Advertisement

50 ಸಾವಿರ ಸ್ಥಿರ ದೂರವಾಣಿಗೆ ಜೀವ

01:14 AM Aug 18, 2019 | sudhir |

ಶ್ರೀನಗರ: ಕಾಶ್ಮೀರಕ್ಕೆ ನೀಡಲಾ ಗಿದ್ದ ವಿಶೇಷ ಸ್ಥಾನಮಾನ ರದ್ದು ನಿರ್ಧಾ ರದ ಹಿನ್ನೆಲೆ ಯಲ್ಲಿ 12 ದಿನಗಳಿಂದ ಸ್ಥಗಿತ ವಾಗಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಚಟು ವಟಿಕೆಗಳು ಆರಂಭವಾಗುತ್ತಿವೆ.

Advertisement

ಶನಿವಾರ ರಾಜ್ಯದಲ್ಲಿ ಆಯ್ದ 50 ಸಾವಿರ ಲ್ಯಾಂಡ್‌ಲೈನ್‌ ಫೋನ್‌ಗಳಿಗೆ ಮರು ಸಂಪರ್ಕ ನೀಡಲಾಗಿದೆ. 17 ಟೆಲಿಫೋನ್‌ ಎಕ್ಸ್‌ಚೇಂಜ್‌ಗಳ ಕೆಲಸ ಆರಂಭವಾದ ಹಿನ್ನೆಲೆಯಲ್ಲಿ ಈ ಪ್ರಮಾಣದ ಫೋನ್‌ಗಳಿಗೆ ಮಾತ್ರ ಸಂಪರ್ಕ ನೀಡಲು ಸಾಧ್ಯ ವಾಗಿದೆ. ರವಿವಾರ ಸಂಜೆ ವೇಳೆಗೆ ಬಹುತೇಕ ಎಲ್ಲ ದೂರವಾಣಿಗಳಿಗೂ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಸರಕಾರದ ವಕ್ತಾರ ರೋಹಿತ್‌ ಕನ್ಸಲ್‌ ಹೇಳಿದ್ದಾರೆ.

“”ಕಾಶ್ಮೀರ ಕಣಿವೆಯಲ್ಲಿನ 17 ಟೆಲಿಫೋನ್‌ ಎಕ್ಸ್‌ಚೇಂಜ್‌ಗಳು ಕೆಲಸ ಆರಂಭಿಸಿದ್ದರಿಂದ 50 ಸಾವಿರ ಲ್ಯಾಂಡ್‌ಲೈನ್‌ ಫೋನ್‌ಗಳಿಗೆ ಸಂಪರ್ಕ ಕಲ್ಪಿಸಲಾಗಿದ್ದು, ಉಳಿದ ಎಕ್ಸ್‌ಚೇಂಜ್‌ಗಳ ಕೆಲಸವನ್ನು ರವಿವಾರ ಸಂಜೆ ಆರಂಭಿಸಲಾಗುತ್ತದೆ”ಎಂದು ಅವರು ತಿಳಿಸಿದ್ದಾರೆ. ಆದರೆ, ಇಡೀ ಕಾಶ್ಮೀರದಲ್ಲಿ ಮೊಬೈಲ್‌ ಸೇವೆ ಪುನಾರಂಭಗೊಂಡಿಲ್ಲ. ಆಯ್ದ ಭಾಗಗಳಲ್ಲಿ ಮಾತ್ರ 2ಜಿ ಸಂಪರ್ಕವುಳ್ಳ ಮೊಬೈಲ್‌ ಸೇವೆ ನೀಡಲಾಗಿದೆ. ಜಮ್ಮುವಿನಲ್ಲಿ ಮಾತ್ರ ಲ್ಯಾಂಡ್‌ಲೈನ್‌ ಮತ್ತು ಮೊಬೈಲ್‌ ಸಂಪರ್ಕ ಗಳು ಕೆಲಸ ಮಾಡುತ್ತಿವೆ.

