮಸ್ಯೆಯಿಂದ ಹೊರಬೀಳುವಂತಾಗಿದೆ. ನಗರದಲ್ಲಿ ಹಾದು ಹೋಗುವ ರಸ್ತೆ ಅಗಲೀಕರಣ ವಾಗದೇ, ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗ್ಗೆ ಮತ್ತು ಸಂಜೆ ಗಂಟೆಗಟ್ಟಲೇ ಲಾರಿಗಳ ಸಂಚಾರ ನಡೆಯುತ್ತಲೇ ಇರುತ್ತಿತ್ತು. ಆಗ ಟ್ರಾಫಿಕ್‌ ಸಮಸ್ಯೆ ಎದುರಾಗಿ ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿತ್ತು. ಇದೀಗ 6 ಪಥದ ರಸ್ತೆ ನಿರ್ಮಾಣವಾಗಿರುವುದು ಟ್ರಾಫಿಕ್‌ ಸಮಸ್ಯೆ ಇಲ್ಲದೆ ವಾಹನ ಸವಾರರು ಮುಕ್ತವಾಗಿ ಸಂಚರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next