Advertisement
ಇದರಲ್ಲಿ 10 ಹೆಕ್ಟೇರ್ ಬ್ಲಾಕ್ ನೆಡುತೋಪು ಹಾಗೂ 8 ಕಿ. ಮೀ. ರಸ್ತೆ ಬದಿ ನಾಟಿ ಉದ್ದೇಶವೂ ಸೇರಿದೆ. ಸಾರ್ವಜನಿಕ ಉದ್ದೇಶಕ್ಕಾಗಿ ಮಹಾಗನಿ, ಬೇಂಗ, ಸಾಗುವಾನಿ, ತಾರೆಯಂಥ ನಾಟಾ ಉತ್ಪಾದಿಸುವ ಗಿಡಗಳು, ಹಲಸು, ಮಾವು, ಗೇರು, ನೇರಳೆ, ಪೇರಳೆ, ನೆಲ್ಲಿಯಂತಹ ಹಣ್ಣಿನ ಗಿಡಗಳು ಸಹಿತ ಸುಮಾರು 43,000 ಗಿಡಗಳಿದ್ದು, ಸಾರ್ವಜನಿಕರು ರಿಯಾಯಿತಿ ದರದಲ್ಲಿ ಲಭಿಸುವ ಈ ಗಿಡಗಳನ್ನು ಕಚೇರಿಗೆ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದಾಗಿದೆ.
ಕೋವಿಡ್-19 ಮಹಾಮಾರಿಯ ಕಾರಣ, ದೂರದ ಊರುಗಳಿಂದ ಸ್ವಗ್ರಾಮಕ್ಕೆ ಮರಳಿರುವ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮೂಡುಬಿದಿರೆ ಹಾಗೂ ಮಂಗಳೂರು ತಾಲೂಕುಗಳ ವಿವಿಧ ಗ್ರಾ.ಪಂ.ಗಳ ಫಲಾನುಭವಿಗಳಿಗೆ ಈ ಗಿಡಗಳನ್ನು ನೀಡುವ ಜತೆಗೆ ಅವುಗಳ ನಾಟಿ ಕೆಲಸಕ್ಕೆ ಕೂಲಿ ಪಾವತಿ ಮಾಡಲಾಗುತ್ತದೆ. ಈ ಯೋಜನೆಯಡಿ ಗಿಡಗಳನ್ನು ಪಡೆಯಲಿಚ್ಛಿಸುವ ಅರ್ಹ ಫಲಾನುಭವಿಗಳು ಸಂಬಂಧಪಟ್ಟ ಗ್ರಾ.ಪಂ.ಗಳಲ್ಲಿ ಈ ಯೋಜನೆಯಡಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಉದ್ಯೋಗ ಚೀಟಿ ಪಡೆದು, ತಮ್ಮ ಹೆಸರು, ವಿಳಾಸ ಹಾಗೂ ಸ್ಥಳದ ವಿವರಗಳೊಂದಿಗೆ (ಪಹಣಿ ಪ್ರತಿ), ಆಧಾರ್ ಕಾರ್ಡ್ ಪ್ರತಿ, ಉದ್ಯೋಗ ಚೀಟಿ (ಜಾಬ್ ಕಾರ್ಡ್)ಯ ಪ್ರತಿ ಹಾಗೂ ಸಣ್ಣ ಹಿಡುವಳಿದಾರ ಪ್ರಮಾಣ ಪತ್ರ ಅಥವಾ ಬಿ.ಪಿ.ಎಲ್. ಕಾರ್ಡ್ ಪ್ರತಿ (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ತಮ್ಮ ಪ್ರಮಾಣ ಪತ್ರದ ಪ್ರತಿ) ಇತ್ಯಾದಿ ತಮಗೆ ಬೇಕಾಗಿರುವ ಗಿಡಗಳ ವಿವರಗಳನ್ನು ನಮೂದಿಸಿ, ವಲಯ ಅರಣ್ಯಾಧಿಕಾರಿಗಳು, ಸಾಮಾಜಿಕ ಅರಣ್ಯ ವಿಭಾಗ, ಮಂಗಳೂರು ಇಲ್ಲಿಗೆ ಸಲ್ಲಿಸಬಹುದಾಗಿದೆ. ಬಳಿಕ ಗಿಡಗಳನ್ನು ಮೂಡುಬಿದಿರೆ ಕಡಲಕೆರೆ ಸಸ್ಯ ಕ್ಷೇತ್ರದಿಂದ ಪಡೆದುಕೊಳ್ಳಬಹುದಾಗಿದೆ ಎಂದು ಸಾಮಾಜಿಕ ಅರಣ್ಯ ವಲಯ ಮಂಗಳೂರು ಇಲ್ಲಿನ ವಲಯ ಅರಣ್ಯಾಧಿಕಾರಿಯವರ ಪ್ರಕಟನೆ ತಿಳಿಸಿದೆ.