Advertisement

ನೇಪಾಲ ವಿಮಾನ ದುರಂತ: 50 ಸಾವು

07:30 AM Mar 13, 2018 | |

ಕಾಠ್ಮಂಡು: ಯುಎಸ್‌-ಬಾಂಗ್ಲಾ ಏರ್‌ಲೈನ್ಸ್‌ಗೆ ಸೇರಿದ ಬಿಎಸ್‌ 211 ವಿಮಾನ, ನೇಪಾಲ ರಾಜಧಾನಿ ಕಾಠ್ಮಂಡುವಿನಲ್ಲಿ ಅಪಘಾತಕ್ಕೀಡಾಗಿದ್ದು, 71 ಪ್ರಯಾಣಿಕರಲ್ಲಿ ಕನಿಷ್ಠ 50 ಮಂದಿ ಸಾವಿ ಗೀಡಾಗಿದ್ದು, 21 ಮಂದಿ ಗಾಯಗೊಂಡಿದ್ದಾರೆಂದು ಅಂದಾಜಿಸಲಾಗಿದೆ.

Advertisement

ಈ ವಿಮಾನ ಬಾಂಗ್ಲಾ ದೇಶದ ರಾಜಧಾನಿ ಢಾಕಾದಿಂದ ಹೊರಟು, ನೇಪಾಲದ ಸ್ಥಳೀಯ ಕಾಲಮಾನ ಅಪರಾಹ್ನ 2.20ಕ್ಕೆ ಕಾಠ್ಮಂಡುವಿನ ತ್ರಿಭುವನ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಟಿಐಎ)ಕ್ಕೆ ಬಂದಿಳಿಯಿತು. ಈ ವಿಮಾನವನ್ನು ನಿಲ್ದಾಣದ ರನ್‌ವೇಯ ದಕ್ಷಿಣ ಭಾಗದಿಂದ ಇಳಿಸುವಂತೆ ಸೂಚಿಸಲಾಗಿತ್ತು. ಆದರೆ, ವಿಮಾನ ಉತ್ತರ ದಿಕ್ಕಿನಿಂದ ರನ್‌ವೇಗೆ ಇಳಿದಿದೆ. ಇಳಿದ ಬಳಿಕ ದಿಕ್ಕು ಬದಲಿಸಿದ ವಿಮಾನ, ರನ್‌ವೇ ಪಕ್ಕದಲ್ಲಿರುವ ಮೈದಾನಕ್ಕೆ ನುಗ್ಗಿ ಅಲ್ಲಿ ಸ್ಫೋಟಗೊಂಡಿದೆ.

“ಫ್ಲೈಟ್‌ ರಾಡಾರ್‌24’ರ ಪ್ರಕಾರ, ಅಪಘಾತಕ್ಕೀಡಾಗಿರುವ ಈ ವಿಮಾನ ಅತ್ಯಾಧುನಿಕ ಹಾಗೂ ಐಷಾರಾಮಿ ಸೌಲಭ್ಯಗಳುಳ್ಳ ಬೊಂಬಾರ್ಡಿಯರ್‌ ಡ್ಯಾಶ್‌ 8 ಕ್ಯು400 ಎಂಬ ಮಾದರಿಯದ್ದು. ಕಳೆದೆರಡು ವರ್ಷಗಳಿಂದ ನೇಪಾಲದಲ್ಲಿ ನಡೆದ ದೊಡ್ಡ ವಿಮಾನ ಅಪಘಾತವಿದು. 2016ರಲ್ಲಿ ನೇಪಾಲದ ಪರ್ವತವೊಂದಕ್ಕೆ ವಿಮಾನ ಢಿಕ್ಕಿ ಹೊಡೆದು, ಅದರಲ್ಲಿದ್ದ ಎಲ್ಲ 23 ಪ್ರಯಾಣಿಕರೂ ಸಾವಿಗೀಡಾಗಿದ್ದರು.

ದುರ್ಘ‌ಟನೆಯಲ್ಲಿ ಸಾವಿನ ದವಡೆಯಿಂದ ಪಾರಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೇಪಾಲದ ಟ್ರಾವೆಲ್‌ ಏಜೆಂಟ್‌ ಬಸಂತ ಬೊಹೊರಾ, “ಢಾಕಾದಿಂದ ಸಹಜವಾಗಿಯೇ ಟೇಕಾಫ್ ಆಗಿದ್ದ ಈ ವಿಮಾನ ಕಾಠ್ಮಂಡುವಿನ ಹತ್ತಿರ ಬರುತ್ತಿದ್ದಂತೆ ವಿಚಿತ್ರವಾಗಿ ವರ್ತಿಸಿತು’ ಎಂದು ಹೇಳಿರುವುದಾಗಿ ಬಿಬಿಸಿ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next