ನಾಳೆಯಿಂದ ಶಾಲೆ ಕಾಲೇಜು ಆರಂಭ: ವಿಶೇಷ ಸ್ಥಾನಮಾನ ರದ್ದು ಹಿನ್ನೆಲೆ ಮುಚ್ಚಲಾಗಿದ್ದ ಕಾಶ್ಮೀರ ಕಣಿವೆಯ ಶಾಲಾ- ಕಾಲೇಜುಗಳು ಸೋಮವಾರದಿಂದ ಪುನ ರಾರಂಭಗೊಳ್ಳಲಿವೆ. ಆರಂಭದಲ್ಲಿ ಪ್ರಾಥಮಿಕ ಮಟ್ಟದ ಶಾಲೆಗಳು ಆರಂಭವಾಗಲಿದ್ದು, ಹಂತಹಂತವಾಗಿ ಉಳಿದ ಶಾಲಾ- ಕಾಲೇಜುಗಳ ಬಾಗಿಲು ತೆರೆಯಲಿದೆ. ಸರಕಾರಿ ಕಚೇರಿಗಳೂ ಸೋಮವಾರದಿಂದಲೇ ಆರಂಭವಾಗಲಿವೆ. ಜಮ್ಮು ಶಾಲಾ - ಕಾಲೇಜುಗಳು ಈ ವಾರದ ಆರಂಭದಲ್ಲೇ ಆರಂಭವಾಗಿವೆ.

ಈ ಮಧ್ಯೆ, ಕಾಶ್ಮೀರದ 35 ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ತೆರವು ಮಾಡಲಾಗಿದೆ. ಉಳಿದ ಠಾಣೆಗಳ ವ್ಯಾಪ್ತಿ ಯಲ್ಲಿ ಹಂತಹಂತವಾಗಿ ನಿಷೇಧಾಜ್ಞೆ ತೆರವು ಮಾಡುತ್ತೇವೆ ಎಂದು ಕಾಶ್ಮೀರದ ಐಜಿಪಿ ಸ್ವಯಂ ಪ್ರಕಾಶ್‌ ಪಾಣಿ ಹೇಳಿದ್ದಾರೆ.

Advertisement

ಶಸ್ತ್ರಾಸ್ತ್ರ ವಶ: ಕಾಶ್ಮೀರದ ವಿಶೇಷ ಸ್ಥಾನ ಮಾನ ರದ್ದು ಮಾಡುವ ಮುನ್ನ, 250 ವಿಶೇಷ ಪೊಲೀಸ್‌ ಅಧಿಕಾರಿಗಳ ಬಂದೂಕುಗಳನ್ನು ಸರಕಾರ ವಾಪಸ್‌ ಪಡೆದಿದ್ದ ಮಾಹಿತಿ ಈಗ ಬಹಿರಂಗವಾಗಿದೆ. ಇವರು ತಾತ್ಕಾಲಿಕ ಪೊಲೀಸ್‌ ಅಧಿಕಾರಿಗಳಾಗಿದ್ದು, ಸರಕಾರಿ ಸೇವೆಯಲ್ಲಿರುವ ಪೊಲೀಸರಿಗೆ ಸಹಾಯ ಮಾಡುತ್ತಾರೆ. ಇವರ ಆಯುಧ ಗಳು ದುರುಪಯೋಗ ಆಗಬಾರದು ಎಂಬ ಕಾರಣದಿಂದಾಗಿ ಇವು ಗಳನ್ನು ವಾಪಸ್‌ ಪಡೆಯಲಾಗಿತ್ತು ಎಂದು ಸರಕಾರದ ಮೂಲಗಳು ಹೇಳಿವೆ.

ಯೋಧ ಹುತಾತ್ಮ
ಕಾಶ್ಮೀರದ ಬೆಳವಣಿಗೆಗಳ ಮಧ್ಯೆ ಪಾಕಿಸ್ಥಾನ ಗಡಿಯಲ್ಲಿ ತನ್ನ ಪುಂಡಾಟ ಮುಂದುವರಿಸಿದ್ದು, ಭಾರತದ ಸೇನೆಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ನೌಶೆರಾ ವಲಯದಲ್ಲಿ ಪಾಕ್‌ ಕದನವಿರಾಮ ಉಲ್ಲಂ ಸಿದ ಕಾರಣ ಲ್ಯಾನ್ಸ್‌ ನಾಯಕ್‌ ಸಂದೀಪ್‌ ಥಾಪಾ ಮೃತಪಟ್ಟಿದ್ದಾರೆ. 36 ಗಂಟೆಗಳಿಂದಲೂ ಪಾಕಿಸ್ಥಾನ ಅಂತಾ ರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಯುದ್ದಕ್ಕೂ ಕದನವಿರಾಮ ಉಲ್ಲಂ ಘನೆ ಮಾಡುತ್ತಲೇ ಇದೆ ಎಂದು ಸೇನೆಯ ವಕ್ತಾರರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next