ನೇಪಾಳ : ಬುಧವಾರ ಮುಂಜಾನೆ ನೇಪಾಳದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದ್ದು ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ ದೋತಿ ಜಿಲ್ಲೆಯಲ್ಲಿ ಭೂಕಂಪದಿಂದ ಮನೆಯೊಂದು ಕುಸಿದು ಬಿದ್ದು ಅವಶೇಷಗಳ ಅಡಿಯಲ್ಲಿ ಸಿಲುಕಿ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಭೂಕಂಪದಿಂದ ಹಲವು ಮನೆಗಳು ಕುಸುದು ಬಿದ್ದಿದ್ದು ಹಲವು ಮಂದಿ ಗಾಯಗೊಂಡಿದ್ದಾರೆ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಅಧಿಕಾರಿಗಳ ಪ್ರಕಾರ, ಮೃತರಲ್ಲಿ ಒಬ್ಬ ಮಹಿಳೆ ಮತ್ತು ಇಬ್ಬರು ಮಕ್ಕಳು ಸೇರಿದ್ದಾರೆ. ಆದರೆ, ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ.
ಭೂಕಂಪ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕಾಗಿ ನೇಪಾಳ ಸೇನೆಯನ್ನು ನಿಯೋಜಿಸಲಾಗಿದೆ.
Related Articles
ದೆಹಲಿಯಲ್ಲೂ ಕಂಪನದ ಅನುಭವ :
ಬುಧವಾರ ಮುಂಜಾನೆ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಹೇಳಲಾಗಿದೆ ಮಧ್ಯರಾತ್ರಿ ಸುಮಾರು 1.57 ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಹೇಳಲಾಗಿದೆ.
ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಭೂಕಂಪನದ ಕೇಂದ್ರ ಬಿಂದು ನೇಪಾಳವಾಗಿದ್ದು ಅದರ ಗಡಿಯ ಸಮೀಪ ಉತ್ತರಾಖಂಡದ ಪಿಥೋರಗಢ ಜಿಲ್ಲೆಯ ಆಗ್ನೇಯಕ್ಕೆ 90 ಕಿ.ಮೀ. ದೆಹಲಿ ಮಾತ್ರವಲ್ಲದೆ ಉತ್ತರಾಖಂಡ, ಹಿಮಾಚಲ ಮತ್ತು ಉತ್ತರ ಪ್ರದೇಶದ ಕೆಲವೆಡೆ ಭೂಕಂಪನದ ಅನುಭವವಾಗಿದೆ.
ಇದನ್ನೂ ಓದಿ : ಶಿವಮೊಗ್ಗ: ಟಿಇಟಿ ಪರೀಕ್ಷೆ… ಹಾಲ್ ಟಿಕೆಟ್ ನಲ್ಲಿ ಅಭ್ಯರ್ಥಿ ಬದಲು ಸನ್ನಿ ಲಿಯೋನ್ ಫೋಟೋ!