ಹೊಸದಿಲ್ಲಿ: ಸಾಲ ನೀಡಿದ ಸಂಸ್ಥೆಗಳು ನಮ್ಮ ಖಾಸಗಿ ಮಾಹಿತಿಯನ್ನು ಬಹಿರಂಗಗೊಳಿಸುತ್ತಿದ್ದಾರೆ ಎಂಬುದು ದೇಶದ 10ರಲ್ಲಿ 6 ಮಂದಿಯ ಆತಂಕ!
ಹೌದು, ಲೋಕಲ್ ಸರ್ಕಲ್ ನಡೆಸಿದ ಸಮೀಕ್ಷೆಯಲ್ಲಿ ಈ ಆಘಾತಕಾರಿ ಅಂಶ ಬಹಿರಂಗವಾಗಿದೆ. ಶೇ.59ರಷ್ಟು ಮಂದಿ ಈ ಬಗ್ಗೆ ಪ್ರಸ್ತಾವಿಸಿದ್ದು, ಐದು ವರ್ಷಗಳಲ್ಲಿ ನಾವು ಸಾಲ ಪಡೆದ ಸಂಸ್ಥೆಯ ಹೊರತಾಗಿ ಬೇರೆಯವರೂ ನಮ್ಮನ್ನು ಸಾಲಕ್ಕಾಗಿ ಸಂಪರ್ಕಿಸಿದ್ದಾರೆ ಎಂದು ಹೇಳಿದ್ದಾರೆ.
ಹಾಗೆಯೇ ವಿಮಾದಾರರೂ ತಮ್ಮ ಖಾಸಗಿತನದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ತಾವು ಹೊಂದಿರುವ ವಿಮೆ ಬಗ್ಗೆ ಅವರಿಗೆ ಮಾಹಿತಿ ಸಿಕ್ಕಿದ್ದು, ಇತರ ವಿಮಾ ಕಂಪೆನಿಗಳೂ ನಮ್ಮನ್ನು ಕೇಳುತ್ತಿವೆ ಎಂಬುದು ಶೇ. 40ರಷ್ಟು ಮಂದಿಯ ಅಭಿಪ್ರಾಯ. ಶೇ.34ರಷ್ಟು ಬ್ಯಾಂಕ್ ಖಾತೆದಾರರೂ ತಮ್ಮ ಖಾಸಗಿ ವಿವರಗಳಿಗೆ ಧಕ್ಕೆಯಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ.
ಬಹಳಷ್ಟು ಜನರ ಪ್ರಕಾರ, ಸಂಸ್ಥೆಗಳು ಅಥವಾ ಅಲ್ಲಿನ ನೌಕರರೇ ಖಾಸಗಿ ಮಾಹಿತಿ ಬಹಿರಂಗ ಮಾಡಿ ದ್ದಾರೆ ಎಂಬುದು. ದೇಶದಲ್ಲಿ ಖಾಸಗಿತನ ರಕ್ಷಣೆಯ ಪ್ರಬಲ ಕಾನೂನು ಜಾರಿಯಾಗಬೇಕಿದೆ ಎನ್ನುತ್ತಾರೆ.
Related Articles
ಕೇವಲ ನಮ್ಮ ಪ್ಯಾನ್ ಕಾರ್ಡ್ ಅಷ್ಟೇ ಅಲ್ಲ, ಆಧಾರ್ ಕಾರ್ಡ್, ವಿಮಾ ಪಾಲಿಸಿಗಳು, ವೈಯಕ್ತಿಕ ಮತ್ತು ವ್ಯಾಪಾರ ವಿಷಯಗಳು, ಉದ್ಯೋಗ ಸಂಬಂಧಿ ಸೋರಿಕೆಯಾಗುತ್ತಿವೆ ಎಂಬುದು ಜನರ ಆತಂಕ.
41 ಸಾವಿರ ಮಂದಿ ಅಭಿಪ್ರಾಯ :
ಲೋಕಲ್ ಸರ್ಕಲ್ 319 ಜಿಲ್ಲೆಗಳ 41 ಸಾವಿರ ಮಂದಿಯನ್ನು ಮಾತನಾಡಿಸಿದೆ. ಇದ ರಲ್ಲಿ ಶೇ.64ರಷ್ಟು ಮಂದಿ ಪುರುಷರು ಮತ್ತು ಶೇ.36ರಷ್ಟು ಮಹಿಳೆಯರು. ಶೇ.59 ಮಂದಿ, ತಾವು ಪಡೆದ ಆಫರ್‌ಗಳನ್ನೇ ಇತರ ಬ್ಯಾಂಕುಗಳೂ ನೀಡುತ್ತವೆ ಎಂದಿದ್ದಾರೆ. ಇವರು ಇಮೇಲ್, ಫೋನ್ ಕಾಲ್, ಎಸ್‌ಎಂಎಸ್, ವಾಟ್ಸ್ ಆ್ಯಪ್ ಸೇರಿದಂತೆ ವಿವಿಧ ರೂಪದಲ್ಲಿ ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ನಮ್ಮ ಖಾಸಗಿ ಮಾಹಿತಿ ಇವರಿಗೆ ಸೋರಿಕೆಯಾಗಿದೆ ಎಂದಿದ್ದಾರೆ.