Advertisement

ಪೊಲೀಸ್ ಠಾಣೆಯಿಂದ ಪಾಯಿಂಟ್ 303 ರೈಫಲ್ಸ್‌ನ 50 ಬುಲೆಟ್ ಗಳು ನಾಪತ್ತೆ!

02:54 PM Jun 02, 2020 | keerthan |

ಮೈಸೂರು: ಜಿಲ್ಲೆಯ ನರಸೀಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಬುಲೆಟ್‌ಗಳು ನಾಪತ್ತೆಯಾಗಿವೆ. ಠಾಣೆಯಲ್ಲಿ ಪಾಯಿಂಟ್ 303 ರೈಫಲ್ಸ್‌ನ ಬುಲೆಟ್‌ಗಳನ್ನು ಇರಿಸಲಾಗಿದ್ದು, ಅದರಲ್ಲಿ 50 ಬುಲೆಟ್‌ಗಳು ನಾಪತ್ತೆಯಾಗಿರುವುದು ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಅಧಿಕಾರಿಗಳ ತಪಾಸಣೆ ವೇಳೆ ಬೆಳಕಿಗೆ ಬಂದಿದೆ.

Advertisement

ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗಳಿಗೆ ಬ್ರಿಟಿಷ್ ಕಾಲದ ರೈಫಲ್‌ ಗಳನ್ನು ನೀಡಲಾಗಿದ್ದು, ತುರ್ತು ಕಾರ್ಯಾಚರಣೆ ವೇಳೆ ಬಳಸಲು ಬುಲೆಟ್‌ ಗಳನ್ನು ಸಹ ನೀಡಲಾಗಿತ್ತು. ಪ್ರತಿ ವರ್ಷದ ಡಿಎಆರ್‌ನ ಪೊಲೀಸ್ ಅಧಿಕಾರಿಗಳು ಪ್ರತಿ ಠಾಣೆಗೆ ತೆರಳಿ, ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ ಪಡೆದು ಹಿಂದಿರುಗುತ್ತಿದ್ದರು.

ಅದರಂತೆ ಶನಿವಾರ ಕೂಡ ಪೊಲೀಸ್ ಅಧಿಕಾರಿಗಳು ಬಂದು ತಪಾಸಣೆ ನಡೆಸಿದ್ದು, 50 ಬುಲೆಟ್‌ಗಳು ನಾಪತ್ತೆಯಾಗಿರುವುದು ಕಂಡು ಬಂದಿದೆ. ತಕ್ಷಣ ಎಸ್ಪಿ ಅವರ ಗಮನಕ್ಕೆ ಬಂದಿದೆ. ಮತ್ತೆ ಎಲ್ಲಾದರೂ ಬುಲೆಟ್‌ಗಳು ಮಿಸ್ ಆಗಿದೆಯೇ ಎಂಬುದರ ಬಗ್ಗೆ ಇಡೀ ಠಾಣೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಬಳಿಕ ಬುಲೆಟ್‌ಗಳು ಸಿಗದೇ ಇರವುದು ಗಮನಕ್ಕೆ ಬಂದಿದೆ. ಈ ಹಿನ್ನಲೆಯಲ್ಲಿ ಎಸ್ ಪಿ ರಿಷ್ಯಂತ್ ಬುಲೆಟ್‌ಗಳ ನಾಪತ್ತೆಯ ಬಗ್ಗೆ  ತನಿಖೆಗೆ ಆದೇಶ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಎಸ್ ಪಿ ಸಿ.ಬಿ.ರಿಷ್ಯಂತ್, ನರಸೀಪುರ ಪೊಲೀಸ್ ಠಾಣೆಯಲ್ಲಿ ಪಾಯಿಂಟ್ 303 ರೈಫಲ್‌ನ ಬುಲೆಟ್‌ಗಳು ನಾಪತ್ತೆಯಾಗಿರುವುದು ಡಿಎಆರ್‌ನ ಪೊಲೀಸ್ ಅಧಿಕಾರಿಗಳ ತಪಾಸಣೆ ವೇಳೆ ಪತ್ತೆಯಾಗಿದೆ. ಈ ಸಂಬಂಧ ತನಿಖೆಗೆ ಆದೇಶದ ಮಾಡಲಾಗಿದ್ದು, ತನಿಖೆ ಬಳಿಕ ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next