Advertisement

5ಜಿ ಹರಾಜು: ಬೊಕ್ಕಸಕ್ಕೆ ದಾಖಲೆ ಆದಾಯ

09:29 PM Aug 01, 2022 | Team Udayavani |

ನವದೆಹಲಿ: ದೂರಸಂಪರ್ಕ ಕ್ಷೇತ್ರದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ 5ಜಿ ತಂತ್ರಜ್ಞಾನ ತರಂಗಗುತ್ಛಗಳ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಏಳು ದಿನಗಳ ಕಾಲ ನಡೆದ ಹರಾಜಿನಿಂದ ಸರ್ಕಾರಕ್ಕೆ ದಾಖಲೆಯ 1.5 ಲಕ್ಷ ಕೋಟಿ ರೂ. ಹರಿದುಬಂದಿದೆ. ಹರಾಜಾದ ತರಂಗಗುತ್ಛಗಳ ಅರ್ಧದಷ್ಟು ಮುಕೇಶ್‌ ಅಂಬಾನಿ ಒಡೆತನದ ಜಿಯೊ ಟೆಲಿಕಾಂ ಪಾಲಾಗಿದೆ.

Advertisement

2010ರಲ್ಲಿ 3ಜಿ ತರಂಗಾಂತರಗಳನ್ನು ಹರಾಜು ಮಾಡಿದಾಗ ಸರ್ಕಾರಕ್ಕೆ 50,968.37 ಕೋಟಿ ರೂ. ಹಣ ಹರಿದುಬಂದಿತ್ತು. ಕಳೆದ ವರ್ಷ ನಡೆದಿದ್ದ 4ಜಿ ತರಂಗ ಗುತ್ಛಗಳಿಂದ 77,815 ಕೋಟಿ ರೂ. ಆದಾಯ ಬಂದಿತ್ತು. ಆದರೀಗ, 2010ರಲ್ಲಿ ಬಂದಿದ್ದ ಆದಾಯಕ್ಕಿಂತ ಮೂರು ಪಟ್ಟು ಹಾಗೂ 4ಜಿ ತರಂಗಗುತ್ಛ ಹರಾಜಿಗಿಂತ ದುಪ್ಪಟ್ಟು ಆದಾಯ ಬಂದಿದೆ ಎಂದು ಹೇಳಲಾಗಿದೆ.

ಅಗ್ರಸ್ಥಾನದಲ್ಲಿ ಜಿಯೊ
5ಜಿ ಬಿಡ್ಡಿಂಗ್‌ನಲ್ಲಿ ಮುಕೇಶ್‌ ಅಂಬಾನಿ ಒಡೆತನದ ಜಿಯೋ ಟೆಲಿಕಾಂ ಸಂಸ್ಥೆಯ ಅಗ್ರ ಬಿಡ್ಡರ್‌ ಎನಿಸಿದೆ. ದ್ವಿತೀಯ ಸ್ಥಾನದಲ್ಲಿ ಭಾರ್ತಿ ಏರ್‌ಟೆಲ್‌, ತೃತೀಯ ಸ್ಥಾನದಲ್ಲಿ ವೊಡಾಫೋನ್‌ ಇವೆ. ಇದೇ ಮೊದಲ ಬಾರಿಗೆ ದೂರಸಂಪರ್ಕ ಕ್ಷೇತ್ರಕ್ಕೆ ಕಾಲಿಟ್ಟಿರುವ ಅದಾನಿ ಗ್ರೂಪ್‌ ಸಂಸ್ಥೆ 26 ಮೆಗಾ ಹರ್ಟ್‌ ತರಂಗಗುತ್ಛಗಳನ್ನು ತನ್ನದಾಗಿಸಿಕೊಂಡಿದೆ. ಹರಾಜಿನ ಎಲ್ಲಾ ಅಂಕಿ-ಅಂಶಗಳನ್ನು ಒಗ್ಗೂಟಿಸಿ ಅಂತಿಮ ವರದಿಯನ್ನು ಸದ್ಯದಲ್ಲೇ ತಯಾರಿಸಲಾಗುತ್ತದೆ. ಅದರಲ್ಲಿ, ಹರಾಜಿನಿಂದ ಯಾವ ಕಂಪನಿಗೆ ಎಷ್ಟು ತರಂಗಗುತ್ಛ ಸಿಕ್ಕಿದೆ ಎಂಬ ವಿಚಾರ ತಿಳಿದುಬರಲಿದೆ.

ಮುಖ್ಯಾಂಶಗಳು:
– ಏಳು ದಿನಗಳ ನಂತರ ಮುಕ್ತಾಯಗೊಂಡ ಹರಾಜು ಪ್ರಕ್ರಿಯೆ
– 4ಜಿ ಹರಾಜಿಗಿಂತ ದುಪ್ಪಟ್ಟು, 3ಜಿ ಹರಾಜಿಗಿಂತ ಮೂರು ಪಟ್ಟು ಆದಾಯ
– ಹರಾಜಿಗಿಟ್ಟಿದ್ದ ತರಂಗಗುತ್ಛಗಳಲ್ಲಿ ಅರ್ಧದಷ್ಟು ಜಿಯೊ ಟೆಲಿಕಾಂ ಪಾಲಿಗೆ

ಅಂಕಿ-ಅಂಶ:
1,50,173 ಕೋಟಿ ರೂ.
5ಜಿ ಹರಾಜಿನಿಂದ ಬಂದಿರುವ ಆದಾಯ

Advertisement

77,815 ಕೋಟಿ ರೂ.
4ಜಿ ಹರಾಜಿನಿಂದ ಬಂದ ಗಳಿಕೆ

50,968.37 ಕೋಟಿ ರೂ.
3ಜಿ ಹರಾಜಿನಿಂದ ಬಂದಿದ್ದ ಆದಾಯ

(ಪಟ್ಟಿ)
ಕಂಪನಿ ಹೂಡಿಕೆ (ಕೋಟಿ ರೂ.ಗಳಲ್ಲಿ)
ಜಿಯೊ 84,5000
ಏರ್‌ಟೆಲ್‌ 46,500
ವೊಡಾಫೋನ್‌ 18,500
ಅದಾನಿ ಗ್ರೂಪ್‌ 800-900

Advertisement

Udayavani is now on Telegram. Click here to join our channel and stay updated with the latest news.

Next