ನವ ದೆಹಲಿ : ಭಾರತದಲ್ಲಿ 5G ಸೇವೆ ಯಾವಾಗ ಪ್ರಾರಂಭವಾಗಲಿದೆ ಎಂಬ ಪ್ರಶ್ನೆಗೆ ಬಹುತೇಕ ಅಂತಿಮ ಉತ್ತರ ಸಿಗುವ ಕಾಲ ಹತ್ತಿರವಾಗುತ್ತಿದೆ.
ಹೌದು, ಭಾರತದಲ್ಲಿ 5G ಸೇವೆಗಳು ಅತಿ ಶೀಘ್ರದಲ್ಲೇ ಆರಂಭವಾಗುತ್ತದೆ ಎಂಬ ಮಾಹಿತಿಯನ್ನು ದೂರ ಸಂಪರ್ಕ ಇಲಾಖೆ ನೀಡಿದೆ.
ಓದಿ : ರೈತರ ಹೋರಾಟ ಪ್ರತಿಷ್ಠೆ ಆಗದಿರಲಿ; ಪ್ರಧಾನಿ ಮೋದಿ ಇಂಟಲಿಜೆಂಟ್ ಶಾರ್ಪ್ ಮ್ಯಾನ್: ದೇವೇಗೌಡ
ದೂರ ಸಂಪರ್ಕ ಇಲಾಖೆ ಹೇಳಿದ ವಿಷಾರವೇನು..?
Related Articles
5G ಸೇವೆಯ ಕುರಿತು ಸಂಸದಿಯ ಸಮಿತಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ದೂರ ಸಂಪರ್ಕ ಇಲಾಖೆ, ದೇಶದಲ್ಲಿ 5G ಸೇವೆಗೆ ಸಿದ್ಧತೆಗಳು ಪ್ರಾರಂಭವಾಗಿವೆ ಎಂದು ಹೇಳಿದೆ. ಟೆಕ್ ಸೈಟ್ ಟೆಲಿಕಾಮ್ ಟಾಕ್(telecomtalk) ಪ್ರಕಾರ, ಮುಂದಿನ 2 ಅಥವಾ 3 ತಿಂಗಳುಗಳಲ್ಲಿ 5G ಸೇವೆಯ ಪ್ರಯೋಗಗಳು ಕೆಲವು ಮೊಬೈಲ್ ನೆಟ್ ವರ್ಕ್ ಕಂಪೆನಿಗಳು ಆರಂಭಿಸಲಿವೆ ಎಂದು ಹೇಳಲಾಗುತ್ತಿದೆ.
ಅಸಮಾಧಾನ ಸೂಚಿಸಿದ ಸಂಸದೀಯ ಸಮಿತಿ :
ಟೆಲಿಕಾಮ್ ಗಾಗಿ ರಚಿಸಲಾದ ಸಂಸದೀಯ ಸಮಿತಿಯು 5G ಸೇವೆಯ ಆರಂಭದ ವಿಷಯದಲ್ಲಿ DoT( department of telecommunications ) ನಿಧಾನಗತಿಯ ಕೆಲಸದ ಬಗ್ಗೆ ಸಂಸದೀಯ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
5G ಸೇವೆಗಾಗಿ 16 ಅರ್ಜಿಗಳು
ದೇಶದಲ್ಲಿ 5G ಸೇವೆ ಪ್ರಾರಂಭಿಸಲು ಈಗಾಗಲೇ 16 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅರ್ಜಿ ಸಲ್ಲಿಸಿದ ಕಂಪೆನಿಗಳು ಶೀಘ್ರದಲ್ಲೇ 5G ಸೇವೆಯನ್ನು ಪ್ರಾರಂಭಿಸಲು ಕಾರ್ಯೋನ್ಮುಖವಾಗಲಿವೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
ಓದಿ : ಸಂಪಾಜೆಯ ಕೂಲಿಶೆಡ್ ಬಳಿ ವ್ಯಕ್ತಿಯೋರ್ವನ ಶವ ಪತ್ತೆ; ಸ್ಥಳಕ್ಕೆ ಪೊಲೀಸರ ಭೇಟಿ-ಪರಿಶೀಲನೆ