Advertisement

5, 8, 9ನೇ ಕ್ಲಾಸ್‌ ಬೋರ್ಡ್‌ ಪರೀಕ್ಷೆ ಅನುದಾನ ಬಿಡುಗಡೆ

08:02 PM Apr 02, 2024 | Team Udayavani |

ಬೆಂಗಳೂರು: ರಾಜ್ಯದ ಶಾಲೆಗಳ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಿದ ಮೌಲ್ಯಾಂಕನ ಚಟುವಟಿಕೆಗಳಿಗೆ ಶಾಲಾ ಪರೀಕ್ಷೆ ಹಾಗೂ ಮೌಲ್ಯನಿರ್ಣಯ ಮಂಡಳಿ ಅನುದಾನವನ್ನು ಬಿಡುಗಡೆ ಮಾಡಿದೆ. ತಿಂಗಳೊಳಗೆ ಖರ್ಚುವೆಚ್ಚದ ಮಾಹಿತಿ ನೀಡುವಂತೆ ಸೂಚನೆ ನೀಡಿದೆ.

Advertisement

ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸುವ ಪ್ರತಿ ಮೌಲ್ಯಮಾಪಕರಿಗೆ ದಿನವೊಂದಕ್ಕೆ 100 ರೂ.ಗಳಂತೆ ಗೌರವ ಸಂಭಾವನೆ ನೀಡುವುದು. ಬ್ಲಾಕ್‌ ಹಂತದಲ್ಲಿ ಪ್ರತಿ ಕೇಂದ್ರಕ್ಕೆ ಪ್ರತಿ ತರಗತಿಗೆ ತಲಾ 2 ಸಾವಿರ ರೂ.ಗಳಂತೆ 6 ಸಾವಿರ ರೂ. ನೀಡಬೇಕು. ಮೌಲ್ಯಮಾಪನ ಪೂರ್ಣಗೊಂಡ ನಂತರ ಶಾಲೆಗಳಿಗೆ ವಾಪಸ್‌ ಮರು ರವಾನೆಗಾಗಿ ಕ್ಲಸ್ಟರ್‌ಗಳಿಗೆ 1,500 ರೂ., ಬಳಸಬೇಕು.

ಬೆಂಗಳೂರು ಉತ್ತರ, ದಕ್ಷಿಣ ಶೈಕ್ಷಣಿಕ ಜಿಲ್ಲೆಗಳಿಗೆ ತಲಾ 10 ಸಾವಿರ ರೂ.ಗಳಂತೆ 30 ಸಾವಿರ ರೂ. ನೀಡಬೇಕು ಎಂದು ಮಂಡಳಿ ಅಧ್ಯಕ್ಷರು ಸೂಚನೆ ಕೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next