Advertisement
ಲಭ್ಯ ವರದಿಗಳ ಪ್ರಕಾರ ಈ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 2071 ಕೋವಿಡ್ 19 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇಂದು ರಾಜ್ಯದಲ್ಲಿ ಕೋವಿಡ್ 19 ಸಂಬಂಧಿತ ಒಟ್ಟು 97 ಸಾವು ಸಂಭವಿಸಿದೆ.
Related Articles
Advertisement
ಇಂದು ರಾಜ್ಯಾದ್ಯಂತ ಒಟ್ಟು 2071 ಕೋವಿಡ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ರಾಜ್ಯದಲ್ಲಿ ಇಂದಿನವರೆಗೆ ಒಟ್ಟು 80863 ಕೋವಿಡ್ 19 ಸೋಂಕು ಪ್ರಕರಣಗಳು ದಾಖಲುಗೊಂಡಿದೆ. ಮತ್ತು ಇವರಲ್ಲಿ 29310 ಸೋಂಕಿತರು ಗುಣಮುಖರಾಗಿದ್ದಾರೆ ಹಾಗೂ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 49931 ಇದೆ.
ಕೋವಿಡ್ 19 ಸೋಂಕಿಗೆ ಇದುವರೆಗೂ ರಾಜ್ಯದಲ್ಲಿ 1616 ಸಾವು ಸಂಭವಿಸಿದೆ. ಹಾಗೂ 06 ಜನ ಕೋವಿಡ್ 19 ಸೋಂಕಿತರು ಅನ್ಯ ಕಾರಣದಿಂದ ಮೃತಪಟ್ಟಿದ್ದಾರೆ. 640 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಉಡುಪಿ ಜಿಲ್ಲೆಯಲ್ಲಿ 160 ಹೊಸ ಕೋವಿಡ್ ಪಾಸಿಟಿವ್ ಪ್ರಕರಣ ದೃಢ! ಓರ್ವ ಮಹಿಳೆ ಸಾವು
ಬೆಂಗಳೂರು ನಗರ ಜಿಲ್ಲೆಯಲ್ಲಿ 2207 ಪಾಸಿಟಿವ್ ಪ್ರಕರಣ ಸೇರಿದಂತೆ, ರಾಯಚೂರು (258), ಕಲಬುರಗಿ (229), ದಕ್ಷಿಣ ಕನ್ನಡ (218), ಬೆಳಗಾವಿ (214), ಧಾರವಾಡ (183), ಬಳ್ಳಾರಿ (164), ಬೆಂಗಳೂರು ಗ್ರಾಮಾಂತರ (161), ಉಡುಪಿ (160), ಮೈಸೂರು (116), ಹಾಸನ (108), ದಾವಣಗೆರೆ (107) ಮತ್ತು ಬಾಗಲಕೋಟೆ (106) ಇವಿಷ್ಟು ಜಿಲ್ಲೆಗಳಲ್ಲಿ ಇಂದು ಮೂರಂಕಿಯ ಕೋವಿಡ್ 19 ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: ಚಾಮರಾಜನಗರ ಕೋವಿಡ್‌ನಿಂದ ವೃದ್ಧ ಸಾವು: ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ADCಇನ್ನುಳಿದಂತೆ, ಬೀದರ್ – 94, ಉತ್ತರ ಕನ್ನಡ – 83, ಶಿವಮೊಗ್ಗ – 82, ಗದಗ – 72, ಚಿಕ್ಕಬಳ್ಳಾಪುರ – 65, ಚಿಕ್ಕಮಗಳೂರು – 62, ತುಮಕೂರು – 56, ಯಾದಗಿರಿ – 55, ಮಂಡ್ಯ – 50, ಕೋಲಾರ – 40, ಚಾಮರಾಜನಗರ – 27, ರಾಮನಗರ – 26, ಕೊಡಗು – 22, ವಿಜಯಪುರ 20, ಹಾವೇರಿ – 18, ಕೊಪ್ಪಳ – 17 ಮತ್ತು ಚಿತ್ರದುರ್ಗ – 10 ಸೇರಿದಂತೆ ರಾಜ್ಯದ ಒಟ್ಟು 30 ಜಿಲ್ಲೆಗಳಲ್ಲಿ ಇಂದು ಮೂರಂಕಿ ಹಾಗೂ ಎರಡಂಕಿಯ ಕೋವಿಡ್ 19 ಸೋಂಕಿನ ಪ್ರಕರಣಗಳು ವರದಿಯಾಗಿವೆ.