Advertisement

ಶಿವಮೊಗ್ಗದಲ್ಲಿ 50 ದೂರು ದಾಖಲು

10:55 PM Jun 14, 2019 | Lakshmi GovindaRaj |

ಶಿವಮೊಗ್ಗ: ಐಎಂಎ ಜ್ಯುವೆಲ್ಲರ್ನ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂ ಧಿಸಿದಂತೆ ಶಿವಮೊಗ್ಗದಲ್ಲೂ 50 ದೂರುಗಳು ದಾಖಲಾಗಿವೆ. ಇಲ್ಲಿನ ಕೋಟೆ ಪೊಲೀಸ್‌ ಠಾಣೆ ಆವರಣದಲ್ಲಿರುವ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಗುರುವಾರ ಸಂಜೆಯಿಂದ ದೂರು ದಾಖಲಿಸಿಕೊಳ್ಳಲಾಗುತ್ತಿದ್ದು ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ.

Advertisement

ಶಿವಮೊಗ್ಗದ ಅಮಿದ್‌ಬಾನು 3.05 ಲಕ್ಷ, ಶುಶಲ್‌ಪಾಷ 2ಲಕ್ಷ, ಮಮೂದ ಬೇಗಂ 4.50ಲಕ್ಷ, ಮುಜಾಹಿದ್‌ ಬಾನು 1.50ಲಕ್ಷ, ಹೊಳೆಹೊನ್ನೂರಿನ ನಜರುಲ್ಲಾ 3ಲಕ್ಷ ರೂ., ಭದ್ರಾವತಿಯ ಅಬ್ದುಲ್‌ ಕರ್‌ ಎಂಬುವರು 26ಲಕ್ಷ ರೂ.ವಂಚನೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಲು ಜಿಲ್ಲೆಯಲ್ಲಿ ದೂರು ಕೇಂದ್ರ ಸ್ಥಾಪಿಸಲಾಗಿದ್ದು, ಮಾಹಿತಿಗೆ ದೂ.08182 261426 ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next