Advertisement

ಕರಾವಳಿಯ 6 ಸರಕಾರಿ ಶಾಲೆಗಳಿಗೆ ಪಾರಂಪರಿಕ ಪಟ್ಟ !

12:30 AM Feb 21, 2019 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಆರು ಶಾಲೆಗಳು ಸಹಿತ ಶತಮಾನ ಪೂರೈಸಿರುವ 100 ಸರಕಾರಿ ಶಾಲೆಗಳಿಗೆ ಪಾರಂಪರಿಕ ಶಾಲಾ ಸ್ಥಾನಮಾನದ ಗೌರವ ಲಭ್ಯ ವಾಗಲಿದೆ. 

Advertisement

ಈ ಸಂಬಂಧ ರಾಜ್ಯ ಸರ ಕಾರ ಈಗಾಗಲೇ ಸಾರ್ವ ಜನಿಕ ಶಿಕ್ಷಣ ಇಲಾಖೆ ಮೂಲಕ ಶಾಲೆಗಳನ್ನು ಆಯ್ಕೆ ಮಾಡಿ ಅವುಗಳ ಅಭಿವೃದ್ಧಿಗೆ ಮೊದಲನೆ ಹಂತದ ಆನುದಾನ 2.50 ಲಕ್ಷ ರೂ. ಗಳನ್ನೂ ಬಿಡುಗಡೆ ಮಾಡಿದೆ.

ಶತಮಾನವನ್ನು ಪೂರೈಸಿರುವ ಅದರಲ್ಲೂ ಹಳೆಯ ಸರಕಾರಿ ಶಾಲೆಗಳ ಪಾರಂಪರಿಕ ನೆಲೆಗಟ್ಟನ್ನು ಉಳಿಸಿಕೊಂಡು ಹೊಸ ತಲೆಮಾರಿಗೆ ಪರಿ ಚಯಿಸುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. 

ಆಯ್ಕೆ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಆರು ಶಾಲೆಗಳು ಸೇರಿದ್ದು, ರಾಜ್ಯಾದ್ಯಂತದ ಒಂದು ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ 75 ಪ್ರಾಥಮಿಕ ಮತ್ತು 25 ಪ್ರೌಢ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. 2018-19ನೇ ಸಾಲಿನಲ್ಲಿ  ನೂರು ಶಾಲೆಗಳನ್ನು ಪಾರಂಪರಿಕ ಶಾಲೆಗಳೆಂದು ಗುರುತಿಸಿ ಮೇಲ್ದರ್ಜೆಗೇರಿಸಲು ಸರಕಾರ ಉದ್ದೇಶಿಸಿತ್ತು.

ಪ್ರಾಥಮಿಕ ಶಾಲೆಗಳ ಪೈಕಿ ದ.ಕ.
ಜಿಲ್ಲೆಯಲ್ಲಿ 1879ರಲ್ಲಿ ನಿರ್ಮಾಣ ವಾದ ವಿಟ್ಲ ಸರಕಾರಿ ಮಾದರಿ ಹಿ.ಪ್ರಾ. ಶಾಲೆ, 1836ರಲ್ಲಿ ನಿರ್ಮಾಣವಾದ ಉಪ್ಪಿನಂಗಡಿ ಸ.ಮಾ.ಹಿ.ಪ್ರಾ. ಶಾಲೆ ಮತ್ತು ಉಡುಪಿ ಜಿಲ್ಲೆಯಲ್ಲಿ 1893ರಲ್ಲಿ ನಿರ್ಮಾಣವಾದ ತೆಕ್ಕಟ್ಟೆ ಸ.ಹಿ.ಪ್ರಾ. ಶಾಲೆ, 1895ರಲ್ಲಿ ನಿರ್ಮಾಣವಾದ ಬ್ರಹ್ಮಾವರ ಸ.ಹಿ.ಪ್ರಾ. ಶಾಲೆ ಆಯ್ಕೆಯಾಗಿವೆ. ಪ್ರೌಢಶಾಲೆಗಳ ಪೈಕಿ 1912ರಲ್ಲಿ ನಿರ್ಮಾಣವಾದ ದ.ಕ. ಜಿಲ್ಲೆಯ ಸಂಪಾಜೆ ಸರಕಾರಿ ಪ್ರೌಢಶಾಲೆ ಮತ್ತು1865ರಲ್ಲಿ ನಿರ್ಮಾಣವಾದ ಕುಂದಾಪುರ ಸರಕಾರಿ ಪ.ಪೂ. ಕಾಲೇಜು ಪ್ರೌಢಶಾಲೆ ಆಯ್ಕೆಯಾಗಿವೆ. 

