Advertisement
ಮಾಜಿ ವಿದೇಶಾಂಗ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅವರ ಮಧ್ಯಪ್ರವೇಶದಿಂದ ಗೀತಾ ಅಕ್ಟೋಬರ್ 26, 2015 ರಲ್ಲಿ ಭಾರತಕ್ಕೆ ಬರಲು ಸಾಧ್ಯವಾಯಿತು. ಮನೆಯವರ ಸಂಪರ್ಕಿಸಲು ಸಾಧ್ಯವಾಗಿಲ್ಲದ ಕಾರಣದಿಂದ ಇಂದೋರ್ ಮೂಲದ ಎನ್ ಜಿ ಒ ಗೆ ಗೀತಾಳನ್ನು ಸೇರಿಸಲಾಗಿತ್ತು.
Related Articles
Advertisement
ಐದು ವರ್ಷಗಳ ನಿರಂತರವಾಗಿ ಹುಡುಕಾಟದಲ್ಲಿ ಬಿಹಾರ್, ಉತ್ತರ ಪ್ರದೇಶ್, ತೆಲಂಗಾಣ, ರಾಜಸ್ಥಾನಗಳಲ್ಲಿ ಸುಮಾರು 10 ರಿಂದ 12 ಕುಟುಂಬಗಳು ಗೀತಾ ನಮ್ಮ ರಕ್ತ ಸಂಬಂಧಿ ಎಂದು ಹೇಳಿಕೊಂಡ ನಂತರ ಸ್ಕ್ರೀನಿಂಗ್ ಪ್ರಕ್ರಿಯೆಯನ್ನು ಕೂಡ ಮಾಡಲಾಗಿತ್ತು.
ಆನಂದ ಸರ್ವಿಸ್ ಸೊಸೈಟಿ, ಮಗಳು ಕಳೆದುಕೊಂಡಿದ್ದ ಫರ್ಭಾನಿ ಜಿಲ್ಲೆಯ ಜಿಂತೂರ್ ಬಳಿರುವ ಮೀನಾ ವಾಗ್ಮೊರೆ(71) ಅವರಲ್ಲಿ ವಿಚಾರಿಸಿದಾಗ, ತಮ್ಮ ಮಗಳು ರಾಧಾ(ಗೀತಾ)ಳ ಹೊಟ್ಟೆಯಲ್ಲಿ ಸುಟ್ಟ ಗಾಯದ ಕಲೆಯಿದೆ ಎಂದು ಹೇಳಿದ್ದರು. ಅದನ್ನು ಪರಿಶೀಲಿಸಿದಾಗ ಹೊಟ್ಟೆಯಲ್ಲಿ ಸುಟ್ಟ ಗಾಯದ ಕಲೆ ಇರುವುದು ಕಂಡು ಬಂದಿದೆ ಎಂದು ಆನಂದ ಸರ್ವಿಸ್ ಸೊಸೈಟಿಯ ಮುಖ್ಯಸ್ಥ ಜ್ಞಾನೇಂದ್ರ ಪುರೋಹಿತ್ ಮಾಹಿತಿ ನೀಡಿದ್ದಾರೆ.
ಗೀತಾ ಪರ್ಭಾನಿಯನ್ನು ತಲುಪಿ ಸಚ್ ಖಂಡ್ ಎಕ್ಸ್‌ಪ್ರೆಸ್‌ನಲ್ಲಿ ಅಮೃತಸರಕ್ಕೆ ಹತ್ತಿದ ನಂತರ ದೆಹಲಿ-ಲಾಹೋರ್ ಸಂಜೌತಾ ಎಕ್ಸ್‌ಪ್ರೆಸ್‌ಗೆ ಹತ್ತಿದ ಸಾಧ್ಯತೆ ಇದೆ ಎಂದು ಸೆಲ್ಗಾಂವ್ಕರ್ ಹೇಳಿದ್ದಾರೆ.
ಗೀತಾಳನ್ನು ಹಲವು ವರ್ಷಗಳ ನಂತರ ಮೊದಲ ಬಾರಿಗೆ ನೊಡಿದಾಗ ಮೀನಾ ಅವರ ಕಣ್ತುಂಬಿತ್ತು. ಮೀನಾ ಅವರು ವ್ಯಕ್ತ ಪಡಿಸಿದ ಮಾತುಗಳನ್ನು ಗೀತಾ ಅರ್ಥೈಸಿಕೊಳ್ಳಲು ವಿಫಲಳಾದಳು. ಗೀತಾಳಿಗೆ ಮೂಕ ಭಾಷೆಯಲ್ಲಿ(ಸೈನ್ ಲ್ಯಾಂಗ್ವೇಜ್) ಮಾತ್ರ ಸಂವಹನ ಮಾಡಬಲ್ಲಳು ಎಂದು ಪುರೋಹಿತ್ ಹೇಳಿದ್ದಾರೆ. ಗೀತಾ, ಪಹನ್ ಎನ್ ಜಿ ಒ ಅಲ್ಲಿ ಮೂಕ ಭಾಷೆಯನ್ನು ಕಲಿತುಕೊಂಡಿದ್ದಾಳೆ.
