Advertisement

ಚಾಮರಾಜನಗರ: 54 ಹೊಸ ಸೋಂಕು ಪ್ರಕರಣ ಪತ್ತೆ ; 28 ಮಂದಿ ಚೇತರಿಕೆ

06:22 PM Aug 04, 2020 | Hari Prasad |

ಚಾಮರಾಜನಗರ: ಜಿಲ್ಲೆಯಲ್ಲಿ ಮಂಗಳವಾರ 54 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.

Advertisement

28 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಕೋವಿಡ್ 19 ಪ್ರಕರಣಗಳ ಸಂಖ್ಯೆ 851ಕ್ಕೇರಿಕೆಯಾಗಿದೆ.

ಜಿಲ್ಲೆಯಲ್ಲಿ ಇನ್ನೂ 291 ಸಕ್ರಿಯ ಪ್ರಕರಣಗಳಿವೆ ಮತ್ತು ಕೋವಿಡ್ 19 ಸೊಂಕಿನಿಂದ ಇದುವರೆಗೆ 547 ಮಂದಿ ಇದುವರೆಗೆ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್ ಸೋಂಕಿನಿಂದ 11 ಮಂದಿ ಮೃತಪಟ್ಟಿದ್ದಾರೆ. ಕೋವಿಡೇತರ ಕಾರಣದಿಂದ ಇಬ್ಬರು ಸಾವಿಗೀಡಾಗಿದ್ದಾರೆ. 13 ಮಂದಿ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಮಂಗಳವಾರ ಒಟ್ಟು 552 ಮಾದರಿಗಳನ್ನು ಪರೀಕ್ಷಿಸಲಾಗಿದೆ. 23 ದೃಢೀಕೃತ ಪ್ರಕರಣಗಳು ಆರ್‌ಟಿಪಿಸಿಆರ್ ವಿಧಾನದಿಂದ, 31 ಪ್ರಕರಣಗಳು Rapid ಆಂಟಿಜೆನ್ ಪರೀಕ್ಷೆಯಿಂದ ಪತ್ತೆಯಾಗಿವೆ.

ಮಂಗಳವಾರ ಚಾಮರಾಜನಗರ ತಾಲೂಕಿನಿಂದ 18, ಗುಂಡ್ಲುಪೇಟೆ ತಾಲೂಕಿನಿಂದ 17, ಕೊಳ್ಲೇಗಾಲ ತಾಲೂಕಿನಿಂದ 7, ಯಳಂದೂರು ತಾಲೂಕಿನಿಂದ 8, ಹನೂರು ತಾಲೂಕಿನಿಂದ 4 ಪ್ರಕರಣಗಳು ವರದಿಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next