Advertisement

ಆಯ್ಕೆಗೆ ಮಾನದಂಡ
ದ.ಕ. ಜಿಲ್ಲೆಯಲ್ಲಿ ಒಟ್ಟು 2,070 ಸರಕಾರಿ ಶಾಲೆಗಳ ಪೈಕಿ 3 ಪ್ರೌಢಶಾಲೆ ಮತ್ತು 74 ಪ್ರಾಥಮಿಕ ಶಾಲೆಗಳು ಶತಮಾನ ಪೂರೈಸಿವೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 700 ಸರಕಾರಿ ಶಾಲೆಗಳಲ್ಲಿ 3 ಪ್ರೌಢಶಾಲೆ ಮತ್ತು 61 ಪ್ರಾಥಮಿಕ ಶಾಲೆಗಳು ಶತಮಾನ ಪೂರೈಸಿವೆ. ಇಷ್ಟೂ ಶಾಲೆಗಳ ಪೈಕಿ ಅತ್ಯಂತ ಹಳೆಯ ಶಾಲೆ ಮತ್ತು ಅವುಗಳಲ್ಲಿನ ವಿದ್ಯಾರ್ಥಿಗಳ ಸಂಖ್ಯೆಯ ಅಂಶವೂ ಆಯ್ಕೆಯ ಮಾನದಂಡ ದಲ್ಲಿ ಒಳಗೊಂಡಿದೆ. ಕಟ್ಟಡಗಳ ಮೂಲ ವಿನ್ಯಾಸ, ಕಟ್ಟಡಕ್ಕೆ ಇರಬಹುದಾದ ಸಾಂಸ್ಕೃತಿಕ ಪರಂಪರೆಗಳನ್ನು ಸಂರಕ್ಷಿಸುವ ಉದ್ದೇಶವೂ ಈ ಯೋಜನೆಯದ್ದು. ಇದರೊಂದಿಗೆ ಸರಕಾರಿ ಶಾಲೆಯಲ್ಲಿ ಕಲಿಯುವಂತೆ ಮಕ್ಕಳನ್ನು ಪ್ರೇರೇಪಿಸಲೂ ವಿವಿಧ ಚಟುವಟಿಕೆ ಹಮ್ಮಿಕೊಳ್ಳಲಾಗುತ್ತದೆ.
 
ಆ ಐತಿಹಾಸಿಕ ಅಂಶಗಳನ್ನು ಮುಂದಿನ ಪೀಳಿಗೆಯ ವಿದ್ಯಾರ್ಥಿ ಗಳಿಗೂ ತಲುಪಿಸಲು ಪುಸ್ತಕ ಪ್ರಕಟನೆ ಯನ್ನೂಕೈಗೊಳ್ಳಲಿದೆ. ಆಯ್ಕೆ ಪಟ್ಟಿ ವಿವರ ಮತ್ತು ಹಮ್ಮಿಕೊಳ್ಳಬಹುದಾದ ಕಾರ್ಯಕ್ರಮಗಳ ಬಗ್ಗೆ ಬುಧವಾರ ಎಲ್ಲ ಜಿಲ್ಲಾ ಕಚೇರಿಗಳಿಗೆ ಸುತ್ತೋಲೆ ಕಳುಹಿಸಲಾಗಿದೆ.

ದ.ಕ. ಜಿಲ್ಲೆಯಲ್ಲಿ ಎರಡು ಪ್ರಾಥಮಿಕ ಮತ್ತು ಒಂದು ಪ್ರೌಢಶಾಲೆ ಪಾರಂ ಪರಿಕ ಶಾಲೆಗಳಾಗಿ ಆಯ್ಕೆ ಯಾ ಗಿವೆ. ಈಗಾಗಲೇ ಮೊದಲ ಹಂತದ 2.50 ಲಕ್ಷ ರೂ. ಅನುದಾನ ಬಿಡುಗಡೆ ಯಾಗಿದ್ದು, ಶಾಲಾ ಅಭಿವೃದ್ಧಿ ಕೆಲಸ ಆರಂಭವಾಗಲಿದೆ. 
– ವೈ. ಶಿವರಾಮಯ್ಯ
ದ.ಕ. ಡಿಡಿಪಿಐ

ಉಡುಪಿ ಜಿಲ್ಲೆಯ ಮೂರು ಶಾಲೆಗಳು ಪಾರಂಪರಿಕ ಶಾಲೆಗಳಾಗಿ ಆಯ್ಕೆಯಾಗಿವೆ. ಶತಮಾನ ದಾಟಿದ ಈ ಶಾಲೆಗಳನ್ನು ದುರಸ್ತಿಗೊಳಿಸಿ, ಸಂರಕ್ಷಿಸುವ ನಿಟ್ಟಿನಲ್ಲಿ  ಸರಕಾರ ಈ ಕಾರ್ಯಕ್ರಮ ಹಾಕಿಕೊಂಡಿದೆ. ಈಗಾಗಲೇ ಇಲಾಖೆಗೆ ಸುತ್ತೋಲೆ ಬಂದಿದ್ದು, ಮೊದಲ ಹಂತದ ಅನುದಾನ ಬಿಡುಗಡೆ ಮಾಡಲಾಗಿದೆ.
– ಶೇಷಶಯನ ಕಾರಿಂಜ
ಉಡುಪಿ ಡಿಡಿಪಿಐ

ಹೆಚ್ಚು ಹಳೆಯದಾದ ಶಾಲೆಗಳನ್ನು ಅವುಗಳ ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಆಯ್ಕೆ ಮಾಡಲಾಗಿದೆ. ಶತಮಾನ ಪೂರೈಸಿರುವ ಶಾಲೆ ಗಳಾಗಿದ್ದರಿಂದ ದಾಖಲೀಕರಣಕ್ಕಾಗಿ ಪುಸ್ತಕ ಪ್ರಕಟನೆ ಮಾಡುವ ಬಗ್ಗೆಯೂ ತಿಳಿಸಲಾಗಿದೆ.
– ಶಿವಕುಮಾರ್‌, ಹಿರಿಯ ಸಹಾಯಕ ನಿರ್ದೇಶಕ
ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು

–  ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next