Advertisement

5ನೇ ಹಂತದ ಮತದಾನ ಬಹುತೇಕ ಶಾಂತಿಯುತ

10:02 PM Feb 27, 2022 | Team Udayavani |

ಲಕ್ನೋ: ಉತ್ತರ ಪ್ರದೇಶ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ, 5ನೇ ಹಂತದ ಮತದಾನ ಬಹುತೇಕ ಶಾಂತಿಯುತವಾಗಿ ನೆರವೇರಿತು. 12 ಜಿಲ್ಲೆಗಳ 61 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಿದರು.

Advertisement

ಪ್ರತಾಪ್‌ಗ್ಡ ಜಿಲ್ಲೆಯ ಕುಂದಾ ವಿಧಾನಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ ಗುಲÒನ್‌ ಯಾದವ್‌ರವರ ಬೆಂಬಲಿಗರ ಮೇಲೆ ಕೆಲವರು ದಾಳಿ ನಡೆಸಿದರು. ಘಟನೆಯಲ್ಲಿ, ಯಾದವ್‌ರವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಮಣಿಪುರದಲ್ಲಿ ಸ್ಫೋಟ
ಮಣಿಪುರ ವಿಧಾನಸಭೆಯ 38 ಸ್ಥಾನಗಳಿಗೆ ಭಾನುವಾರ ಮತದಾನ ನಡೆಯಿತು. ಒಟ್ಟು 60 ಸ್ಥಾನಗಳಿದ್ದು, ಉಳಿದ 22 ಸ್ಥಾನಗಳಿಗೆ ಮಾ. 7ರಂದು ನಡೆಯಲಿದೆ. ಭಾನುವಾರದಂದು ನಡೆದ ಮತದಾನದಲ್ಲಿ ನಾಗರಿಕರು, ಪೂರ್ವ ಇಂಫಾಲ್‌, ಪಶ್ಚಿಮ ಇಂಫಾಲ್‌, ಬಿಷ್ಣುಪುರ್‌, ಕಾಂಗೊRàಪಿ, ಚುರಾಚಂದ್‌ಪುರ್‌ನ ಒಟ್ಟು 173 ಅಭ್ಯರ್ಥಿಗಳ ಭವಿಷ್ಯವನ್ನು ಮತಯಂತ್ರಗಳಲ್ಲಿ ಭದ್ರವಾಗಿಸಿದರು.

ಭಾರತೀಯರನ್ನು ಕರೆತರುತ್ತೇವೆ: ಮೋದಿ
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್‌ ಕರೆತರಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 6ನೇ ಹಂತದ ಮತದಾನಕ್ಕಾಗಿ ಸಜ್ಜಾಗಿರುವ ಉತ್ತರ ಪ್ರದೇಶದ ಬಸ್ತಿಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, ಉಕ್ರೇನ್‌ನಲ್ಲಿರುವ ಭಾರತದ ಮಕ್ಕಳನ್ನು ಸ್ವದೇಶಕ್ಕೆ ತರುವ ಕಾರ್ಯಾಚರಣೆಗೆ ಆಪರೇಷನ್‌ ಗಂಗಾ ಎಂದು ಹೆಸರಿಡಲಾಗಿದೆ. ಲಭ್ಯವಿರುವ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ನಮ್ಮ ಮಕ್ಕಳನ್ನು ಭಾರತಕ್ಕೆ ಕರೆತರಲಾಗುತ್ತದೆ ಎಂದು ಹೇಳಿದ್ದಾರೆ.

ಆಜಾದ್‌ ಸ್ಮರಣೆ:
ಫೆ. 27ರಂದು ಆಜಾದ್‌ರವರ ಹುತಾತ್ಮ ದಿನವಾದ ಹಿನ್ನೆಲೆಯಲ್ಲಿ ಮೋದಿ ತಮ್ಮ ಭಾಷಣದಲ್ಲಿ ಅವರನ್ನು ಸ್ಮರಿಸಿದರು. ನಂತರ, ವಿಪಕ್ಷಗಳ ವಿರುದ್ಧ ವಾಗ್ಧಾಳಿ ನಡೆಸಿದ ಅವರು, “”ದೇಶದ ನಾಗರಿಕರು ಜಾತಿ, ಮತ, ಪಂಥಗಳ ಭೇದವನ್ನು ಮರೆತು ದೇಶವನ್ನು ಆತ್ಮನಿರ್ಭರ ಮಾಡುವಲ್ಲಿ ಶ್ರಮಿಸಬೇಕು” ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next