Advertisement

ಸೋಂಕಿತರ ಆರೈಕೆಗೆ 500 ಬೆಡ್‌ ಸಿದ್ಧ

05:56 PM May 26, 2021 | Team Udayavani |

ಬಂಗಾರಪೇಟೆ: ಕೊರೊನಾ ಪಾಸಿಟಿವ್‌ಕಂಡು ಬಂದ ತಕ್ಷಣವೇ ಸರ್ಕಾರದಿಂದಎರಡು ಕೋವಿಡ್‌ ಕೇರ್‌ ಸೆಂಟರ್‌ ತೆರೆಯಲಾಗಿದ್ದು, ಸಕಲ ವ್ಯವಸ್ಥೆ ಮಾಡಲಾಗಿದೆಎಂದು ತಾಲೂಕು ನೋಡಲ್‌ ಅಧಿಕಾರಿಯೂ ಆದ ಉಪವಿಭಾಗಾಧಿಕಾರಿ ವಿ.ಸೋಮಶೇಖರ್‌ ಹೇಳಿದರು.

Advertisement

ತಾಲೂಕಿನ ಎಳೇಸಂದ್ರ ಗ್ರಾಪಂ ವ್ಯಾಪ್ತಿಯಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿಸಿದ್ಧವಾಗುತ್ತಿರುವ ಕೋವಿಡ್‌ ಕೇರ್‌ ಕೇಂದ್ರಕ್ಕೆಭೇಟಿ ನೀಡಿ ಮಾತನಾಡಿದರು. ಈ ವಸತಿಶಾಲೆಯಲ್ಲಿ 250 ಬೆಡ್‌ ಸಿದ್ಧತೆ ಮಾಡಲಾಗಿದೆ.ಮೂಲ ಸೌಲಭ್ಯ ಒದಗಿಸಲಾಗಿದೆ. ಸೋಂಕಿತರನ್ನು ಹೋಮ್‌ ಐಸೋಲೇಷನ್‌ ಮಾಡುವಬದಲಾಗಿ ಕೋವಿಡ್‌ಕೇರ್‌ ಸೆಂಟರ್‌ಗೆ ದಾಖಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕಿನಲ್ಲಿ ಹೋಂ ಐಸೋಲೇಷನ್‌ನಲ್ಲಿದ್ದ ನೂರಕ್ಕೂ ಹೆಚ್ಚು ಸೋಂಕಿತರನ್ನುಈಗಾಗಲೇ ಸಂಭ್ರಮ್‌ ಆಸ್ಪತ್ರೆಗೆ ಸೇರಿಸಲಾಗಿದೆ. ಅದರಲ್ಲಿ ಕೆಲವರ ಕೋವಿಡ್‌ ಟೆಸ್ಟ್‌ವರದಿ ನೆಗೆಟಿವ್‌ ಬಂದಿದೆ. ಈ ಆಸ್ಪತ್ರೆಯಲ್ಲಿ250 ಬೆಡ್‌ಗಳಿದ್ದು, ಇಲ್ಲಿ ತುಂಬಿದ ಬಳಿಕಎಳೇಸಂದ್ರದ ಕೋವಿಡ್‌ ಕೇರ್‌ ಕೇಂದ್ರಕ್ಕೆದಾಖಲಿಸಲು ಕ್ರಮಕೈಗೊಳ್ಳಲಾಗುತ್ತಿದೆಎಂದು ವಿವರಿಸಿದರು.

ತಾಲೂಕಿನಲ್ಲಿ ಪ್ರತಿ ವಾರ150 ರಿಂದ200ಕೊರೊನಾ ಪಾಸಿಟಿವ್‌ ಕೇಸು ದಾಖಲಾಗುತ್ತಿವೆ. ಬಹುತೇಕರಿಗೆ ಸೋಂಕು ಬಂದರೂಲಕ್ಷಣಗಳುಇರುವುದಿಲ್ಲ.ಅವರಿಗೆ ಸಂಭ್ರಮ್‌ಆಸ್ಪತ್ರೆಯಲ್ಲಿ ಗುಣಮಟ್ಟದ ಆರೈಕೆಮಾಡಲಾಗುತ್ತಿದೆ. ಇದರಿಂದ ಒಂದುಹಾಗೂ ಎರಡು ವಾರದಲ್ಲಿ ನೆಗೆಟಿವ್‌ ವರದಿ ಬರುತ್ತಿದೆ.

ಸೋಂಕಿತರು ಹೆಚ್ಚಾದಂತೆ ರಕ್ಷಣೆಮಾಡಲು ಜಿಲ್ಲಾಡಳಿತವು ಸಿದ್ಧವಿದ್ದು,ಕೊರೊನಾ ಸೋಂಕಿನಿಂದ ಯಾರೂ ಭಯಪಡುವ ಅಗತ್ಯವಿಲ್ಲ. ಎಲ್ಲರೂ ಧೈರ್ಯದಿಂದಇರಲು ತಿಳಿವಳಿಕೆನೀಡುವಂತೆಅಧಿಕಾರಿಗಳಿಗೆಸೂಚನೆ ನೀಡಿದರು.

Advertisement

ತಹಶೀಲ್ದಾರ್‌ಎಂ.ದಯಾನಂದ್‌, ತಾಲೂಕು ಆರೋಗ್ಯಾಧಿಕಾರಿ ಡಾ.ಸರಸ್ವತಿ, ತಾಲೂಕು ಸಮಾಜಕಲ್ಯಾಣಾಧಿಕಾರಿ ಮುನಿರಾಜು ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next