ನವದೆಹಲಿ: ಅಕ್ರಮ ಹಣ ಸಾಗಣೆ ಪ್ರಕರಣದಲ್ಲಿ ಮಾಜಿ ಮತ್ತು ಹಾಲಿ ಸಂಸದರ ಪೈಕಿ ಒಟ್ಟು 51 ಮಂದಿ ವಿಚಾರಣೆಗೊಳಗಾಗಬೇಕಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ತಿಳಿಸಿದೆ.
ಆದರೆ ಮಾಜಿಗಳೆಷ್ಟು, ಹಾಲಿಗಳೆಷ್ಟು ಎಂಬ ಸಂಖ್ಯೆಯನ್ನು ಅದು ನೀಡಿಲ್ಲ. ಜೊತೆಗೆ ವಿಧಾನಸಭೆ, ವಿಧಾನ ಪರಿಷತ್ತಿಗೆ ಸೇರಿದ ಒಟ್ಟು 71 ಶಾಸಕರೂ ತನಿಖೆಯ ವ್ಯಾಪ್ತಿಯಲ್ಲಿದ್ದಾರೆ!
ಯಾವ ರಾಜ್ಯದವರು ಎಷ್ಟು ಮಂದಿಯಿದ್ದಾರೆನ್ನುವುದು ಬಹಿರಂಗವಾಗಿಲ್ಲ. ಈ ಪ್ರಕರಣವನ್ನು ವೇಗವಾಗಿ ತನಿಖೆ ಮಾಡಿ ಮುಗಿಸಲು ಹಿರಿಯ ವಕೀಲ ವಿಜಯ್ ಹನ್ಸಾರಿಯರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಿಸಲಾಗಿದೆ.
ಸಂಸದರು, ಶಾಸಕರಿಗೆ ಸಂಬಂಧಿಸಿದಂತೆ 121 ಪ್ರಕರಣಗಳನ್ನು ಸಿಬಿಐ ಇನ್ನೂ ತನಿಖೆ ಮಾಡಬೇಕಿದೆ. ಈ ಪ್ರಕರಣಗಳನ್ನು ಬೇಗ ಇತ್ಯರ್ಥ ಮಾಡಿ ಎಂದು ಸರ್ವೋಚ್ಚ ಪೀಠ ಸತತವಾಗಿ ನಿರ್ದೇಶನ ನೀಡುತ್ತಲೇ ಇದ್ದರೂ, ದೊಡ್ಡ ಪ್ರಮಾಣದಲ್ಲಿ ಪ್ರಕರಣಗಳು ರಾಶಿಬಿದ್ದಿವೆ ಎಂದು ಅಮಿಕಸ್ ಕ್ಯೂರಿ ಹೇಳಿದ್ದಾರೆ.