Advertisement

ರೇವಣ್ಣ ಕುಟುಂಬದಿಂದ 55 ಎಕರೆ ಸರ್ಕಾರಿ ಭೂಮಿ ಕಬಳಿಕೆ 

06:00 AM Sep 18, 2018 | |

ಹಾಸನ: ನಗರದ ಹೊರ ವಲಯದ ಗೌರಿಪುರ ಮತ್ತು ಸೋಮನಹಳ್ಳಿ ಕಾವಲ್‌ನಲ್ಲಿ ಸರ್ಕಾರಿ ಭೂಮಿಯ ದಾಖಲೆಗಳನ್ನು ತಿರುಚಿ 54.29 ಎಕರೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ. ರೇವಣ್ಣ ಕುಟುಂಬದವರು ಕಬಳಿಸಿ
ದ್ದಾರೆಂದು ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ಎ.ಮಂಜು ಆರೋಪಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ತಾಲೂಕಿನ ಗೌರಿಪುರ ಮತ್ತು ಸೋಮನಹಳ್ಳಿ ಕಾವಲ್‌ 10 ಕ್ಕೂ ಹೆಚ್ಚು ಸರ್ವೇ ನಂಬರ್‌ಗಳ 54.29 ಎಕರೆಯನ್ನು ಯಾರ್ಯಾರ ಹೆಸರಿಗೋ ದಾಖಲೆಗಳನ್ನು ಮಾಡಿಸಿ ಅವರಿಂದ ದೇವೇಗೌಡರ ಅತ್ತೆ ಕಾಳಮ್ಮ ಮತ್ತು ಸಚಿವ ರೇವಣ್ಣ ಅವರ ಪುತ್ರ ಪ್ರಜ್ವಲ್‌ ರೇವಣ್ಣ ಅವರ ಹೆಸರಿಗೆ 2014 -15ನೇ ಸಾಲಿನಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಅಕ್ರಮ, ಅವ್ಯವಹಾರಕ್ಕೆ ರೇವಣ್ಣ ರಾಜಕೀಯ ಪ್ರಭಾವ ಬಳಸಿಕೊಂಡಿದ್ದರೆ ಕಂದಾಯ ಇಲಾಖೆ ಅಧಿಕಾರಿಗಳು ಸಹಕಾರ ನೀಡಿದ್ದಾರೆ. ಈ ಸಂಬಂಧ ಹಾಸನ ಡೀಸಿಗೆ ಹಾಗೂ ಕಂದಾಯ ಸಚಿವರಿಗೆ ದೂರು ನೀಡುತ್ತೇನೆ. ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸುವೆ ಎಂದು ಎಚ್ಚರಿಸಿದರು.

ದೈವ ಬಲದಿಂದ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿಯವರನ್ನು ಪದಚ್ಯುತಿಗೊಳಿಸಿದರೆ ದೈವಕ್ಕೆ ಬಗೆದ ದ್ರೋಹವಾಗುತ್ತದೆ ಎಂದು ಆದಿಚುಂಚನಗಿರಿ ಶ್ರೀಗಳು ಹೇಳಿಕೆ ನೀಡಿರುವುದು ತಪ್ಪು. ಇದರಿಂದ ಮಠದ ಭಕ್ತನಾಗಿರುವ ನನಗೂ ನೋವಾಗಿದೆ.
– ಎ.ಮಂಜು, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next