Advertisement

ಒಂದೇ ದಿನ ಎಟಿಎಂನಲ್ಲಿ 2 ಬಾರಿ ಹಣ ತೆಗೆಯಲು 6-12 ಗಂಟೆ ಕಾಯಬೇಕಾಗಬಹುದು!

09:30 AM Aug 28, 2019 | Nagendra Trasi |

ನವದೆಹಲಿ:ಎಟಿಎಂಗಳಲ್ಲಿನ ವಂಚನೆ ಪ್ರಕರಣ ತಡೆಯುವ ನಿಟ್ಟಿನಲ್ಲಿ ದಿಲ್ಲಿ ಸ್ಟೇಟ್ ಲೆವೆಲ್ ಬ್ಯಾಂಕರ್ಸ್ ಕಮಿಟಿ(ಎಸ್ ಎಲ್ ಬಿಸಿ) ಹೊಸ ಕ್ರಮ ಕೈಗೊಳ್ಳಲು ಶಿಫಾರಸು ಮಾಡಿದ್ದು, ಎಟಿಎಂನಲ್ಲಿ ಎರಡು ಬಾರಿ ಹಣ ತೆಗೆಯಲು 6ರಿಂದ 12ಗಂಟೆಗಳ ಕಾಲಮಿತಿ ನಿಗದಿಪಡಿಸುವಂತೆ ಸಲಹೆ ನೀಡಿದೆ.

Advertisement

ಎಟಿಎಂಗಳಲ್ಲಿ ಬಹುತೇಕ ಇಂತಹ ವಂಚನೆಗಳು ನಡೆಯುವುದು ರಾತ್ರಿ ವೇಳೆ. ಅದು ಮಧ್ಯರಾತ್ರಿಯಿಂದ ಬೆಳಗ್ಗಿನ ಜಾವದವರೆಗೆ ನಡೆಯುತ್ತದೆ. ಹೀಗಾಗಿ ಎಟಿಎಂನಲ್ಲಿ ಒಂದು ಬಾರಿ ಹಣ ವಿಥ್ ಡ್ರಾ ಮಾಡಿದ ಮೇಲೆ ಮತ್ತೊಂದು ಬಾರಿ ತೆಗೆಯಲು ಕಾಲಮಿತಿ ನಿಗದಿಪಡಿಸಿದರೆ ಅದರಿಂದ ವಂಚನೆ ತಡೆಯಲು ಕಡಿವಾಣ ಹಾಕಬಉದು ಎಂದು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ನ ಸಿಇಒ ಹಾಗೂ ದಿಲ್ಲಿ ಎಲ್ ಎಲ್ ಬಿಸಿ ಸಂಚಾಲಕರಾಗಿರುವ ಮುಖೇಶ್ ಕುಮಾರ್ ಜೈನ್ ತಿಳಿಸಿದ್ದಾರೆ.

ವಿತ್ತ ಸೇವೆ ಇಲಾಖೆಯ ಸಲಹೆ ಮೇರೆಗೆ 18 ಬ್ಯಾಂಕ್ ಗಳ ಪ್ರತಿನಿಧಿಗಳು ಕಳೆದ ವಾರ ಎಟಿಎಂ ವಂಚನೆ ತಡೆಯುವ ನಿಟ್ಟಿನಲ್ಲಿ ಸಭೆ ನಡೆಸಿದ್ದರು. ಒಂದು ವೇಳೆ ಸಭೆಯಲ್ಲಿ ಕೈಗೊಂಡ ತೀರ್ಮಾನದ ಶಿಫಾರಸು ಅಂಗೀಕಾರಗೊಂಡರೆ, ಒಂದು ದಿನದಲ್ಲಿ ಎರಡು ಬಾರಿ ಎಟಿಎಂನಲ್ಲಿ ಹಣ ತೆಗೆಯಲು ಆರರಿಂದ 12 ಗಂಟೆಗಳ ಕಾಲ ಕಾಯಬೇಕಾಗುತ್ತದೆ!

Advertisement

Udayavani is now on Telegram. Click here to join our channel and stay updated with the latest news.

Next