ಗೀತಾ ಈಗ ಪರ್ಭಾನಿಯಲ್ಲಿ ಸುಮಾರು ಒಂದೂವರೆ ತಿಂಗಳು ಕಳೆದಿದ್ದಾರೆ ಮತ್ತು ಆಗಾಗ್ಗೆ ಮೀನಾ ಭೇಟಿಯಾಗುತ್ತಾರೆ, ಅವರು ಮರಾಠವಾಡ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.
“ಡಿ ಎನ್ ಎ ಪರೀಕ್ಷೆಯನ್ನು ಯಾವಾಗ ನಡೆಸಬೇಕೆಂದು ಸರ್ಕಾರಿ ಅಧಿಕಾರಿಗಳು ನಿರ್ಧರಿಸಬೇಕು. ಅಲ್ಲಿಯವರೆಗೆ ಗೀತಾ ಪಹಾಲ್ ನಲ್ಲಿ ತರಬೇತಿ ಪಡೆಯುವುದನ್ನು ಮುಂದುವರಿಸುತ್ತಾರೆ” ಎಂದು ಸೆಲ್ಗಾಂವ್ಕರ್ ಹೇಳಿದರು.
ಇನ್ನು, ವಿಶ್ವ ಪ್ರಸಿದ್ಧ ಎಡಿ ವೆಲ್ಫೇರ್ ಟ್ರಸ್ಟ್ ನನ್ನು ನಡೆಸುತ್ತಿರುವ ಮತ್ತು ಗೀತಾ ಅವರೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಂಡ ದಿವಂಗತ ಅಬ್ದುಲ್ ಸತ್ತಾರ್ ಎಧಿಯವರ ಪತ್ನಿ ಬಿಲ್ಕೀಸ್ ಎಧಿ, ಭಾರತೀಯ ಹುಡುಗಿ ಗೀತಾ ಅಂತಿಮವಾಗಿ ಮಹಾರಾಷ್ಟ್ರದಲ್ಲಿ ತನ್ನ ತಾಯಿಯ ಆಶ್ರಯವನ್ನು ಕಂಡುಕೊಂಡಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಆಕೆ ನನ್ನೊಂದಿಗೆ ಆಪ್ತಳಾಗಿದ್ದಳು ಕೊನೆಗೂ ಸಿಹಿ ಸುದ್ದಿಯನ್ನು ನೀಡಿದ್ದಾಳೆ ಎಂದು ಬಿಲ್ಕೀಸ್ ಎಧಿ ಹೇಳಿದ್ದಾರೆ. ಗೀತಾಳನ್ನು ಸುಮಾರು 11-12 ವರ್ಷದವಳಿದ್ದಾಗ ರೈಲ್ವೆ ನಿಲ್ದಾಣವೊಂದರಲ್ಲಿ ಅನಾಥಳಾಗಿ ಸಿಕ್ಕಿದ್ದಳು. ಕರಾಚಿಯಲ್ಲಿರುವ ಅವರ ಸಂಸ್ಥೆಯಲ್ಲಿ ಗೀತಾಲಿಗೆ ಆಶ್ರಯ ನೀಡಿದ್ದರು.
ಆಕೆ ಪಾಕಿಸ್ಥಾನದಲ್ಲಿ ಕೆಲ ಕಾಲ ಒಂಟಿಯಾಗಿದ್ದಳು, ನಮಗೆ ಆಕೆ ಕರಾಚಿಯಲ್ಲಿ ಅನಾಥಳಾಗಿ ಕಂಡು ಬಂದಾಗ ಆಕೆ ತಮ್ಮಲ್ಲಿ ನೋವನ್ನು ಹೇಳಿಕೊಂಡಳು ಮತ್ತು ಆಶ್ರಯವನ್ನು ಬಯಸಿದ್ದಳು ಎಂದು ಎಧಿ ವಿವರಿಸಿದ್ದಾರೆ.
ಓದಿ : ಈ ಶಿವಲಿಂಗಕ್ಕೆ ವರ್ಷದ ಎರಡು ಬಾರಿ ಮಾತ್ರ ಪೂಜೆ! ಸೀತಾನದಿಯಲ್ಲಿದೆ ಪುರಾಣ ಪ್ರಸಿದ್ದ ಶಿವಲಿಂಗ