Advertisement

ಪೊಲೀಸ್‌ ಇಲಾಖೆಗೆ 50 ಬ್ಯಾರಿಕೇಡ್‌

05:23 PM Nov 17, 2021 | Team Udayavani |

 ಮಂಡ್ಯ: ರಾಮ್ಕೋ ಸಿಮೆಂಟ್‌ ಕಂಪನಿ ಸಹಯೋಗದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದಾಗಿ ಮಂಡ್ಯ ನಗರಕ್ಕೆ 50 ಬ್ಯಾರಿಕೇಡ್‌ಗಳನ್ನು ಜಿಲ್ಲಾ ಪೊಲೀಸ್‌ ಇಲಾಖೆಗೆ 5 ಲಕ್ಷ ರೂ. ಮೌಲ್ಯ ದ 50 ಬ್ಯಾರಿಕೇಡ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು.

Advertisement

ರಾಮ್ಕೋ ಸಿಮೆಂಟ್‌ನ ಜಿಲ್ಲಾ ವಿತರಕರಾದ ಮನ್‌ಮುಲ್‌ ಅಧ್ಯಕ್ಷ ಬಿ.ಆರ್‌.ರಾಮಚಂದ್ರ ಅವರು, ನಗರದ ಜಯಚಾಮರಾಜೇಂದ್ರ ವೃತ್ತದಲ್ಲಿ ನಡೆದ ಸರಳ ಸಮಾರಂಭದಲ್ಲಿ ಡಿವೈಎಸ್ಪಿ ಟಿ.ಮಂಜುನಾಥ್‌ ಅವರಿಗೆ ಬ್ಯಾರಿಕೇಡ್‌ಗಳನ್ನು ಹಸ್ತಾಂತರಿಸಿದರು.

ಇದನ್ನೂ ಓದಿ:- ಪುನೀತ್ ಆತ್ಮಕ್ಕೆ ಮರುಹುಟ್ಟು ಯಾವಾಗ ?

ನಂತರ ಮಾತನಾಡಿದ ಬಿ.ಆರ್‌.ರಾಮಚಂದ್ರು, ಸಿ ಅಂಡ್‌ ಎಫ್‌ಯಿಂದ ಸಾರ್ವಜನಿಕರ ಹಿತದೃಷ್ಟಿ ಮತ್ತು ಸಂಚಾರ ದಟ್ಟಣೆ ನಿಯಂತ್ರಿಸಲು 5 ಲಕ್ಷ ರೂ. ಮೌಲ್ಯದ ಬ್ಯಾರಿಕೇಡ್‌ ಗಳನ್ನು ಮಂಡ್ಯ ನಗರಕ್ಕೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ತಾಲೂಕುವಾರು ಸಹ ನೀಡಲಾಗುವುದು ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಬೀದಿ ದೀಪಗಳನ್ನು ಕೊಡಲು ಉದ್ದೇಶಿಸಲಾಗಿದೆ. ಜಿಲ್ಲಾ ಪೊಲೀಸ್‌ ಇಲಾಖೆಯವರು ನಾಗರಿಕರ ಹಿತದೃಷ್ಟಿಯಿಂದ ಬೀದಿ ದೀಪಗಳು ಸೇರಿದಂತೆ ಇನ್ನಿತರೆ ಮೂಲ ಸೌಲಭ್ಯಗಳ ಬಗ್ಗೆ ಕೇಳಿದರೆ ಅವುಗಳನ್ನು ಕೊಡಲು ಸಿದ್ಧರಿರುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಸಿಪಿಐ ಸಂತೋಷ್‌, ರಾಮ್ಕೋ ಸಿಮೆಂಟ್‌ ಮೈಸೂರು ವಲಯ ವ್ಯವಸ್ಥಾಪಕ ರಾಜಕುಮಾರ್‌, ಬ್ರಾಂಡಿಂಗ್‌ ಮ್ಯಾನೇಜರ್‌ ಸುಹಾಸ್‌, ಮೈಕೆಲ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next